ಹಿಂದೂ ದೇವಸ್ಥಾನಗಳ ತಸ್ತಿಕ್ ಭತ್ಯೆಯ ಅನುದಾನವನ್ನು ಅನ್ಯ ಮತಿಯರ ಧಾರ್ಮಿಕ ಸ್ಥಳಗಳಿಗೆ ಬಿಡುಗಡೆ ಮಾಡಿರುವದನ್ನು ತಡೆ ಹಿಡಿದ ರಾಜ್ಯ ಸರಕಾರಕ್ಕೆ ಆಭಾರಮನ್ನಣೆ ಮತ್ತು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ವಿನಂತಿ
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ ಅನುದಾನದಿಂದ ೨೦೨೧-೨೨ ಸಾಲಿನ ತಸ್ತಿಕ ಭತ್ಯೆಯ ರೂಪದಲ್ಲಿ ೩೦ ಕ್ಕೂ ಅಧಿಕ ಅನ್ಯಮತೀಯರ ಪ್ರಾರ್ಥನಾ ಸ್ಥಳಗಳಿಗೆ ೧೩.೫೦ ಲಕ್ಷ ರೂ.ಗಳನ್ನು ನೀಡಲಾಗಿತ್ತು. ತದನಂತರ ಹಿಂದೂಗಳ ವಿರೋಧದಿಂದ ಈ ಆದೇಶವನ್ನು ಮುಜರಾಯಿ ಸಚಿವರಾದ ಶ್ರೀ. ಕೋಟಾ ಶ್ರೀನಿವಾಸ ಪೂಜಾರಿಯವರು ತಡೆ ಹಿಡಿಯಲು ಆದೇಶ ನೀಡಿದ್ದಾರೆ.