ಸಾಧನೆ ಉತ್ತಮವಾಗಿ ಆಗಲು ಆಯುರ್ವೇದಕ್ಕನುಸಾರ ಆಚರಣೆ ಮಾಡುವ ಅವಶ್ಯಕತೆ
‘ಶಂಕರನ ಪ್ರಾಪ್ತಿಗಾಗಿ ಹಿಮಾಲಯದ ಕನ್ಯೆ ಪಾರ್ವತಿಯು ಅತ್ಯಂತ ಕಠಿಣ ತಪಸ್ಸನ್ನು ಮಾಡುತ್ತಾಳೆ. ಅವಳು ನೀರು-ಆಹಾರವನ್ನು ತ್ಯಜಿಸುತ್ತಾಳೆ. ಸಂಸ್ಕೃತ ಭಾಷೆಯಲ್ಲಿ ‘ಪರ್ಣ’ ಅಂದರೆ ಎಲೆ, ಪಾರ್ವತಿಯು ತಪಸ್ಸು ಮಾಡುತ್ತಿರುವಾಗ ಮರದ ಎಲೆ ಕೂಡ ಸೇವಿಸುತ್ತಿರಲಿಲ್ಲ; ಆದ್ದರಿಂದ ಅವಳಿಗೆ ‘ಅಪರ್ಣಾ (ಎಲೆಯನ್ನೂ ಸೇವಿಸದಿರುವವಳು)’ ಎಂದು ಹೆಸರು ಪ್ರಾಪ್ತವಾಯಿತು.