ಸನಾತನದ ಉಶೀರ (ಲಾವಂಚ) ಚೂರ್ಣದ ಔಷಧೀಯ ಉಪಯೋಗ

ಸನಾತನದ ಆಯುರ್ವೇದ ಔಷಧಿಗಳು

೧. ಉಷ್ಣತೆಯ ತೊಂದರೆಗಳು (ಉಷ್ಣ ಪದಾರ್ಥ ಆಗದಿರುವುದು, ಬಾಯಿ ಹುಣ್ಣು, ಶರೀರ ಉರಿಯುವುದು, ಮೂತ್ರ ಮಾರ್ಗದಲ್ಲಿ ಉರಿ ಬರುವುದು, ಮೈ ಮೇಲೆ ಗುಳ್ಳೆ ಬರುವುದು, ತಲೆ ಸುತ್ತು, ಕೂದಲು ಉದುರುವುದು ಇತ್ಯಾದಿ) : ಕಾಲು ಚಮಚ ಲಾವಂಚದ ಪುಡಿಯನ್ನು ಬಟ್ಟಲಿನಷ್ಟು ನೀರಿನಲ್ಲಿ ಸೇರಿಸಿ ದಿನದಲ್ಲಿ ೩-೪ ಸಲ ಕುಡಿಯಬೇಕು. (೭ ದಿನ)

೨. ಹೊಟ್ಟೆ ತೊಳೆಸುವುದು, ವಾಂತಿ, ಭೇದಿ ಆಗುವುದು ಮತ್ತು ಮಲ ವಿಸರ್ಜನೆಯ ಜಾಗದಲ್ಲಿ ರಕ್ತ ಬರುವುದು : ಈ ಮೇಲಿನಂತೆ ತೆಗೆದುಕೊಳ್ಳುವುದು. (೭ ದಿನ)

೩. ಬಿಸಿಲಿನಲ್ಲಿ ಅಥವಾ ಅಕ್ಟೋಬರನಲ್ಲಿ ವಾತಾವರಣದಲ್ಲಿನ ಉಷ್ಣತೆಯ ತೊಂದರೆ ಆಗಬಾರದು, ಅದಕ್ಕಾಗಿ : ೧ ಲೀಟರ ನೀರಿನಲ್ಲಿ ಅರ್ಧ ಚಮಚದಂತೆ ಲಾವಂಚದ ಪುಡಿ ಹಾಕಿಡುವುದು. ಬಾಯಾರಿಕೆ ಆದಾಗ ಇದೇ ನೀರು ಕುಡಿಯುವುದು. (ಬಿಸಿಲಿನಲ್ಲಿ ಹಾಗೂ ಅಕ್ಟೋಬರ್.ನಲ್ಲಿ)

೧. ಅಳತೆಗಾಗಿ ಚಹಾದ ಚಮಚವನ್ನು ಉಪಯೋಗಿಸಿ.

೨. ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ೭ ದಿನಗಳಲ್ಲಿ ಗುಣಮುಖರಾಗದೇ ಇದ್ದಲ್ಲಿ ವೈದ್ಯರ ಸಲಹೆಯನ್ನು ಪಡೆಯಿರಿ.

೩. ಸನಾತನದ ಉಶೀರ (ಲಾವಂಚ) ಚೂರ್ಣ ಲಭ್ಯವಿದೆ. ಇತರ ಕಾಯಿಲೆಗಳಿಗೆ ಇದರ ಉಪಯೋಗವನ್ನು ಅದರ ಡಬ್ಬಿಯ ಜೊತೆಗಿನ ಪತ್ರಕ ನೀಡಲಾಗಿದೆ.

೪. ಇಲ್ಲಿ ನೀಡಲಾಗಿರುವ ಮಾಹಿತಿ ಹಾಗೂ ಪತ್ರಕದಲ್ಲಿನ ಮಾಹಿತಿಯ ನಡುವೆ ವ್ಯತ್ಯಾಸ ಇರಬಹುದು. ಎರಡರಲ್ಲಿ ಯಾವುದಾದರು ಔಷಧಿಯನ್ನು ಉಪಯೋಗಿಸಿದರೂ ನಡೆಯುತ್ತದೆ.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.