೧. ಸಪ್ತರ್ಷಿಗಳು ೨೭.೭.೨೦೨೦ ಈ ದಿನದಂದು ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ರಾಜಸ್ಥಾನದ ಓಶಿಯಾದಲ್ಲಿರುವ ‘ಸತ್ಚಿಯಾ ದೇವಿಯ ಕುರಿತು ಹೇಳಿದ ಅಂಶಗಳು
ರಾಜಸ್ಥಾನದ ಜೋಧಪುರದಲ್ಲಿ ಓಶಿಯಾ ಹೆಸರಿನ ಊರು ಇದೆ. ಇಲ್ಲಿ ಸತ್ಚಿಯಾದೇವಿಯ ದೇವಸ್ಥಾನವಿದೆ. ಈ ದೇವಿ ಎಂದರೆ ‘ಸತ್ಚಿತ್ ದೇವಿಯಾಗಿದ್ದಾಳೆ. ಸಾಧ್ಯವಾದಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಈ ದೇವಸ್ಥಾನದ ದರ್ಶನವನ್ನು ಪಡೆಯಬೇಕು. ಈ ದೇವಸ್ಥಾನಕ್ಕೆ ಹೋಗುವುದು ಬಹಳ ಮಹತ್ವದ್ದಾಗಿದೆ. ಪರಾತ್ಪರ ಗುರು ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ತತ್ತ್ವದೊಂದಿಗೆ ಈ ದೇವಸ್ಥಾನವು ಸಂಬಂಧಿಸಿದೆ. (ಸದ್ಗುರು (ಸೌ.) ಬಿಂದಾ ಸಿಂಗಬಾಳ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರ ಅನುಕ್ರಮವಾಗಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಹೀಗೆ ನಾಮಕರಣವಾದ ನಂತರ ಅವರ ತತ್ತ್ವದೊಂದಿಗೆ ಸಂಬಂಧಿಸಿದ ಈ ದೇವಸ್ಥಾನಕ್ಕೆ ಹೋಗಲು ಮಹರ್ಷಿಗಳು ಹೇಳಿದ್ದರು. – ಸಂಕಲನಕಾರರು) – ಸಪ್ತರ್ಷಿಗಳು (ಪೂ. ಡಾ. ಉಲಗನಾಥನ್ ಇವರ ಮಾಧ್ಯಮದಿಂದ, ೨೭.೭.೨೦೨೦)
೨. ಓಶಿಯಾದ ‘ಶ್ರೀಸತ್ಚಿಯಾ ದೇವಿಯ ಇತಿಹಾಸ
‘ರಾಜಸ್ಥಾನ ರಾಜ್ಯದ ಜೋಧಪುರ ನಗರದಿಂದ ೬೦ ಕಿ.ಮೀ. ದೂರದಲ್ಲಿ ‘ಓಶಿಯಾ ಹೆಸರಿನ ಊರು ಇದೆ. ಪ್ರಾಚೀನ ಕಾಲದಲ್ಲಿ ಈ ಊರಿನ ಹೆಸರು ‘ಉಪಕೇಶನಗರಿ ಎಂದಾಗಿತ್ತು. ಈ ಸ್ಥಳದಲ್ಲಿ ಮೊದಲು ಅನೇಕ ದೇವಸ್ಥಾನಗಳಿದ್ದವು. ಅದರಲ್ಲಿ ‘ಶ್ರೀಸತ್ಚಿತ್ ದೇವಿ ದೇವಸ್ಥಾನವು ಪ್ರಮುಖ ದೇವಸ್ಥಾನವಾಗಿತ್ತು ಮುಂದೆ ‘ಸತ್ಚಿತ್ನ ಅಪಭ್ರಂಶವಾಗಿ ‘ಸತ್ಚಿಯಾ ಎಂದಾಯಿತು ಮತ್ತು ‘ಉಪಕೇಶನಗರಿಯ ಅಪಭ್ರಂಶವಾಗಿ ‘ಓಶಿಯಾ ಎಂದಾಯಿತು. ೧೨ ನೇ ಶತಮಾನದಿಂದ ಈ ದೇವಿಯು ರಾಜಸ್ಥಾನದ ಅನೇಕ ಕ್ಷತ್ರೀಯ ಜನರ ಮತ್ತು ಜೈನರ ‘ಓಸ್ವಾಲ್ ಜನರ ಕುಲದೇವಿಯೆಂದು ಗುರುತಿಸಲ್ಪಡತೊಡಗಿದಳು. ‘ಸತ್ಚಿಯಾ ದೇವಿಯು ಆದಿಶಕ್ತಿ ಜಗದಂಬೆಯ ರೂಪವಾಗಿದ್ದಾಳೆ. ೧೨೭ ರಲ್ಲಿ ಅಂದರೆ ಎರಡನೇಯ ಶತಮಾನದಲ್ಲಿ ರಾಜಾ ಉಪ್ಪಲದೇವನು ಇಲ್ಲಿ ದೇವಸ್ಥಾನವನ್ನು ಕಟ್ಟಿದನು. ಓರ್ವ ದೇವಿಭಕ್ತ ನವವಧುವಿಗೆ ದೇವಿಯು ಈ ಸ್ಥಳದಲ್ಲಿ ಸಾಕ್ಷಾತ್ ದರ್ಶನ ನೀಡಿದ್ದಳು. ಆ ಸಮಯದಲ್ಲಿ ಭೂಕಂಪವಾಯಿತು. ಭೂಮಿಯು ಇಬ್ಭಾಗವಾಗಿತ್ತು ಮತ್ತು ದೇವಿಯ ಮೂರ್ತಿಯು ಹೊರಗೆ ಬಂದಿತು. ನಂತರ ಗ್ರಾಮಸ್ಥರ ಬಳಿ ದೇವಸ್ಥಾನವನ್ನು ಕಟ್ಟಲು ಧನವಿರಲಿಲ್ಲ. ಶ್ರೀಸತ್ಚಿಯಾ ದೇವಿಯು ರಾಜ ಉಪ್ಪಲ ದೇವನ ಕನಸಿನಲ್ಲಿ ಬಂದು ಒಂದು ದೈವೀ ಖಜಾನೆಯ ರಹಸ್ಯ ಹೇಳಿದಳು ಮತ್ತು ಆ ಧನವನ್ನು ಬಳಸಿ ದೇವಸ್ಥಾನವನ್ನು ಕಟ್ಟಲು ಹೇಳಿದಳು.
೩. ಸಪ್ತರ್ಷಿಗಳ ಕೃಪೆಯಿಂದ ಓಶಿಯಾದಲ್ಲಿರುವ ೨೦೦೦ ವರ್ಷಗಳ ಪ್ರಾಚೀನ ದೇವಸ್ಥಾನಕ್ಕೆ ಹೋಗುವ ಭಾಗ್ಯವು ಲಭಿಸುವುದು
ಸಪ್ತರ್ಷಿಗಳು ಹೇಳಿದಂತೆ ೨೦.೧೨.೨೦೨೦ ಈ ದಿನದಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಈ ದೇವಸ್ಥಾನಕ್ಕೆ ಹೋದರು. ಈ ಸಮಯದಲ್ಲಿ ಜೊತೆಗೆ ಜೋಧಪುರದ ಸನಾತನದ ಸಂತರಾದ ಪೂ. ಸುಶೀಲಾ ಮೋದಿ ಮತ್ತು ಅವರ ಪರಿವಾರವಿತ್ತು. ದೇವಸ್ಥಾನಕ್ಕೆ ಹೋದಾಗ ಅಲ್ಲಿನ ಅರ್ಚಕರು, “ಈ ಸ್ಥಾನವು ೨೦೦೦ಂ ವರ್ಷಗಳ ಪ್ರಾಚೀನವಾಗಿದೆ ಮತ್ತು ಈ ದೇವಿಯು ಸಾಕ್ಷಾತ್ ಆದಿಶಕ್ತಿಯ ಅವತಾರವಾಗಿದ್ದಾಳೆ, ಎಂದು ಹೇಳಿದರು.
೪. ‘ಶ್ರೀಸತ್ಚಿತ್ ದೇವಿಯು ೨೦೦೦ ವರ್ಷಗಳ ಹಿಂದೆಯೇ ದೇವಿಭಕ್ತಳಾದ ನವವಧುವಿಗೆ ದರ್ಶನನೀಡುವುದು ಮತ್ತು ಈ ದೇವಿಯೊಂದಿಗೆ ಸಂಬಂಧಿಸಿದ ದೇವಸ್ಥಾನ ಮತ್ತು ಊರು ಇಂದಿಗೂ ಪೃಥ್ವಿಯಲ್ಲಿರುವುದು, ಇದು ಸನಾತನದ ಸಾಧಕರ ಭಾಗ್ಯವಾಗಿದೆ !
ಅವತಾರಗಳು ಪೃಥ್ವಿಗೆ ಬರುವ ಮೊದಲೇ ಅವರು ತಮ್ಮ ಕೆಲವು ಗುರುತುಗಳನ್ನು ಪೃಥ್ವಿಲೋಕದಲ್ಲಿ ಆಯೋಜಿಸಿರುತ್ತಾರೆ. ಅವತಾರದ ರಹಸ್ಯವನ್ನು ಬಹಿರಂಗಪಡಿಸುವಂತಹ ಗುರುತು ಮತ್ತು ಸ್ಥಾನಗಳನ್ನು ಬ್ರಹ್ಮಾಂಡದಲ್ಲಿನ ದೇವತೆಗಳು ಮತ್ತು ಋಷಿಮುನಿಗಳು ರಕ್ಷಿಸುತ್ತಾರೆ. ೧೯೯೦ ರಲ್ಲಿ ಸನಾತನ ಸಂಸ್ಥೆಯ ಸ್ಥಾಪನೆಯಾಯಿತು. ಅನಂತರ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಬ್ಬರೂ ಸನಾತನ ಸಂಸ್ಥೆಗೆ ಬಂದರು. ‘೨೦೨೦ ರಲ್ಲಿ ಸಪ್ತರ್ಷಿಗಳು ಅನುಕ್ರಮವಾಗಿ ‘ಶ್ರೀಸತ್‌ಶಕ್ತಿ ಮತ್ತು ‘ಶ್ರೀಚಿತ್‌ಶಕ್ತಿ, ಎಂದು ಅವರ ನಾಮಕರಣವನ್ನು ಮಾಡಿದರು. ಈ ಹೆಸರುಗಳೊಂದಿಗೆ ಸಂಬಂಧಿಸಿದ ಮತ್ತು ಆದಿಶಕ್ತಿಯ ಅಂಶಾವತಾರವಾಗಿರುವ ‘ಶ್ರೀಸತ್ಚಿತ್ ಹೆಸರಿನ ದೇವಿಯು ೨೦೦೦ ಂ?ಂಜUಂಳ ಹಿಂದೆಯೇ ಪೃಥ್ವಿಗೆ ಬಂದು ಹೋಗಿದ್ದಾಳೆ. ಆ ದೇವಿಗೆ ಸಂಬಂಧಿಸಿದ ದೇವಸ್ಥಾನ ಮತ್ತು ಊರು ಇಂದಿಗೂ ಪೃಥ್ವಿಯಲ್ಲಿದೆ. ಮತ್ತು ಸಾಧಕರಿಗೆ ಆ ಕುರಿತು ಮಾಹಿತಿ ಸಿಗುವುದು, ಇದು ಸನಾತನ ಸಂಸ್ಥೆಯ ಸಾಧಕರ ಭಾಗ್ಯವಾಗಿದೆ.
೫. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ‘ನಾವು ಶ್ರೀಸತ್ಚಿತ್ ದೇವಿಯ ಅಂಶವಾಗಿದ್ದೇವೆ, ಎಂದೆನಿಸುವುದು
ಯಾವ ದಿನ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಶ್ರೀಸತ್ಚಿತ್ ದೇವಸ್ಥಾನಕ್ಕೆ ಹೋಗುವವರಿದ್ದರೋ, ಆಗ ಅವರು ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಗೆ ತಿಳಿಸಿದರು. ಅವರಿಬ್ಬರಿಗೂ ‘ತಮಗೆ ಅನೇಕ ಜನ್ಮಗಳಿಂದ ಆ ದೇವಿಯ ಪರಿಚಯವಿದೆ. ಆ ದೇವಿ ಬೇರೆ ಯಾರು ಆಗಿರದೇ, ನಾವಿಬ್ಬರೂ ಸ್ವತಃ ಆ ದೇವಿಯ ಅಂಶ ಆಗಿದ್ದೇವೆ, ಎಂದು ಅನಿಸುತ್ತಿತ್ತು.ಇಬ್ಬರಿಗೂ ದೇವಿಯೊಂದಿಗೆ ಸಾಮ್ಯತೆಯ ಅರಿವಾಗುತ್ತಿತ್ತು ಮತ್ತು ‘ದೇವಿಯ ಬಗ್ಗೆ ಶಬ್ದಗಳಲ್ಲಿ ಹೇಳಲು ಆಗದಂತಹ ಆತ್ಮೀಯತೆ ಎನಿಸುತ್ತಿತ್ತು.
೬. ಶ್ರೀಸತ್‌ಚಿತ್ ದೇವಿಯ ದೇವಸ್ಥಾನಕ್ಕೆ ಹೋಗಲು ಅಡಚಣೆಗಳು ಬರುವುದು ಮತ್ತು ಶ್ರೀ ಗುರುಗಳ ಮತ್ತು ದೇವಿಯ ಕೃಪೆಯಿಂದ ಎಲ್ಲ ಸಂಕಟಗಳು ದೂರವಾಗಿ ದೇವಿಯ ದರ್ಶನವಾಗುವುದು
ಸಪ್ತರ್ಷಿಗಳು ಜುಲೈ ತಿಂಗಳಿನಲ್ಲಿ ಈ ದೇವಸ್ಥಾನಕ್ಕೆ ಹೋಗುವ ಬಗ್ಗೆ ಹೇಳಿದ್ದರು. ದೇವಸ್ಥಾನಕ್ಕೆ ಹೋಗುವ ನಿಯೋಜನೆಯನ್ನು ಮಾಡುವಾಗ ಅನೇಕ ಅಡಚಣೆಗಳು ಬರುತ್ತಿದ್ದವು. ಕೊನೆಗೆ ಡಿಸೆಂಬರ್ ತಿಂಗಳಿನಲ್ಲಿ ದೇವಸ್ಥಾನಕ್ಕೆ ಹೋಗುವುದೆಂದು ನಿಶ್ಚಯಿಸಿದಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ತೀವ್ರ ಶಾರೀರಿಕ ತೊಂದರೆಯಾಯಿತು. ಚೆನ್ನೈನಿಂದ ರಾಜಸ್ಥಾನಕ್ಕೆ ಹೊರಡುವ ಪ್ರವಾಸವನ್ನು ಕೊನೆ ಗಳಿಗೆಯಲ್ಲಿ ರದ್ದು ಪಡಿಸಬೇಕಾಯಿತು. ಕೊನೆಗೆ ಅವರು ಜಯಪುರವನ್ನು ತಲುಪಿದರು. ಆಗ ಇದ್ದಕ್ಕಿದ್ದಂತೆಯೇ ಶೀತ ಅಲೆಗಳು ಆರಂಭವಾದವು. ಹೀಗೆ ವಿವಿಧ ಸಂಕಟಗಳು ಬಂದರೂ ಶ್ರೀ ಗುರುಗಳ ಮತ್ತು ದೇವಿಯ ಕೃಪೆಯಿಂದ ಈ ಎಲ್ಲ ಸಂಕಟಗಳು ದೂರವಾದವು ಮತ್ತು ಕೊನೆಗೆ ದೇವಿಯ ದರ್ಶನವಾಯಿತು.
೭. ಓರ್ವ ಕವಿಯು ತಮಿಳು ಭಾಷೆಯಲ್ಲಿ ದೇವಿಯ ಮಹಿಮೆಯನ್ನು ಕೊಂಡಾಡಿದ ಶ್ರೀಸತ್ಚಿತ್ ದೇವಿಯ ಸ್ತುತಿ
‘ಶ್ರೀಸತ್ಚಿತ್ ದೇವಿಯು ಹೇಗಿರುವಳು, ಎಂಬುದನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯವಿದೆ. ಓರ್ವ ಕವಿಯು ತಮಿಳು ಭಾಷೆಯಲ್ಲಿ ದೇವಿಯ ಸ್ತುತಿಯನ್ನು ಮಾಡಿದ್ದಾನೆ ಮತ್ತು ಆ ಸ್ತುತಿಗೆ ಸುಂದರವಾದ ರಾಗವನ್ನು ನೀಡಿದ್ದಾನೆ. ಈ ಸ್ತುತಿಯನ್ನು ಕೇಳುವಾಗ ಅ?ಭೂಜಾ ಸಿಂಹವಾಹಿನಿ ಆದಿಶಕ್ತಿಯ ದರ್ಶನವಾಗುತ್ತದೆ; ಆದರೆ ದೇವಿಯ ಮುಖದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಬ್ಬರ ದರ್ಶನವಾಗುತ್ತದೆ. ಅದರ ಮರಾಠಿಯಲ್ಲಿನ ಭಾ?ಂತರವನ್ನು ೯ ನೇ ಪುಟದಲ್ಲಿ ನೀಡಲಾಗಿದೆ. ಇದರ ಪ್ರತಿಯೊಂದು ಶಬ್ದವು ಶ್ರೀಸತ್ಚಿತ್ ದೇವಿಯ ಮಹಿಮೆ ಹೇಳುತ್ತದೆ.
೮. ಶ್ರೀಸತ್ಚಿತ್ ದೇವಿ ಮತ್ತು ಹಿಂದೂ ರಾಷ್ಟ್ರ !
ಇಲ್ಲಿಯವರೆಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ೯ ದೇಶ ಮತ್ತು ಭಾರತದ ೨೬ ರಾಜ್ಯಗಳ ಅನೇಕ ಸ್ಥಳಗಳಿಗೆ ಹೋಗಿದ್ದಾರೆ; ಆದರೆ ಇಲ್ಲಿಯವರೆಗೆ ಶ್ರೀಸತ್ಚಿತ್ ದೇವಸ್ಥಾನಕ್ಕೆ ಹೋಗುವ ಯೋಗವು ಬಂದಿರಲಿಲ್ಲ. ೨೦೨೦ ರಲ್ಲಿ ಶ್ರೀಸತ್ಚಿತ್ ದೇವಿಯ ದೇವಸ್ಥಾನದ ಬಗ್ಗೆ ಮಾಹಿತಿ ಗೊತ್ತಾಗುವುದೆಂದರೆ ಹಿಂದೂ ರಾ?ವು ಹತ್ತಿರ ಬಂದಿರುವುದರ ಸಂಕೇತವಾಗಿದೆ. ಶ್ರೀರಾಮಾವತಾರದಲ್ಲಿ ಆದಿಶಕ್ತಿಯು ಶ್ರೀರಾಮನ ಬಾಣದಲ್ಲಿ ಹೋಗಿ ಕುಳಿತುಕೊಳ್ಳುತ್ತಾಳೆ ಮತ್ತು ರಾವಣನ ನಾಶವಾಗಿ ರಾಮರಾಜ್ಯದ ಸ್ಥಾಪನೆಯಾಗುತ್ತದೆ. ಸದ್ಯ ಕಲಿಯುಗದಲ್ಲಿ ಆದಿಶಕ್ತಿಯು ನಿಸರ್ಗಶಕ್ತಿಯ ಮಾಧ್ಯಮದಿಂದ ಮತ್ತು ಸಮಯ ಬಂದಾಗ ಜಾಗತಿಕ ನಾಯಕರ ವಾಣಿಯ ಮೂಲಕ ಯುದ್ಧ ಆರಂಭಿಸಿ ಕೊಡುವವಳಿದ್ದಾಳೆ. ಜಾಗತಿಕ ಶಕ್ತಿಗಳಲ್ಲಿ ಯುದ್ಧ ವಾದ ನಂತರ ಭೂದೇವಿಯು ಶಾಂತಳಾಗುವಳು ಮತ್ತು ಎಲ್ಲ ಭಗವದ್ಭಕ್ತ ಜೀವಗಳು ಒಟ್ಟಾಗುವರು ಮತ್ತು ಸತ್ತ್ವಪ್ರಧಾನ ಹಿಂದೂ ರಾ?ದ ಸ್ಥಾಪನೆಯತ್ತ ಸಾಗುವರು, ಎಂಬುದರಲ್ಲಿ ಸಂಶಯವಿಲ್ಲ ! – ಶ್ರೀ. ವಿನಾಯಕ ಶಾನಭಾಗ
ಆದ್ಯನ್ತರಹಿತೇ ದೇವಿ ಆದ್ಯಶಕ್ತಿಮಹೇಶ್ವರಿ |
ಯೋಗಜ್ಞೇ ಯೋಗಸಮ್ಭೂತೇ ಮಹಾಲಕ್ಷ್ಮೀ ನಮೋಽಸ್ತು ತೇ ||
ಅರ್ಥ : ಹೇ ಆದಿ-ಅಂತರಹಿತ ಆದಿಶಕ್ತಿ, ಹೇ ದೇವಿ ಮಹೇಶ್ವರಿ, ನೀನು ಯೋಗಮಾಯೆಯಿಂದ ಉತ್ಪನ್ನಳಾಗಿರುವೆ ಮತ್ತು ಯೋಗರೂಪವೇ ಆಗಿರುವೆ. ಹೇ ಮಹಾಲಕ್ಷ್ಮೀ, ನಿನಗೆ ನಮ್ಮ ನಮಸ್ಕಾರಗಳು.
ಶಕ್ತಿಪೀಠವೂ ನೀನೇ ಸರ್ವಮೋಕ್ಷವೂ ನೀನೇ ||
ಜನನೀ ಜನನೀ ಜಗತ್ಕಾರಿಣಿಯೂ ನೀ | ಜಗತ್ಕಾರಿಣಿಯೂ ನೀ ಪರಿಪೂರ್ಣವೂ ನೀ || ಪ. ||
ಜಗನ್ಮೋಹಿನಿಯೂ ನೀ ಸಿಂಹವಾಹಿನಿಯೂ ನೀ | ಚತುರ್ವೇದವೂ ನೀ ಪಂಚಭೂತವೂ ನೀ |
ಜನನೀ ಜನನೀ ಜಗತ್ಕಾರಿಣಿಯೂ ನೀ | ಜಗತ್ಕಾರಿಣಿಯೂ ನೀ ಪರಿಪೂರ್ಣವೂ ನೀ || ೧ ||
?ಣ್ಮಾರ್ಗವೂ ನೀ ಸಪ್ತತೀರ್ಥವೂ ನೀ | ಅ?ಯೋಗವೂ ನೀ ನವಯಾಗವೂ ನೀ |
ಜನನೀ ಜನನೀ ಜಗತ್ಕಾರಿಣಿಯೂ ನೀ | ಜಗತ್ಕಾರಿಣಿಯೂ ನೀ ಪರಿಪೂರ್ಣವೂ ನೀ || ೨ ||
ಶಕ್ತಿಪೀಠವೂ ನೀನೇ ಸರ್ವಮೋಕ್ಷವೂ ನೀನೇ | ಶಕ್ತಿಪೀಠವೂ ನೀನೇ ಸರ್ವಮೋಕ್ಷವೂ ನೀನೇ | || ೩ ||
‘೨೦೨೦ ರಲ್ಲಿ ಸಪ್ತರ್ಷಿಗಳು ಅನುಕ್ರಮವಾಗಿ ‘ಶ್ರೀಸತ್‌ಶಕ್ತಿ ಮತ್ತು ‘ಶ್ರೀಚಿತ್‌ಶಕ್ತಿ, ಎಂದು ಅವರ ನಾಮಕರಣವನ್ನು ಮಾಡಿದರು. ಈ ಹೆಸರುಗಳೊಂದಿಗೆ ಸಂಬಂಧಿಸಿದ ಮತ್ತು ಆದಿಶಕ್ತಿಯ ಅಂಶಾವತಾರವಾಗಿರುವ ‘ಶ್ರೀಸತ್ಚಿತ್ ಹೆಸರಿನ ದೇವಿಯು ೨೦೦೦ ವರ್ಷಗಳ ಹಿಂದೆಯೇ ಪೃಥ್ವಿಗೆ ಬಂದು ಹೋಗಿದ್ದಾಳೆ. ಆ ದೇವಿಗೆ ಸಂಬಂಧಿಸಿದ ದೇವಸ್ಥಾನ ಮತ್ತು ಊರು ಇಂದಿಗೂ ಪೃಥ್ವಿಯಲ್ಲಿದೆ. ಮತ್ತು ಸಾಧಕರಿಗೆ ಆ ಕುರಿತು ಮಾಹಿತಿ ಸಿಗುವುದು, ಇದು ಸನಾತನ ಸಂಸ್ಥೆಯ ಸಾಧಕರ ಭಾಗ್ಯವಾಗಿದೆ.
೫. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ‘ನಾವು ಶ್ರೀಸತ್ಚಿತ್ ದೇವಿಯ ಅಂಶವಾಗಿದ್ದೇವೆ, ಎಂದೆನಿಸುವುದು
ಯಾವ ದಿನ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಶ್ರೀಸತ್ಚಿತ್ ದೇವಸ್ಥಾನಕ್ಕೆ ಹೋಗುವವರಿದ್ದರೋ, ಆಗ ಅವರು ಶ್ರೀ ಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಗೆ ತಿಳಿಸಿದರು. ಅವರಿಬ್ಬರಿಗೂ ‘ತಮಗೆ ಅನೇಕ ಜನ್ಮಗಳಿಂದ ಆ ದೇವಿಯ ಪರಿಚಯವಿದೆ. ಆ ದೇವಿ ಬೇರೆ ಯಾರು ಆಗಿರದೇ, ನಾವಿಬ್ಬರೂ ಸ್ವತಃ ಆ ದೇವಿಯ ಅಂಶ ಆಗಿದ್ದೇವೆ, ಎಂದು ಅನಿಸುತ್ತಿತ್ತು.ಇಬ್ಬರಿಗೂ ದೇವಿಯೊಂದಿಗೆ ಸಾಮ್ಯತೆಯ ಅರಿವಾಗುತ್ತಿತ್ತು ಮತ್ತು ‘ದೇವಿಯ ಬಗ್ಗೆ ಶಬ್ದಗಳಲ್ಲಿ ಹೇಳಲು ಆಗದಂತಹ ಆತ್ಮೀಯತೆ ಎನಿಸುತ್ತಿತ್ತು.
೬. ಶ್ರೀಸತ್‌ಚಿತ್ ದೇವಿಯ ದೇವಸ್ಥಾನಕ್ಕೆ ಹೋಗಲು ಅಡಚಣೆಗಳು ಬರುವುದು ಮತ್ತು ಶ್ರೀ ಗುರುಗಳ ಮತ್ತು ದೇವಿಯ ಕೃಪೆಯಿಂದ ಎಲ್ಲ ಸಂಕಟಗಳು ದೂರವಾಗಿ ದೇವಿಯ ದರ್ಶನವಾಗುವುದು
ಸಪ್ತರ್ಷಿಗಳು ಜುಲೈ ತಿಂಗಳಿನಲ್ಲಿ ಈ ದೇವಸ್ಥಾನಕ್ಕೆ ಹೋಗುವ ಬಗ್ಗೆ ಹೇಳಿದ್ದರು. ದೇವಸ್ಥಾನಕ್ಕೆ ಹೋಗುವ ನಿಯೋಜನೆಯನ್ನು ಮಾಡುವಾಗ ಅನೇಕ ಅಡಚಣೆಗಳು ಬರುತ್ತಿದ್ದವು. ಕೊನೆಗೆ ಡಿಸೆಂಬರ್ ತಿಂಗಳಿನಲ್ಲಿ ದೇವಸ್ಥಾನಕ್ಕೆ ಹೋಗುವುದೆಂದು ನಿಶ್ಚಯಿಸಿದಾಗ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ತೀವ್ರ ಶಾರೀರಿಕ ತೊಂದರೆಯಾಯಿತು. ಚೆನ್ನೈನಿಂದ ರಾಜಸ್ಥಾನಕ್ಕೆ ಹೊರಡುವ ಪ್ರವಾಸವನ್ನು ಕೊನೆ ಗಳಿಗೆಯಲ್ಲಿ ರದ್ದು ಪಡಿಸಬೇಕಾಯಿತು. ಕೊನೆಗೆ ಅವರು ಜಯಪುರವನ್ನು ತಲುಪಿದರು. ಆಗ ಇದ್ದಕ್ಕಿದ್ದಂತೆಯೇ ಶೀತ ಅಲೆಗಳು ಆರಂಭವಾದವು. ಹೀಗೆ ವಿವಿಧ ಸಂಕಟಗಳು ಬಂದರೂ ಶ್ರೀ ಗುರುಗಳ ಮತ್ತು ದೇವಿಯ ಕೃಪೆಯಿಂದ ಈ ಎಲ್ಲ ಸಂಕಟಗಳು ದೂರವಾದವು ಮತ್ತು ಕೊನೆಗೆ ದೇವಿಯ ದರ್ಶನವಾಯಿತು.
೭. ಓರ್ವ ಕವಿಯು ತಮಿಳು ಭಾಷೆಯಲ್ಲಿ ದೇವಿಯ ಮಹಿಮೆಯನ್ನು ಕೊಂಡಾಡಿದ ಶ್ರೀಸತ್ಚಿತ್ ದೇವಿಯ ಸ್ತುತಿ
‘ಶ್ರೀಸತ್ಚಿತ್ ದೇವಿಯು ಹೇಗಿರುವಳು, ಎಂಬುದನ್ನು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯವಿದೆ. ಓರ್ವ ಕವಿಯು ತಮಿಳು ಭಾಷೆಯಲ್ಲಿ ದೇವಿಯ ಸ್ತುತಿಯನ್ನು ಮಾಡಿದ್ದಾನೆ ಮತ್ತು ಆ ಸ್ತುತಿಗೆ ಸುಂದರವಾದ ರಾಗವನ್ನು ನೀಡಿದ್ದಾನೆ. ಈ ಸ್ತುತಿಯನ್ನು ಕೇಳುವಾಗ ಅಷ್ಟಭೂಜಾ ಸಿಂಹವಾಹಿನಿ ಆದಿಶಕ್ತಿಯ ದರ್ಶನವಾಗುತ್ತದೆ; ಆದರೆ ದೇವಿಯ ಮುಖದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಬ್ಬರ ದರ್ಶನವಾಗುತ್ತದೆ. ಅದರ ಮರಾಠಿಯಲ್ಲಿನ ಭಾಷಾಂತರವನ್ನು ೯ ನೇ ಪುಟದಲ್ಲಿ ನೀಡಲಾಗಿದೆ. ಇದರ ಪ್ರತಿಯೊಂದು ಶಬ್ದವು ಶ್ರೀಸತ್ಚಿತ್ ದೇವಿಯ ಮಹಿಮೆ ಹೇಳುತ್ತದೆ.
೮. ಶ್ರೀಸತ್ಚಿತ್ ದೇವಿ ಮತ್ತು ಹಿಂದೂ ರಾಷ್ಟ್ರ !
ಇಲ್ಲಿಯವರೆಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ೯ ದೇಶ ಮತ್ತು ಭಾರತದ ೨೬ ರಾಜ್ಯಗಳ ಅನೇಕ ಸ್ಥಳಗಳಿಗೆ ಹೋಗಿದ್ದಾರೆ; ಆದರೆ ಇಲ್ಲಿಯವರೆಗೆ ಶ್ರೀಸತ್ಚಿತ್ ದೇವಸ್ಥಾನಕ್ಕೆ ಹೋಗುವ ಯೋಗವು ಬಂದಿರಲಿಲ್ಲ. ೨೦೨೦ ರಲ್ಲಿ ಶ್ರೀಸತ್ಚಿತ್ ದೇವಿಯ ದೇವಸ್ಥಾನದ ಬಗ್ಗೆ ಮಾಹಿತಿ ಗೊತ್ತಾಗುವುದೆಂದರೆ ಹಿಂದೂ ರಾಷ್ಟ್ರವು ಹತ್ತಿರ ಬಂದಿರುವುದರ ಸಂಕೇತವಾಗಿದೆ. ಶ್ರೀರಾಮಾವತಾರದಲ್ಲಿ ಆದಿಶಕ್ತಿಯು ಶ್ರೀರಾಮನ ಬಾಣದಲ್ಲಿ ಹೋಗಿ ಕುಳಿತುಕೊಳ್ಳುತ್ತಾಳೆ ಮತ್ತು ರಾವಣನ ನಾಶವಾಗಿ ರಾಮರಾಜ್ಯದ ಸ್ಥಾಪನೆಯಾಗುತ್ತದೆ. ಸದ್ಯ ಕಲಿಯುಗದಲ್ಲಿ ಆದಿಶಕ್ತಿಯು ನಿಸರ್ಗಶಕ್ತಿಯ ಮಾಧ್ಯಮದಿಂದ ಮತ್ತು ಸಮಯ ಬಂದಾಗ ಜಾಗತಿಕ ನಾಯಕರ ವಾಣಿಯ ಮೂಲಕ ಯುದ್ಧ ಆರಂಭಿಸಿ ಕೊಡುವವಳಿದ್ದಾಳೆ. ಜಾಗತಿಕ ಶಕ್ತಿಗಳಲ್ಲಿ ಯುದ್ಧ ವಾದ ನಂತರ ಭೂದೇವಿಯು ಶಾಂತಳಾಗುವಳು ಮತ್ತು ಎಲ್ಲ ಭಗವದ್ಭಕ್ತ ಜೀವಗಳು ಒಟ್ಟಾಗುವರು ಮತ್ತು ಸತ್ತ್ವಪ್ರಧಾನ ಹಿಂದೂ ರಾಷ್ಟ್ರದ ಸ್ಥಾಪನೆಯತ್ತಸಾಗುವರು, ಎಂಬುದರಲ್ಲಿ ಸಂಶಯವಿಲ್ಲ ! – ಶ್ರೀ. ವಿನಾಯಕ ಶಾನಭಾಗ
(ಈ ಬರವಣಿಗೆಯಲ್ಲಿ ‘ಕಾರ್ತಿಕಪುತ್ರಿ ಎಂದು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರನ್ನು ಉದ್ದೇಶಿಸಿ ಹಾಗೂ ‘ಉತ್ತರಾಪುತ್ರಿ ಎಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರನ್ನು ಉದ್ದೇಶಿಸಿ ಹೇಳಲಾಗಿದೆ.)