ಕೀವ (ಯುಕ್ರೇನ)ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ರೊಮಾನಿಯಾದ ಗಡಿಯಿಂದ ಕರೆತರಲು ವಿಶೇಷ ರೈಲು ಸೇವೆ

ಕೀವ (ಯುಕ್ರೇನ) – ಇಲ್ಲಿನ ಸಂಚಾರ ನಿಷೇಧಾಜ್ಞೆಯನ್ನು ಹಿಂಪಡೆದ ನಂತರ ಭಾರತೀಯ ವಿದ್ಯಾರ್ಥಿಗಳನ್ನು ದೇಶದಿಂದ ಹೊರಗೆ ತರಲು ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗಿದೆ. ಈ ರೈಲಿನಿಂದ ಭಾರತೀಯ ವಿದ್ಯಾರ್ಥಿಗಳನ್ನು ರೊಮಾನಿಯಾದ ಗಡಿಯಿಂದ ಕರೆತರಲಾಗುವುದು. ಅನಂತರ ವಿಶೇಷ ವಿಮಾನಗಳ ಮೂಲಕ ಈ ವಿದ್ಯಾರ್ಥಿಗಳನ್ನು ರೊಮಾನಿಯಾದಿಂದ ಭಾರತಕ್ಕೆ ಕರೆತರಲಾಗುವುದು. ಸದ್ಯ ಈ ವಿದ್ಯಾರ್ಥಿಗಳು ಬಂಕರ್ ಗಳಲ್ಲಿ ಆಶ್ರಯ ಪಡೆದಿದ್ದಾರೆ.