ಇನ್ನೂ ೧೦ ದಿನಗಳ ವರೆಗೆ ಯುದ್ಧ ನಡೆದರೆ ರಷ್ಯಾವು ದೀವಾಳಿತನದ ಹೊಸ್ತಿಲನ್ನು ತಲುಪುತ್ತದೆ ! – ಸಂರಕ್ಷಣಾ ತಜ್ಞರ ಹೇಳಿಕೆ

ರಷ್ಯಾವು ಯುಕ್ರೇನಿನ ಮೇಲೆ ಆಕ್ರಮಣ ಮಾಡಿ ೫ ದಿನಗಳಾದವು; ಆದರೆ ಇನ್ನೂ ರಷ್ಯಾಗೆ ಯುಕ್ರೇನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ರಷ್ಯಾವು ‘ಯುಕ್ರೇನಿನ ಮೇಲೆ ಬೇಗನೇ ಹಿಡಿತವನ್ನು ಸಾಧಿಸಬಹುದು’ ಎಂದು ತಿಳಿದಿತ್ತು; ಆದರೆ ಅದು ತಪ್ಪಾಯಿತು.

ಭಾರತವು ತನ್ನ ಸೇನಾ ಸಾಮರ್ಥ್ಯ ಮತ್ತು ಯುದ್ಧ ಸಾಮಗ್ರಿಗಳ ಆಧುನೀಕರಣದತ್ತ ಗಮನಹರಿಸಬೇಕು ! – ನಿವೃತ್ತ ಬ್ರಿಗೇಡಿಯರ್ ಹೇಮಂತ್ ಮಹಾಜನ್

‘ರಷ್ಯಾ-ಉಕ್ರೇನ್ ನಡುವೆ ಯುದ್ಧ ನಡೆದರೆ ಉಕ್ರೇನ್ ಗೆ ಸಂಪೂರ್ಣ ಬೆಂಬಲ ನೀಡುತ್ತೇವೆ’ ಎಂದು ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ಹೇಳುತ್ತಿದ್ದವು; ಆದರೆ ಪ್ರತ್ಯಕ್ಷದಲ್ಲಿ ರಷ್ಯಾವು ಉಕ್ರೇನ್‌ನ ಸೈನ್ಯ ಸಹಿತ ನಾಗರಿಕ ಪ್ರದೇಶಗಳ ಮೇಲೆ ದಾಳಿ ಮಾಡಿದರೂ ಉಕ್ರೇನ್‌ಗೆ ಸಹಾಯ ಮಾಡಲು ಯಾವುದೇ ದೇಶವು ಪ್ರತ್ಯಕ್ಷವಾಗಿ ಯಾವುದೇ ರೀತಿಯ ಸೇನಾ ಕಾರ್ಯಾಚರಣೆ ಮಾಡಲಿಲ್ಲ.

ಒಂದು ವರ್ಷದ ಹಿಂದೆ ಭಾರತೀಯ ಪಂಚಾಂಗದಲ್ಲಿ ಮಾಡಲಾಗಿತ್ತು ಭವಿಷ್ಯವಾಣಿ !

ರಷ್ಯಾ ಮತ್ತು ಉಕ್ರೇನ್ ಪ್ರಾರಂಭವಾದ ಯುದ್ದದ ಭವಿಷ್ಯವಾಣಿಯನ್ನು ಭಾರತೀಯ ಪಂಚಾಂಗದ ಮೂಲಕ ಒಂದು ವರ್ಷದ ಹಿಂದೆಯೇ ಮಾಡಲಾಗಿತ್ತು. ಈ ಯುದ್ಧದ ಹಿಂದೆ ಅಂಗಾರಕ ಯೋಗವಿದೆ ಎಂದು ಜ್ಯೋತಿಷಿ ಪಂಡಿತ್ ಮುಖೇಶ್ ಮಿಶ್ರಾ ಹೇಳಿದ್ದಾರೆ.

ಅಮೇರಿಕದಿಂದ ರಶಿಯಾದ ರಾಷ್ಟ್ರಾಧ್ಯಕ್ಷ ಪುತಿನರ ಮೇಲೆ ವೈಯಕ್ತಿಕ ನಿರ್ಬಂಧ

ರಶಿಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹಾಗೂ ವಿದೇಶಮಂತ್ರಿ ಸೆರಗೆ ಲಾವಹರೋವಹ ಇವರನ್ನು ರಶಿಯಾದ ಯುಕ್ರೆನ್ ಮೇಲಿನ ಆಕ್ರಮಣಕ್ಕಾಗಿ ನೇರ ಜವಾಬ್ದಾರಿಯನ್ನು ಮಾಡಿ ಅಮೇರಿಕವು ಅವರ ಮೇಲೆ ವೈಯಕ್ತಿಕ ನಿರ್ಬಂಧವನ್ನು ಹಾಕಿದೆ.

ಯುದ್ಧ ಗೆಲ್ಲಲು ೫೦ ಸಾವಿರ ಸೈನಿಕರನ್ನು ಕಳೆದುಕೊಳ್ಳಲು ಸಿದ್ಧರಾಗಿರುವ ಪುತಿನ್ !

ರಷ್ಯಾ ರಾಸಾಯನಿಕ ಶಸ್ತ್ರಾಸ್ತ್ರಗಳ ಪ್ರಯೋಗ ಮಾಡಬಹುದು. ಯಾವುದೇ ಪರಿಸ್ಥಿತಿಯಲ್ಲಿ ಈ ಯುದ್ಧವನ್ನು ಗೆಲ್ಲಲು ರಷ್ಯಾದ ರಾಷ್ಟ್ರಾಧ್ಯಕ್ಷ ಬ್ಲಾದಿಮೀರ ಪುತಿನ್ ಇವರು ಸ್ವಂತದ ೫೦ ಸಾವಿರ ಸೈನಿಕರನ್ನು ಕಳೆದುಕೊಳ್ಳಲು ಸಿದ್ಧರಾಗಿದ್ದಾರೆ

ರಶಿಯಾ ವಿರುದ್ಧ ಯುಕ್ರೇನ್ ನಿಂದ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಮೋರೆ

ರಷ್ಯಾ ವಿರುದ್ಧ ಯುಕ್ರೇನ್ ಹೆಗನಲ್ಲಿನ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಮೊರೆಯಿಟ್ಟಿದೆ. ಯುಕ್ರೇನ್‌ನ ರಾಷ್ಟ್ರಾಧ್ಯಕ್ಷ ಬ್ಲೂದಿಮೇರ್ ಝೆಲಂಕ್ಸಿ ಇವರು ಟ್ವೀಟ್ ಮಾಡಿ ಈ ಮಾಹಿತಿ ನೀಡಿದರು. ರಷ್ಯಾದ ಸೈನ್ಯ ಯುಕ್ರೇನ್‌ನಲ್ಲಿ ಭೀಕರ ನರಸಂಹಾರ ಮಾಡಿದೆ.

ಜರ್ಮನಿಯು ಯುಕ್ರೆನ್‍ಗೆ ಶಸ್ತ್ರಾಸ್ತ್ರವನ್ನು ಪೂರೈಸುವುದು

ಜರ್ಮನಿಯು ಯುಕ್ರೆನಗೆ ಸಹಾಯ ಮಾಡುವುದಕ್ಕಾಗಿ 1 ಸಾವಿರ ಟ್ಯಾಂಕ್, ವಿರೋಧಿ ಶಸ್ತ್ರಗಳು, ಹಾಗೆಯೇ 500 ‘ಸ್ಟಿಂಗರ’ ಕ್ಷಿಪಣಿಗಳನ್ನು ಕಳುಹಿಸಲಿದೆ.

ಯುಕ್ರೆನ್‍ನ ಖಾರಕೀವ್ ನಗರದ ಮೇಲೆ ರಷ್ಯಾದ ತೀವ್ರ ದಾಳಿ

ರಶಿಯಾದ ಸೈನಿಕರು ವಾಯುವಾಹಿನಿಯನ್ನು ಧ್ವಂಸ ಮಾಡಿದ್ದರಿಂದ ನಗರದಲ್ಲಿ ಹಾಹಾಕಾರ

ಪುತಿನ್ ಇವರು ಜೋ ಬಾಯಿಡೆನರನ್ನು ಡೋಲಿನಂತೆ ಬಾರಿಸುತ್ತಿದ್ದಾರೆ – ಅಮೇರಿಕದ ಮಾಜಿ ರಾಷ್ಟ್ರಧ್ಯಕ್ಷ ಡೋನಾಲ್ಡ ಟ್ರಂಪ್‍ರ ಟೀಕೆ

ನನ್ನ ಆಡಳಿತಾವಧಿಯಲ್ಲಿ ಯುದ್ಧವಾಗಲಿಲ್ಲ. ನಾನು ಅಮೇರಿಕವನ್ನು ಯುದ್ಧದಿಂದ ಹೊರತೆಗೆದೆನು. ದುರ್ಬಲ ರಾಷ್ಟ್ರಾಧ್ಯಕ್ಷರಿಂದ ಈ ಜಗತ್ತು ಯಾವಾಗಲೂ ಹೆದರಿಕೆಯ ನೆರಳಲ್ಲಿಯೇ ಇರುವುದು ಎಂದು ಅಮೇರಿಕದ ಮಾಜಿ ರಾಷ್ಟ್ರಾಧ್ಯಕ್ಷ ಡೋನಾಲ್ಢ ಟ್ರಂಪ್‍ರು ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ಟೀಕಿಸಿದರು

ಮೂರನೇ ಮಹಾಯುದ್ಧವನ್ನು ತಪ್ಪಿಸ ಬೇಕಾದರೆ, ರಷ್ಯಾದ ಮೇಲೆ ನಿರ್ಬಂಧ ಹೇರುವುದು ಅತ್ಯಂತ ಆವಶ್ಯಕ ! – ಅಮೇರಿಕಾ

ಮೂರನೇ ಜಾಗತಿಕ ಮಹಾಯುದ್ಧವನ್ನು ತಪ್ಪಿಸಬೇಕಾದರೆ ರಷ್ಯಾದ ಮೇಲೆ ನಿರ್ಬಂಧ ಹೇರುವುದು ಅತ್ಯಂತ ಆವಶ್ಯಕವಾಗಿದೆ, ಎಂದು ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬಾಯಡೆನ್‌ರವರು ಹೇಳಿದ್ದಾರೆ. ರಷ್ಯಾದ ವಾರ್ತಾಸಂಸ್ಥೆಯಾದ ‘ತಾಸ ಈ ಸಮಾಚಾರವನ್ನು ಪ್ರಸಾರ ಮಾಡಿದೆ.