ಸನಾತನ ಯಷ್ಟಿಮಧು (ಜೇಷ್ಠಮಧು) ಚೂರ್ಣದ ಔಷಧದ ಉಪಯೋಗ

ಸನಾತನದ ಆಯುವೇದಿಕ ಔಷಧಿಗಳು

೧. ಕೆಮ್ಮು, ಗಂಟಲು ನೋವು, ಗಂಟಲು ಕೆರೆತ, ಗಂಟಲು ಕೂರುವುದು, ಗಂಟಲಿನಿಂದ ಕಫ ಹೊರಗೆ ಬೀಳದಿರುವುದು ಮತ್ತು ಬಾಯಿ ಹುಣ್ಣು : ಕಾಲು ಚಮಚದಷ್ಟು ಜೇಷ್ಠಮಧು ಚೂರ್ಣವನ್ನು ದಿನಕ್ಕೆ ೩-೪ ಬಾರಿ ಜಗಿದು ತಿನ್ನಬೇಕು. (೫ ದಿನ)

೨. ಮಲಬದ್ಧತೆ : ಎರಡು ಊಟದ ಮೊದಲು ೧ ಚಮಚ ಜೇಷ್ಠಮಧು ಚೂರ್ಣ ಮತ್ತು ೧ ಚಿಟಿಕೆ ಉಪ್ಪು ಅರ್ಧ ಬಟ್ಟಲು ಉಗುರುಬೆಚ್ಚ ನೀರಿನಲ್ಲಿ ಸೇರಿಸಿ ಕುಡಿಯಬೇಕು. (೧೫ ದಿನ)

೩. ಉಷ್ಣತೆಯ ರೋಗ (ಉಷ್ಣ ಪದಾರ್ಥಗಳ ತೊಂದರೆಯಾಗುವುದು, ಬಾಯಿ ಹುಣ್ಣು, ಮೈಯೆಲ್ಲ ಉರಿಯುವುದು, ಮೂತ್ರಮಾರ್ಗದಲ್ಲಿ ಉರಿಯುವುದು, ಮೈಮೇಲೆ ಬೊಕ್ಕೆಗಳಾಗುವುದು, ತಲೆ ಸುತ್ತುವುದು ಇತ್ಯಾದಿಗಳು) : ದಿನಕ್ಕೆ ೨-೩ ಬಾರಿ ೧ ಚಮಚ ಜೇಷ್ಠಮಧು ಚೂರ್ಣ ೧ ಚಮಚ ತುಪ್ಪದಲ್ಲಿ ತೆಗೆದುಕೊಳ್ಳಬೇಕು. (೧೫ ದಿನ)

೧. ಅಳತೆಗಾಗಿ ಚಹಾದ ಚಮಚವನ್ನು ಉಪಯೋಗಿಸಬೇಕು.

೨. ಇಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಲಾಗಿದೆ. ೭ ದಿನಗಳಲ್ಲಿ ಗುಣಮುಖವಾಗದಿದ್ದರೆ ವೈದ್ಯರ ಸಲಹೆಯನ್ನು ಪಡೆಯಬೇಕು.

೩. ಸನಾತನ ಯಷ್ಟಿಮಧು (ಜೇಷ್ಠಮಧು) ಚೂರ್ಣವು ಲಭ್ಯವಿದೆ. ಇದರಿಂದ ಇತರ ರೋಗಗಳ ಮೇಲೆ ವಿವರವಾದ ಉಪಯೋಗವನ್ನು ಆ ಡಬ್ಬಿಯಲ್ಲಿನ ಪತ್ರದಲ್ಲಿ ಕೊಡಲಾಗಿದೆ.

೪. ಇಲ್ಲಿ ಕೊಟ್ಟಿರುವ ಮಾಹಿತಿ ಮತ್ತು ಪತ್ರದಲ್ಲಿನ ಮಾಹಿತಿಗಳಲ್ಲಿ ವ್ಯತ್ಯಾಸ ಇರಬಹುದು. ಎರಡರಲ್ಲಿ ಯಾವುದೇ ರೀತಿಯ ಔಷಧದ ಉಪಯೋಗವನ್ನು ಮಾಡಬಹುದು.

– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೮.೮.೨೦೨೨)