ತಮಿಳುನಾಡಿನಲ್ಲಿ ಕಳೆದ ೩೬ ವರ್ಷಗಳಲ್ಲಿ ಹಿಂದೂ ದೇವಾಲಯದ ೪೭೦೦೦ ಎಕರೆ ಭೂಮಿ ನಾಪತ್ತೆ !

ಮದ್ರಾಸ್ ಉಚ್ಚನ್ಯಾಯಾಲಯದಿಂದ ರಾಜ್ಯ ಸರಕಾರಕ್ಕೆ ಸ್ಪಷ್ಟನೆ ನೀಡಲು ಆದೇಶ

* ಇಷ್ಟು ವರ್ಷಗಳಲ್ಲಿ, ದೇವಾಲಯಗಳ ಭೂಮಿ ಕಣ್ಮರೆಯಾಗುತ್ತಿರುವಾಗ, ಇಲ್ಲಿಯವರೆಗಿನ ಆಡಳಿತಗಾರರು ನಿದ್ದೆ ಮಾಡುತ್ತಿದ್ದರೇನು ? ಅಲ್ಲದೆ, ದೇವಾಲಯದ ವಿಶ್ವಸ್ಥರು ಮತ್ತು ಪದಾಧಿಕಾರಿಗಳು ಏನು ಮಾಡುತ್ತಿದ್ದರು ?

* ಭಕ್ತರು ನಿದ್ರಿಸುತ್ತಿರುವುದರಿಂದ ಜನ್ಮಹಿಂದುಗಳೇ ದೇವಾಲಯಗಳ ಭೂಮಿಯನ್ನು ಕಬಳಿಸುತ್ತಿರುವುದು ಶೋಭಿಸುವಂತಹದ್ದಲ್ಲ ! ದೇವಾಲಯಗಳು ಮತ್ತು ದೇವಾಲಯದ ಆಸ್ತಿಯನ್ನು ರಕ್ಷಿಸುವುದು ಸಹ ಭಕ್ತಿಯೇ ಆಗಿದೆ ಎಂದು ಹಿಂದೂಗಳು ಯಾವಾಗ ಅರಿತುಕೊಳ್ಳುವರು ?

ಚೆನ್ನೈ (ತಮಿಳುನಾಡು) – ಮದ್ರಾಸ ಉಚ್ಚನ್ಯಾಯಾಲಯವು ತಮಿಳುನಾಡು ಸರಕಾರಕ್ಕೆ ಆದೇಶ ನೀಡುತ್ತಾ ರಾಜ್ಯದಲ್ಲಿ ದೇವಾಲಯದ ೪೭೦೦೦ ಎಕರೆ ಭೂಮಿ ಕಣ್ಮರೆಯಾಗಿರುವ ಬಗ್ಗೆ ಸ್ಪಷ್ಟನೆ ನೀಡುವಂತೆ ಆದೇಶ ನೀಡಿದೆ. ಜುಲೈ ೫ ೨೦೨೧ ರ ಒಳಗೆ ಸ್ಪಷ್ಟನೆ ನೀಡುವಂತೆ ನ್ಯಾಯಾಲಯವು ಆದೇಶಿಸಿದೆ. ಒಂದು ಅರ್ಜಿಯನ್ನು ಆಲಿಸುವಾಗ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ೧೯೮೪-೮೫ ರಲ್ಲಿ ರಾಜ್ಯದ ದೇವಾಲಯಗಳ ಭೂಮಿ ೫ ಲಕ್ಷ ೨೫ ಸಾವಿರ ಎಕರೆಯಷ್ಟು ಇತ್ತು, ಆದರೆ ೨೦೧೯-೨೦ ರಲ್ಲಿ ಅದು ೪ ಲಕ್ಷ ೭೮ ಸಾವಿರ ಎಕರೆಗೆ ಇಳಿದಿದೆ.

. ಉಚ್ಚನ್ಯಾಯಾಲಯವು ತಮಿಳುನಾಡು ಸರಕಾರ ಮತ್ತು ಪುರಾತತ್ವ ವಿಭಾಗಕ್ಕೆ ರಾಜ್ಯದ ಐತಿಹಾಸಿಕ ಹಾಗೂ ಪುರಾತತ್ವದ ದೃಷ್ಟಿಯಿಂದ ಮಹತ್ವದ ಸ್ಮಾರಕಗಳು, ದೇವಾಲಯಗಳು ಮತ್ತು ಪ್ರಾಚೀನ ವಾಸ್ತುಗಳನ್ನು ಪರಿಶೀಲಿಸಲು ೧೭ ಸದಸ್ಯರ ಆಯೋಗವನ್ನು ರಚಿಸುವಂತೆ ಆದೇಶ ನೀಡಿದೆ. ಇವೆಲ್ಲವನ್ನೂ ಮೇಲ್ವಿಚಾರಣೆ ಮಾಡಿ ದುರಸ್ತಿ ಮಾಡುವಂತೆ ರಾಜ್ಯ ಸರಕಾರಕ್ಕೆ ಆದೇಶ ನೀಡಲಾಗಿದೆ.

. ನ್ಯಾಯಾಲಯವು ಪ್ರತಿಯೊಂದು ದೇವಸ್ಥಾನದಲ್ಲಿ ‘ಸ್ಟ್ರಾಂಗ್ ರೂಮ್’ ಸೇರಿದಂತೆ ಮೂರ್ತಿಗಳನ್ನು ಸುರಕ್ಷಿತವಾಗಿ ಇಡಲು ವಿಡಿಯೋ ಮೂಲಕ ಮೇಲುಸ್ತುವಾರಿ ನಡೆಸುವುದು, ವಿಗ್ರಹ ಮಾಹಿತಿಯ ಗಣಕೀಕರಣ ಮಾಡುವುದು ಅದರ ಛಾಯಾಚಿತ್ರಗಳನ್ನು ಸಂರಕ್ಷಿಸುವುದು ಇತ್ಯಾದಿ ಆದೇಶ ನೀಡಿದೆ