ಅಯೋಧ್ಯೆಯಲ್ಲಿರುವ ದೇವಸ್ಥಾನ, ಮಠಗಳು ಹಾಗೂ ಧಾರ್ಮಿಕ ಸ್ಥಳಗಳು ಭರಿಸಬೇಕಾದ ಕರ ರದ್ದು !

ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಆದೇಶ

ಯೋಗಿ ಆದಿತ್ಯನಾಥ

ಅಯೋಧ್ಯೆ (ಉತ್ತರಪ್ರದೇಶ) – ಅಯೋಧ್ಯೆಯಲ್ಲಿನ ದೇವಸ್ಥಾನ, ಮಠಗಳು ಹಾಗೂ ಧಾರ್ಮಿಕ ಸ್ಥಳಗಳು ಭರಿಸಬೇಕಾದ ವ್ಯಾವಹಾರಿಕ ಕರವನ್ನು ರದ್ದುಗೊಳಿಸುವ ಆದೇಶವನ್ನು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಅಲ್ಲಿನ ನಗರಪಾಲಿಕೆಗೆ ನೀಡಿದರು. ಯೋಗಿ ಆದಿತ್ಯನಾಥರು ಎರಡನೇ ಬಾರಿ ಮುಖ್ಯಮಂತ್ರಿ ಪದವಿಯನ್ನು ಸ್ವೀಕರಿಸಿದ ನಂತರ ಮೊದಲಿಗೆ ಅಯೋಧ್ಯೆಗೆ ಭೇಟಿ ನೀಡಿದರು. ಆಗ ಅವರು ಈ ನಿಣರ್ಯವನ್ನು ತೆಗೆದುಕೊಂಡರು. ಅಯೋಧ್ಯಾ ನಗರಪಾಲಿಕೆಯ ಸ್ಥಾಪನೆಯ ನಂತರ ಅಲ್ಲಿನ ದೇವಸ್ಥಾನಗಳು, ಮಠಗಳು ಹಾಗೂ ಇತರ ಧಾರ್ಮಿಕ ಸ್ಥಳಗಳಿಗೆ ವ್ಯಾವಹಾರಿಕ ಕರವನ್ನು ಭರಿಸಬೇಕಾಗುತ್ತಿತ್ತು. ಇದರಿಂದ ಲಕ್ಷಾಂತರ ರೂಪಾಯಿಗಳ ಆದಾಯ ದೊರೆಯುತ್ತಿತ್ತು. ಈ ಕರವನ್ನು ರದ್ದುಗೊಳಿಸುವ ಬಗ್ಗೆ ದೇವಸ್ಥಾನ ಹಾಗೂ ಮಠಗಳ ಪ್ರಮುಖರು ಅನೇಕ ಬಾರಿ ಮನವಿ ಮಾಡಿದ್ದರು. ಇದರಿಂದ ಈಗ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ. ಅಯೋಧ್ಯೆಯಲ್ಲಿನ ಭೂಮಿಪೂಜೆ, ಅಂದರೆ ಶಿಲಾನ್ಯಾಸದ ನಂತರ ನಡೆಯುವ ಇದೇ ಮೊದಲನೇಯ ರಾಮನವಮಿಯಾಗಿದೆ. ಆದುದರಿಂದ ಈ ರಾಮನವಮಿಯನ್ನು  ವಿಜ್ರಂಭಣೆಯಿಂದ ಆಚರಿಸಲು ಮುಖ್ಯಮಂ‌ತ್ರಿ ಯೋಗಿ ಆದಿತ್ಯನಾಥರು ಆದೇಶಿಸಿದ್ದಾರೆ. ಈ ರಾಮನವಮಿಯ ಆಯೋಜನೆಯನ್ನು ಹೇಗೆ ಮಾಡಬೇಕು ? ಎಂಬುದರ ಸಂದರ್ಭದಲ್ಲಿಅವರು ಅಧಿಕಾರಿಗಳು ಹಾಗೂ ದೇವಸ್ಥಾನದ ಪ್ರಮುಖರ ಸಭೆಯನ್ನು ನಡೆಸಿದ್ದರು.