ಇಂದಿನಿಂದ ಕನಿಷ್ಠ ೩೦ ನಿಮಿಷಗಳ ಕಾಲ ನಿಯಮಿತವಾಗಿ ವ್ಯಾಯಾಮ ಮಾಡುವ ಗುರಿಯನ್ನು ಇಟ್ಟುಕೊಳ್ಳಿ !

‘ವ್ಯಾಯಾಮವನ್ನು ನಿಯಮಿತವಾಗಿ ಮಾಡಿದರೆ ಮಾತ್ರ ಅದರ ಲಾಭಗಳು ಕಂಡುಬರುತ್ತದೆ. ’ವ್ಯಾಯಾಮ ಮಾಡಿದೆ ಮಾತ್ರ ಅದರಿಂದ ಯಾವುದೇ ಲಾಭವಾಗಲಿಲ್ಲ’, ಹೀಗಾಗುವುದೇ ಇಲ್ಲ. ‘ಯಾವುದಾದರೊಂದು ಅಂಶವನ್ನು ಅಂಗೀಕರಿಸಲು ಕನಿಷ್ಠ ೨೧ ದಿನಗಳ ಕಾಲ ಪ್ರತಿದಿನ ಮಾಡಬೇಕು’ ಎಂದು ಮನೋವಿಜ್ಞಾನ ಹೇಳುತ್ತದೆ. ಆದ್ದರಿಂದ ಇಂದಿನಿಂದ ನಿಯಮಿತವಾಗಿ ವ್ಯಾಯಾಮ ಮಾಡುವ ಗುರಿಯನ್ನು ಇಟ್ಟುಕೊಳ್ಳಿರಿ. ‘ಬೆಳಿಗ್ಗೆ ವ್ಯಾಯಾಮ ಮಾಡದಿದ್ದರೆ ಮಧ್ಯಾಹ್ನದ ಊಟ ಮಾಡುವುದಿಲ್ಲ’ ಅಥವಾ ಸಂಜೆ ವ್ಯಾಯಾಮ ಮಾಡುವವರಾಗಿದ್ದರೆ ‘ವ್ಯಾಯಾಮ ಮಾಡದಿದ್ದರೆ ರಾತ್ರಿ ಊಟ ಮಾಡುವುದಿಲ್ಲ’ ಎಂದು ನಿರ್ಧರಿಸಿ. ನೀವು ಎಷ್ಟೇ ಬಿಡುವಿಲ್ಲದ್ದರೂ ದಿನಕ್ಕೆ ಕನಿಷ್ಠ ೩೦ ನಿಮಿಷ ವ್ಯಾಯಾಮಕ್ಕೆ ಮೀಸಲಿಡಿ. ಒಂದೇ ತರಹದ ವ್ಯಾಯಾಮ ಮಾಡದೆ ತನ್ನ ಕ್ಷಮತೆಯನುಸಾರ ನಡಿಗೆ, ಓಟ, ಸೂರ್ಯನಮಸ್ಕಾರ, ಯೋಗಾಸನಗಳು, ಪ್ರಾಣಾಯಾಮ ಹೀಗೆ ವಿವಿಧ ರೀತಿಯ ವ್ಯಾಯಾಮ ಮಾಡಿ. ಪ್ರತಿದಿನ ಹಂತಹಂತವಾಗಿ ವ್ಯಾಯಾಮವನ್ನು ಹೆಚ್ಚಿಸಿ. ಒಂದು ತಿಂಗಳ ನಂತರ, ನಿಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಗಳು ಹೆಚ್ಚಿವೆ ಮತ್ತು ನೀವು ಆರೋಗ್ಯಕರ ಜೀವನದತ್ತ ಸಾಗುತ್ತಿರುವಿರಿ ಎಂದು ನೀವು ಖಂಡಿತವಾಗಿಯೂ ಅನುಭವಿಸುವಿರಿ.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೬.೯.೨೦೨೨)