ಯೋಗಿ ಆದಿತ್ಯನಾಥರ ಜಯಭೇರಿಯಿಂದ ಕೊಲ್ಲೀ ರಾಷ್ಟ್ರಗಳ ‘ಅಲ್-ಜಜೀರಾ’ ವಾರ್ತಾವಾಹಿನಿಗೆ ಅಸೂಯೆ
|
ದೋಹಾ(ಕತಾರ) – ಉತ್ತರಪ್ರದೇಶ ವಿಧಾನಸಭೆಯ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಮುಖಂಡತ್ವದಲ್ಲಿ ಭಾಜಪಗೆ ಬಹುದೊಡ್ಡ ಜಯ ದೊರಕಿರುವುದರಿಂದ ಹಿಂದೂ ದ್ವೇಷಿ ಕೊಲ್ಲಿ ರಾಷ್ಟ್ರಗಳ ‘ಅಲ್-ಜಜೀರಾ’ ಈ ವಾರ್ತಾ ವಾಹಿನಿಗೆ ಅಸೂಯೆ ನಿರ್ಮಾಣವಾಗಿದೆ. ವಾರ್ತಾ ವಾಹಿನಿಯ ಜಾಲತಾಣದಲ್ಲಿ ‘ಕಟ್ಟರವಾದಿ ಹಿಂದೂ ಸಾಧುವಿನ ರಾಜಕೀಯ ಬಲ ಹೆಚ್ಚಾಯಿತು’ ಈ ಶಿರೋನಾಮೆಯಲ್ಲಿ ಹಿಂದೂ ವಿರೋಧಿ ಲೇಖನವನ್ನು ಪ್ರಕಟಿಸಲಾಗಿದೆ.
ಲೇಖನದಲ್ಲಿ ಹೇಳಲಾಗಿದೆ,
೧. ಉತ್ತರಪ್ರದೇಶದ ಫಲಿತಾಂಶದಿಂದ ೨೦೨೪ ರಲ್ಲಿ ಜರುಗುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜಯ ಖಚಿತವೆಂದು ನಂಬಲಾಗುತ್ತಿದೆ. ಅವರ ರಾಜಕೀಯ ಸನ್ಯಾಸದ ಬಳಿಕ ಯೋಗಿ ಆದಿತ್ಯನಾಥರಿಗೆ ಪ್ರಧಾನಮಂತ್ರಿ ಹುದ್ದೆಯನ್ನು ನೀಡಲಾಗುವುದು, ಎಂದು ಚರ್ಚಿಸಲಾಗುತ್ತಿದೆ.
೨. ಹೀಗಿದ್ದರೂ, ‘ಯೋಗಿ ಆದಿತ್ಯನಾಥ ಪ್ರತ್ತೇಕವಾದಿ ಮುಖಂಡರಾಗಿದ್ದಾರೆ’, ಎಂದು ಅನೇಕ ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. (ಇಂತಹ ರಾಜಕೀಯ ವಿಶ್ಲೇಷಕರ ಹೆಸರುಗಳನ್ನು ಘೋಷಿಸಬೇಕು, ಇಲ್ಲವಾದರೆ ರಾಜಕೀಯ ವಿಶ್ಲೇಷಕರ ಹೆಸರಿನಲ್ಲಿ ತಮ್ಮ ಹಿಂದೂದ್ವೇಷದ ಕೋಪವನ್ನು ತಣಿಸುವ ಒಂದು ಪ್ರಕಾರವೆಂದು ಹೇಳಬೇಕಾಗುವುದು – ಸಂಪಾದಕರು)
೩. ಒಂದು ಕಾಲದಲ್ಲಿ ಯೋಗಿ ಆದಿತ್ಯನಾಥರ ಒಂದು ಖಾಸಗಿ ಹಿಂದೂ ಸೈನ್ಯ ಇತ್ತು. ಅವರ ಅಧಿಕಾರ ಅವಧಿಯಲ್ಲಿ ಉತ್ತರ ಪ್ರದೇಶದ ವಿವಿಧ ಆರೋಪವಿರುವ ೧೫೦ ಗೂಂಡಾಗಳು ಮತ್ತು ಅಪರಾಧಿಗಳನ್ನು ಹತ್ಯೆ ಮಾಡಲಾಯಿತು. ಈ ಕುರಿತು ಒಂದು ಕಡೆ ಅವರನ್ನು ಟೀಕಿಸಲಾಯಿತು. ಮತ್ತೊಂದು ಕಡೆ ಅವರ ಪಕ್ಷಕ್ಕೆ ಅನೇಕ ಮತಗಳು ದೊರಕಿದವು.
೪. ಉತ್ತರಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿರುವ ಮುಸಲ್ಮಾನ ಅಲ್ಪಸಂಖ್ಯಾತರು ಯೋಗಿ ಆದಿತ್ಯನಾಥರನ್ನು ಭಾಜಪದ ‘ಹಿಂದೂ ಫಸ್ಟ’ ಈ ಧೋರಣೆಯ ನೈಜತೆಯನ್ನು ಅರಿತಿದ್ದಾರೆ. ಇದರಿಂದ ರಾಜ್ಯದಲ್ಲಿ ಹಿಂದೂ ಮತ್ತು ಮುಸಲ್ಮಾನ ಸಮಾಜದಲ್ಲಿ ಆಗಾಗ ಒತ್ತಡ ನಿರ್ಮಾಣವಾಗಿದೆ. (ಉತ್ತರಪ್ರದೇಶದ ಅಲ್ಪಸಂಖ್ಯಾತರಿಗೆ ಒಂದೆಡೆ ‘ದೊಡ್ಡ ಪ್ರಮಾಣದಲ್ಲಿ’ ಮತ್ತು ಮತ್ತೊಂದೆಡೆ ‘ಅಲ್ಪಸಂಖ್ಯಾತರು’ ಎಂದು ಹೇಳುವುದು, ಇದರಿಂದ ‘ಅಲ್-ಜಜೀರಾ’ ವಾರ್ತಾ ವಾಹಿನಿಯ ಬೌದ್ಧಿಕ ದಿವಾಳಿತನ ಸ್ಪಷ್ಟವಾಗುತ್ತದೆ. ವಸ್ತುನಿಷ್ಠವಾಗಿ ನೋಡಿದರೆ ಉತ್ತರ ಪ್ರದೇಶದಲ್ಲಿ ಶೇ. ೨೦ ರಷ್ಟು ಜನತೆ ಮುಸಲ್ಮಾನರಿರುವಾಗ ಅವರನ್ನು ‘ಅಲ್ಪಸಂಖ್ಯಾತರು’ ಎಂದು ಹೇಳುವುದು ಹಾಸ್ಯಾಸ್ಪದವಲ್ಲವೇ ?- ಸಂಪಾದಕರು)