ರಾಷ್ಟ್ರವಾದಕ್ಕೆ ಜನತೆಯ ತೀರ್ಪು ! – ಯೋಗಿ ಆದಿತ್ಯನಾಥ

ಯೋಗಿ ಆದಿತ್ಯನಾಥ

ಲಕ್ಷ್ಮಣಪುರಿ – ಉತ್ತರಪ್ರದೇಶದಲ್ಲಿ ಭಾರಿ ಯಶಸ್ಸಿನ ನಂತರ ಯೋಗಿ ಆದಿತ್ಯನಾಥರು ಭಾಜಪದ ನೇತಾರರು ಹಾಗೂ ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿದರು. ಈ ಸಮಯದಲ್ಲಿ ವಿಜಯೋತ್ಸವವನ್ನು ಆಚರಿಸುತ್ತಿರುವ ಕಾರ್ಯಕರ್ತರು ಕೇಸರಿ ಬಣ್ಣವನ್ನು ಎರಚಿದರು. ಆ ಸಮಯದಲ್ಲಿ ಕಾರ್ಯಕರ್ತರನ್ನು ಸಂಬೋಧಿಸುತ್ತ ಯೋಗಿ ಆದಿತ್ಯನಾಥರು ‘ನಾಲ್ಕೂ ರಾಜ್ಯಗಳಲ್ಲಿ ಜನತೆಯು ಕುಟುಂಬ ರಾಜಕಾರಣವನ್ನು ನಿರಾಕರಿಸಿದೆ. ನಾಲ್ಕೂ ರಾಜ್ಯಗಳಲ್ಲಿ ಮಾಡಲಾದ ವಿಕಾಸ ಮತ್ತು ಆಡಳಿತಕ್ಕೆ ಜನತೆಯು ಆಶೀರ್ವದಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರಂತಹ ನೇತೃತ್ವವಿದ್ದರೆ ಬಹುಮತ ದೊರೆಯುತ್ತದೆ. ಜನತೆಯು ಉತ್ತರಪ್ರದೇಶದಲ್ಲಿ ರಾಷ್ಟ್ರವಾದ, ಸುರಕ್ಷೆ, ವಿಕಾಸ ಮತ್ತು ಒಳ್ಳೆಯ ಆಡಳಿತಕ್ಕೆ ತೀರ್ಪು ನೀಡಿದೆ. ಉತ್ತರಪ್ರದೇಶದ ಚುನಾವಣೆಯ ಮೇಲೆ ಜಗತ್ತಿನ ಗಮನವಿತ್ತು. ಪ್ರಧಾನಮಂತ್ರಿ ಮೋದಿಯವರು ಕೊರೋನಾ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವಾಗ ಅನೇಕ ಜನರು ಇದರ ವಿರುದ್ಧ ಭ್ರಮೆಯನ್ನುಂಟು ಮಾಡುವ ಪ್ರಚಾರ ಮಾಡಿದರು. ಇಲೆಕ್ಟ್ರಾನಿಕ ಮತದಾನ ಯಂತ್ರದಲ್ಲಿ ಗೊಂದಲವಾಗಿದೆ ಎಂದು ಆರೋಪಿಸಿದರು. ಜನತೆಯು ಈ ತಪ್ಪು ಪ್ರಚಾರವನ್ನು ದುರ್ಲಕ್ಷಿಸಿ ಭಾಜಪವನ್ನು ಗೆಲ್ಲಿಸಿದೆ. ನಾನು ಜನತೆಗೆ ಆಭಾರಿಯಾಗಿದ್ದೇನೆ’ ಎಂದು ಹೇಳಿದರು. ವಿಜಯೋತ್ಸವವು ಜಯ ಶ್ರೀರಾಮ ಘೋಷಣೆಯೊಂದಿಗೆ ನಡೆಯಿತು.