ಆಯುರ್ವೇದವು ತಡವಾಗಿ ಅಲ್ಲ, ಆದರೆ ತಕ್ಷಣ ಗುಣಪಡಿಸುವ ಶಾಸ್ತ್ರವಾಗಿದೆ !
ಗುರುಕುಲ ಶಿಕ್ಷಣಪದ್ಧತಿಯು ಲೋಪಗೊಂಡಿದ್ದರಿಂದ ಆಯುರ್ವೇದದ ಪರಿಪೂರ್ಣ ಜ್ಞಾನವಿರುವ ವೈದ್ಯರ ಸಂಖ್ಯೆಯು ತುಲನೆಯಲ್ಲಿ ಕಡಿಮೆ ಇದೆ. ಹೆಚ್ಚಿನ ವೈದ್ಯರು ರೋಗಿಯ ಪ್ರಕೃತಿ, ರೋಗದ ಕಾರಣಗಳು ಇತ್ಯಾದಿಗಳ ಬಗ್ಗೆ ವಿಚಾರ ಮಾಡದೇ ಅಲೋಪತಿಯ ಆಧಾರದಲ್ಲಿ ಆಯುರ್ವೇದಿಕ ಉಪಚಾರ ನೀಡುತ್ತಿರುವುದರಿಂದ ಮತ್ತು ರೋಗಿಯೂ ಪಥ್ಯ ಇತ್ಯಾದಿಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸದಿರುವುದರಿಂದ ‘ಆಯುರ್ವೇದಿಕ ಔಷಧಿಗಳಿಂದ ತಡವಾಗಿ ಗುಣಮುಖವಾಗುತ್ತದೆ’, ಎಂಬ ತಪ್ಪು ತಿಳುವಳಿಕೆಯು ರೂಢಿಗೆ ಬಂದಿದೆ.’