‘ರೋಹಿಂಗ್ಯಾ ನಿರಾಶ್ರಿತರಿಗೆ ನೀರು ಮತ್ತು ವಿದ್ಯುತ್ ಒದಗಿಸುವುದು ನಮ್ಮ ಜವಾಬ್ದಾರಿಯಂತೆ!’ – ಫಾರೂಕ್ ಅಬ್ದುಲ್ಲಾ

ಕಾಶ್ಮೀರದಲ್ಲಿ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರ ಖೇದಕರ ಹೇಳಿಕೆ !

ಫಾರೂಕ್ ಅಬ್ದುಲ್ಲಾ

ಶ್ರೀನಗರ (ಜಮ್ಮು-ಕಾಶ್ಮೀರ) – ಭಾರತ ಸರಕಾರವು ರೋಹಿಂಗ್ಯಾ ನಿರಾಶ್ರಿತರನ್ನು ಇಲ್ಲಿಗೆ ಕರೆತಂದಿದೆ. ನಾವು ಅವರನ್ನು ಇಲ್ಲಿಗೆ ಕರೆತಂದಿಲ್ಲ. ಸರಕಾರವು ಅವರನ್ನು ಇಲ್ಲಿ ನೆಲೆಗೊಳಿಸಿದೆ ಮತ್ತು ಎಲ್ಲಿಯವರೆಗೆ ಅವರು ಇಲ್ಲಿರುವರೋ ಅಲ್ಲಿಯವರೆಗೆ ಅವರಿಗೆ ನೀರು ಮತ್ತು ವಿದ್ಯುತ್ ಒದಗಿಸುವುದು ನಮ್ಮ ಕರ್ತವ್ಯ ಎಂದು ಹೇಳುತ್ತಾ ಜಮ್ಮು-ಕಾಶ್ಮೀರದಲ್ಲಿ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್‌ನ ನಾಯಕ ಫಾರೂಕ್ ಅಬ್ದುಲ್ಲಾ ಅವರು ರೋಹಿಂಗ್ಯಾಗಳನ್ನು ಬೆಂಬಲಿಸಿದರು. ಕೆಲವು ದಿನಗಳ ಹಿಂದೆ ಆಡಳಿತವು ರೋಹಿಂಗ್ಯಾಗಳಿಗೆ ನೀಡಲಾಗಿದ್ದ ನೀರು ಮತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿತ್ತು.

ಭಾಜಪವು ಕೆಲವು ದಿನಗಳ ಹಿಂದೆ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿ ನಿರಾಶ್ರಿತರಿಗೆ ನೀರು ಮತ್ತು ವಿದ್ಯುತ್ ಸಂಪರ್ಕಗಳನ್ನು ನೀಡಲಾಗುತ್ತಿದೆ ಎಂದು ಟೀಕಿಸುವಾಗ, ‘ಒಂದು ನಿರ್ದಿಷ್ಟ ಸಮುದಾಯದವರು ಮತ್ತು ರಾಜ್ಯ ಸರಕಾರ ಅವರನ್ನು ರಕ್ಷಿಸಲು ಇಚ್ಛಿಸುತ್ತದೆ. ಜಮ್ಮುವಿನಲ್ಲಿ ರೊಹಿಂಗ್ಯಾ ಮತ್ತು ಬಾಂಗ್ಲಾದೇಶಿ ನಿರಾಶ್ರಿತರನ್ನು ನೆಲೆಗೊಳಿಸುವುದು, ಇದೊಂದು ರಾಜಕೀಯ ಪಿತೂರಿಯಾಗಿದೆ. ಇದಕ್ಕೆ ಅವಕಾಶ ನೀಡಿದವರನ್ನು ಪತ್ತೆ ಹಚ್ಚಲು ಸಿಬಿಐ ತನಿಖೆಯಾಗಬೇಕು’ ಎಂದು ಹೇಳಿದೆ.

ಸಂಪಾದಕೀಯ ನಿಲುವು

  • ಇದರಿಂದ ಫಾರೂಕ್ ಅಬ್ದುಲ್ಲಾ ಅವರ ನಿಜವಾದ ಮನಸ್ಥಿತಿ ಮತ್ತೊಮ್ಮೆ ಬಹಿರಂಗವಾಗಿದೆ !
  • ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮುಸ್ಲಿಮರಿಂದ ನಡೆಯುತ್ತಿರುವ ಅತ್ಯಾಚಾರ ನನಗೆ ತಿಳಿದಿಲ್ಲ ಎಂದು ಹೇಳುವ ಫಾರೂಕ್ ಅಬ್ದುಲ್ಲಾ ತನ್ನದೇ ಧರ್ಮ ಬಾಂಧವರ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಾರೆ !
  • ಫಾರೂಕ್ ಅಬ್ದುಲ್ಲಾ ಅವರಂತಹವರನ್ನು ಬಹುಸಂಖ್ಯಾತ ಹಿಂದೂಗಳಿರುವ ದೇಶದಲ್ಲಿ ಒಪ್ಪಿಕೊಳ್ಳುವರು ಇದು ನಾಚಿಕೆಗೇಡಿನ ಸಂಗತಿ !