೧. ಪಾರ್ವತಿಗೆ ‘ಅಪರ್ಣಾ’ ಮತ್ತು ‘ಉಮಾ’ ಎಂದು ಹೇಳಲು ಕಾರಣಗಳು
‘ಶಂಕರನ ಪ್ರಾಪ್ತಿಗಾಗಿ ಹಿಮಾಲಯದ ಕನ್ಯೆ ಪಾರ್ವತಿಯು ಅತ್ಯಂತ ಕಠಿಣ ತಪಸ್ಸನ್ನು ಮಾಡುತ್ತಾಳೆ. ಅವಳು ನೀರು-ಆಹಾರವನ್ನು ತ್ಯಜಿಸುತ್ತಾಳೆ. ಸಂಸ್ಕೃತ ಭಾಷೆಯಲ್ಲಿ ‘ಪರ್ಣ’ ಅಂದರೆ ಎಲೆ, ಪಾರ್ವತಿಯು ತಪಸ್ಸು ಮಾಡುತ್ತಿರುವಾಗ ಮರದ ಎಲೆ ಕೂಡ ಸೇವಿಸುತ್ತಿರಲಿಲ್ಲ; ಆದ್ದರಿಂದ ಅವಳಿಗೆ ‘ಅಪರ್ಣಾ (ಎಲೆಯನ್ನೂ ಸೇವಿಸದಿರುವವಳು)’ ಎಂದು ಹೆಸರು ಪ್ರಾಪ್ತವಾಯಿತು. ಸಂಸ್ಕೃತದಲ್ಲಿ ‘ಮಾ’ ಎಂದರೆ ‘ಬೇಡ’. ಹೆಣ್ಣುಮಗಳಿಗೆ ಅಕ್ಕರೆಯಿಂದ ‘ಉ’ ಎಂದು ಕರೆಯುತ್ತಾರೆ. ಪಾರ್ವತಿಯ ತಪಸ್ಸು ನೋಡಿ ಆಕೆಯ ತಾಯಿಗೆ ಆಕೆಯ ಬಗ್ಗೆ ಚಿಂತೆ ಆಗುತ್ತದೆ; ಆದ್ದರಿಂದ ಆಕೆ ಅವಳಿಗೆ ‘ಹೆ, ಉ ! ಮಾ’, ಅಂದರೆ ‘ಅರೇ ಮುದ್ದು ಕಂದ, ಇಷ್ಟು ಕಠಿಣ ತಪಸ್ಸು ಮಾಡದಿರು !’ ಎಂದು ಹೇಳುತ್ತಾರೆ. ಅದಕ್ಕಾಗಿ ಪಾರ್ವತಿಗೆ ‘ಉಮಾ’ ಎಂದು ಹೇಳುತ್ತಾರೆ.
೨. ಭಗವಾನ ಶಂಕರನು ಪಾರ್ವತಿಗೆ ಸಾಧನೆಯನ್ನು ಮಾಡುವಾಗ ಶರೀರದ ಕಾಳಜಿ ವಹಿಸಲು ಹೇಳುವುದು
ಪಾರ್ವತಿಯ ತಪಶ್ಚರ್ಯಕ್ಕೆ ಪ್ರಸನ್ನನಾದ ಭಗವಾನ ಶಂಕರನು ಬ್ರಹ್ಮಚಾರಿಯ ರೂಪವನ್ನು ತಾಳಿ ಆಕೆಯ ಬಳಿ ಹೋಗಿ ಆಕೆಗೆ ಶರೀರದ ಕಾಳಜಿ ತೆಗೆದುಕೊಳ್ಳುವಂತೆ ಹೇಳುತ್ತಾನೆ. ಮಹಾಕವಿ ಕಾಳಿದಾಸನ ಕುಮಾರಸಂಭವ ಈ ಮಹಾಕಾವ್ಯದಲ್ಲಿ ಬ್ರಹ್ಮಚಾರಿಯ ವೇಶದಲ್ಲಿದ್ದ ಶಂಕರನ ಬಾಯಿಯಿಂದ ಈ ಮುಂದಿನ ವಾಕ್ಯವು ಬಂದಿದೆ.
ಅಪಿ ಕ್ರಿಯಾರ್ಥಂ ಸುಲಭಂ ಸಮಿತ್ಕುಶಮ್ ಜಲಾನ್ಯಪಿ ಸ್ನಾನವಿಧಿಕ್ಷಮಾಣಿ ತೇ |
ಅಪಿ ಸ್ವಶಕ್ತ್ಯಾ ತಪಸಿ ಪ್ರವರ್ತಸೇ ಶರೀರಮಾದ್ಯಂ ಖಲು ಧರ್ಮಸಾಧನಮ್ || – ಕುಮಾರಸಮ್ಭವ, ಸರ್ಗ ೫, ಶ್ಲೋಕ ೩೩
ಅರ್ಥ : ಅರೇ ಪಾರ್ವತಿ ! ನಿನಗೆ ಯಾಗಾದಿ ಕರ್ಮಗಳಿಗೆ ಸಮಿಧೆ ಸುಲಭವಾಗಿ ಸಿಗುತ್ತಿದೆಯಲ್ಲ ! ನಿನಗೆ ಸ್ನಾನಕ್ಕಾಗಿ ಸೂಕ್ತವಾಗ ಬಿಸಿ ನೀರು ಸಿಗುತ್ತಿದೆಯಲ್ಲ ! ನಿನ್ನ ತಪಸ್ಸು ನಿನ್ನ ಶಾರೀರಿಕ ಕ್ಷಮತೆಗನುಸಾರವೇ ಆಗುತ್ತಿದೆಯಲ್ಲ! (ತಪಸ್ಸು ಮಾಡುವಾಗ ಶರೀರದ ಕಾಳಜಿಯನ್ನೂ ವಹಿಸಬೇಕು); ಏಕೆಂದರೆ ‘ಶರೀರವು ‘ಧರ್ಮ’ ಈ ಪುರುಷಾರ್ಥದ ಎಲ್ಲಕ್ಕಿಂತ ಮಹತ್ವದ ಸಾಧನವಾಗಿದೆ’, ಅಂದರೆ ‘ಶರೀರ ಇದ್ದರೇ ಮಾತ್ರ ಧರ್ಮ ಅಥವಾ ಸಾಧನೆ ಮಾಡಲು ಸಾಧ್ಯವಾಗುತ್ತದೆ’.
೩. ಶಂಕರನು ಪಾರ್ವತಿಗೆ ನೀಡಿದ ಉಪದೇಶವು ಎಲ್ಲಾ ಸಾಧಕರಿಗಾಗಿ ಮಾರ್ಗದರ್ಶಕವಾಗಿದೆ
ಈಶ್ವರ ಪ್ರಾಪ್ತಿಯ ಮಾರ್ಗದಲ್ಲಿ ಸಾಗುವ ಪ್ರತಿಯೊಬ್ಬ ಸಾಧಕನು ‘ಶರೀರಮಾದ್ಯಂ ಖಲು ಧರ್ಮಸಾಧನಮ್ |’ ಅಂದರೆ ‘ಶರೀರ ಇದ್ದರೆ ಮಾತ್ರ ಧರ್ಮ ಅಥವಾ ಸಾಧನೆ ಮಾಡಲು ಸಾಧ್ಯವಾಗುತ್ತದೆ’, ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಸಾಧನೆಗಾಗಿ ಶರೀರ ಆರೋಗ್ಯವಂತವಾಗಿರಬೇಕು. ಅದಕ್ಕಾಗಿ ಆಯುರ್ವೇದಕ್ಕನುಸಾರ ಆಚರಣೆ ಮಾಡಬೇಕು. ‘ಆಯುರ್ವೇದಕ್ಕನುಸಾರ ಆಚರಣೆ ಅಂದರೇನು’, ಎಂಬುದನ್ನು ಸನಾತನದ ಗ್ರಂಥ ‘ಆಯುರ್ವೇದವನ್ನು ಪಾಲಿಸಿ ಔಷಧಿಗಳಿಲ್ಲದೇ ಆರೋಗ್ಯವಂತರಾಗಿ!’ ಇದರಲ್ಲಿ ನೀಡಲಾಗಿದೆ.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೯.೯.೨೦೨೨)