‘ಉತ್ತಮ ಪಚನಕ್ರಿಯೆ’, ಇದು ಕೇವಲ ದೇಹದ ಆರೋಗ್ಯಕ್ಕೆ ಮಾತ್ರವಲ್ಲ, ಮನಸ್ಸಿನ ಆರೋಗ್ಯಕ್ಕೂ ಅಗತ್ಯ !

‘ನನ್ನ ಓರ್ವ ವೈದ್ಯಸ್ನೇಹಿತನು ಹೇಳಿದ ಒಂದು ಪ್ರಸಂಗವನ್ನು ಅವನ ಮಾತುಗಳಲ್ಲಿ ನೀಡುತ್ತಿದ್ದೇನೆ

ವೈದ್ಯ ಮೇಘರಾಜ ಪರಾಡಕರ್

‘ಒಮ್ಮೆ ನನಗೆ ತುಂಬಾ ನಿರಾಶೆಯಾಗಿತ್ತು. ದಿನನಿತ್ಯದ ಓಡಾಟದಿಂದ ನಾನು ಎಷ್ಟು ಬೇಸತ್ತಿದ್ದೆನೆಂದರೆ ನನಗೆ ‘ಮನೆ ಬಿಟ್ಟು ದೂರ ಹೋಗೋಣ’, ಎಂದೆನಿಸುತ್ತಿತ್ತು. ಆ ಸಮಯದಲ್ಲಿ ನಾನು ಸಹಜವಾಗಿ ನನ್ನ ಆಯುರ್ವೇದಲ್ಲಿನ ಗುರುಗಳಾದ ವೈದ್ಯ ಅನಂತ ಧರ್ಮಾಧಿಕಾರಿ ಇವರನ್ನು ಭೇಟಿಯಾಗಿ ನನ್ನ ಮನಸ್ಸಿನ ಸ್ಥಿತಿಯನ್ನು ಹೇಳಿದೆನು. ಅದಕ್ಕೆ ಅವರು, “ಅರೇ ಏನು ಆಗಿಲ್ಲ ! ನಿನ್ನ ಅಗ್ನಿಯು ಮಂದವಾಗಿದೆ. ಒಂದು ಹೊತ್ತು ಉಪವಾಸವನ್ನು ಮಾಡು” ಎಂದು ಹೇಳಿದರು …. ಮತ್ತು ಏನು ಆಶ್ಚರ್ಯ ! ಹಾಗೆ ಮಾಡಿದ ನಂತರ ನನ್ನ ಮನಸ್ಸಿನ ಆ ವಿಚಾರವು ಸಂಪೂರ್ಣ ಹೊರಟು ಹೋಯಿತು ಮತ್ತು ನನಗೆ ಉತ್ಸಾಹವೆನಿಸಿತು.’ ಇದರಿಂದ ಪಚನಶಕ್ತಿಯ ಮಹತ್ವವು ಗಮನಕ್ಕೆ ಬರುತ್ತದೆ.’ – ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೪.೯.೨೦೨೨)