ರಶಿಯಾ ವಿರುದ್ಧ ಯುಕ್ರೇನ್ ನಿಂದ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಮೋರೆ

ಕೀವ (ಯುಕ್ರೇನ್) – ರಷ್ಯಾ ವಿರುದ್ಧ ಯುಕ್ರೇನ್ ಹೆಗನಲ್ಲಿನ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಮೊರೆಯಿಟ್ಟಿದೆ. ಯುಕ್ರೇನ್‌ನ ರಾಷ್ಟ್ರಾಧ್ಯಕ್ಷ ಬ್ಲೂದಿಮೇರ್ ಝೆಲಂಕ್ಸಿ ಇವರು ಟ್ವೀಟ್ ಮಾಡಿ ಈ ಮಾಹಿತಿ ನೀಡಿದರು. ರಷ್ಯಾದ ಸೈನ್ಯ ಯುಕ್ರೇನ್‌ನಲ್ಲಿ ಭೀಕರ ನರಸಂಹಾರ ಮಾಡಿದೆ. ಆದ್ದರಿಂದ ನ್ಯಾಯಾಲಯವು ರಷ್ಯಾಗೆ ಯುದ್ಧ ನಿಲ್ಲಿಸುವಂತೆ ಆದೇಶ ನೀಡಬೇಕು, ಎಂದು ಯುಕ್ರೇನ್ ತನ್ನ ಮನವಿಯಲ್ಲಿ ಹೇಳಿದೆ. ನ್ಯಾಯಾಲಯವು ಇದರಲ್ಲಿ ಹಸ್ತಕ್ಷೇಪ ಮಾಡಿ ಈ ಅರ್ಜಿಯ ಮೇಲೆ ತಕ್ಷಣ ವಿಚಾರಣೆ ನಡೆಸಬೇಕೆಂದು, ಯುಕ್ರೇನ್‌ನಿಂದ ಒತ್ತಾಯಿಸಲಾಗಿದೆ.