SC On Allahabad HC Judge Speech : ಅಲಹಾಬಾದ್ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಶೇಖರ್ ಯಾದವ್ ಅವರ ಭಾಷಣದ ಬಗ್ಗೆ ಮಾಹಿತಿ ಕೇಳಿದ ಸರ್ವೋಚ್ಚ ನ್ಯಾಯಾಲಯ

ನ್ಯಾಯಮೂರ್ತಿ ಯಾದವ್ ಇವರು ವಿ.ಹಿಂ.ಪ.ನ ಕಾರ್ಯಕ್ರಮದಲ್ಲಿ ‘ದೇಶವು ಬಹುಸಂಖ್ಯಾತರ ಇಚ್ಛೆಯಂತೆ ನಡೆಯುತ್ತದೆ’ ಎಂದು ಹೇಳಿಕೆ ನೀಡಿದ್ದರು !

ನವದೆಹಲಿ – ಅಲಹಾಬಾದ್ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಶೇಖರ ಕುಮಾರ ಯಾದವ್ ಅವರು 3 ದಿನಗಳ ಹಿಂದೆ ಉಚ್ಚನ್ಯಾಯಾಲಯದ ಗ್ರಂಥಾಲಯದ (ಲೈಬ್ರರಿ)ಸಭಾಂಗಣದಲ್ಲಿ ಸಮಾನ ನಾಗರಿಕ ಕಾನೂನಿನ ಕುರಿತು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕ್ರಮದಲ್ಲಿ ಕೆಲವು ಹೇಳಿಕೆಗಳನ್ನು ನೀಡಿದ್ದರು. ಸರ್ವೋಚ್ಚ ನ್ಯಾಯಾಲಯವು ಅದರ ಮಾಹಿತಿಯನ್ನು ಕೇಳಿದೆ. ನ್ಯಾಯಮೂರ್ತಿ ಯಾದವ್ ಅವರು ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿದ್ದಾರೆ ಎಂದು ಅವರ ಮೇಲೆ ಆರೋಪ ಮಾಡಲಾಗಿದೆ.

‘ಸಿಟಿಜನ್ಸ್ ಫಾರ್ ಜುಡಿಷಿಯಲ್ ಅಕೌಂಟೆಬಿಲಿಟಿ ಅಂಡ್ ರಿಫಾರ್ಮ್ಸ್’ ಎಂಬ ಸಾಮಾಜಿಕ ಸಂಘಟನೆಯು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರಿಗೆ ಈ ಸಂಬಂಧ ಪತ್ರ ಬರೆದಿದೆ. ಅದರಲ್ಲಿ ಅಸಮಾಧಾನ ವ್ಯಕ್ತಪಡಿಸಿ, ನ್ಯಾಯಮೂರ್ತಿ ಯಾದವ್ ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾರ್ಯಾಲಯದ ಅಂತರ್ಗತ ತನಿಖೆಗೆ ಆಗ್ರಹಿಸಲಾಗಿದೆ. ಅಲಹಾಬಾದ್ ಉಚ್ಚನ್ಯಾಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾರತೀಯ ಮುಸಲ್ಮಾನರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಅವರು, ‘ದೇಶದಲ್ಲಿ ವಾಸಿಸುವ ಬಹುಸಂಖ್ಯಾತರ ಇಚ್ಛೆಯಂತೆ ಭಾರತವು ನಡೆಯುವುದು ಮತ್ತು ಇದು ಕಾನೂನು ಇದೆ. ಕಾನೂನು ಬಹುಸಂಖ್ಯಾತರಂತೆ ನಡೆಯುತ್ತದೆ. ಅದನ್ನು ಕುಟುಂಬ ಅಥವಾ ಸಮಾಜ ಇದರ ಸಂದರ್ಭದಲ್ಲಿ ನೋಡಿದಾಗ, ಬಹುಸಂಖ್ಯಾತರ ಕಲ್ಯಾಣ ಮತ್ತು ಸಂತೋಷಕ್ಕೆ ಪ್ರಯೋಜನಕಾರಿ ಎಂದು ಒಪ್ಪಿಕೊಳ್ಳಲಾಗಿದೆ’, ಎಂದು ಹೇಳಿದ್ದರು.