ಯುದ್ಧದ ಮೇಲೆ ಪ್ರತಿದಿನ ೧ ಲಕ್ಷ ೧೨ ಸಾವಿರ ಕೋಟಿ ರೂಪಾಯಿ ಖರ್ಚಾಗುತ್ತಿದೆ !
ಮಾಸ್ಕೋ (ರಷ್ಯಾ) – ರಷ್ಯಾವು ಯುಕ್ರೇನಿನ ಮೇಲೆ ಆಕ್ರಮಣ ಮಾಡಿ ೫ ದಿನಗಳಾದವು; ಆದರೆ ಇನ್ನೂ ರಷ್ಯಾಗೆ ಯುಕ್ರೇನನ್ನು ಸೋಲಿಸಲು ಸಾಧ್ಯವಾಗಲಿಲ್ಲ. ರಷ್ಯಾವು ‘ಯುಕ್ರೇನಿನ ಮೇಲೆ ಬೇಗನೇ ಹಿಡಿತವನ್ನು ಸಾಧಿಸಬಹುದು’ ಎಂದು ತಿಳಿದಿತ್ತು; ಆದರೆ ಅದು ತಪ್ಪಾಯಿತು. ಈ ಯುದ್ಧವು ಇನ್ನೂ ೧೦ ದಿನಗಳ ವರೆಗೆ ನಡೆದರೆ ರಷ್ಯಾವು ದಿವಾಳಿತನದ ಹೊಸ್ತಿಲನ್ನು ತಲುಪಲಿದೆ. ಪುತಿನರವರು ಸಂಧಾನ ಮಾತುಕತೆಯನ್ನು ನಡೆಸಲೇ ಬೇಕಾಗುವುದು, ಎಂಬ ಹೇಳಿಕೆಯನ್ನು ಯುರೋಪಿನಲ್ಲಿರುವ ಎಸ್ಟೋನಿಯಾ ಎಂಬ ದೇಶದ ಮಾಜಿ ರಕ್ಷಣಾ ಮಂತ್ರಿಗಳಾದ ತೆರಸರವರು ನೀಡಿದ್ದಾರೆ. ಯುಕ್ರೇನಿನ ಮೇಲಿನ ರಷ್ಯಾದ ಆಕ್ರಮಣದ ಹಿಂದಿರುವ ನಿಜವಾದ ಉದ್ದೇಶವೆಂದರೆ ‘ಯುಕ್ರೇನನ್ನು ‘ನೆಟೊ’ದಲ್ಲಿ ಸೇರದಂತೆ ತಡೆಯುವುದು’ ಆಗಿತ್ತು.
उल्टा पड़ सकता है रूस का दांव:युद्ध 10 दिन से ज्यादा चला तो रूस कंगाली की कगार पर होगा, यूक्रेन पर जल्द कब्जे की गलतफहमीhttps://t.co/OBWVROewer#russia #UkraineRussiaWar #economicloss pic.twitter.com/0ToUc5aaSQ
— Dainik Bhaskar (@DainikBhaskar) February 28, 2022
೧. ಸದ್ಯ ಪ್ರತಿದಿನ ಯುದ್ಧದ ಮೇಲೆ ೧ ಲಕ್ಷ ೧೨ ಸಾವಿರ ಕೋಟಿ ರೂಪಾಯಿಗಳು ಖರ್ಚಾಗುತ್ತಿವೆ, ಇನ್ನೊಂದೆಡೆಯಲ್ಲಿ ರಷ್ಯಾದ ಚಲಾವಣೆಯ ನಾಣ್ಯಪದ್ಧತಿಯಾದ ‘ರೂಬಲ’ನ ಮೌಲ್ಯವು ಈ ತಿಂಗಳಿನಲ್ಲಿ ಶೇ. ೧೦ರಷ್ಟು ಕಡಿಮೆಯಾಗಿದೆ. ಪಾಶ್ಚಾತ್ಯ ದೇಶಗಳು ರಷ್ಯಾದೊಂದಿಗೆ ಡಾಲರ, ಯುರೋ ಮತ್ತು ಪೌಂಡ ಮೂಲಕ ಮಾಡಲಾಗುವ ವ್ಯಾಪಾರದ ಮೇಲೆ ನಿರ್ಬಂಧ ಹೇರಿವೆ. ಇಂತಹ ಸ್ಥಿತಿಯಲ್ಲಿ ‘ರೂಬಲ’ನ ಮೌಲ್ಯವು ಇನ್ನೂ ಕುಸಿಯಬಹುದು.
೨. ಯುದ್ಧದ ೩ ವಾರಗಳ ಹಿಂದೆಯೇ ರಷ್ಯಾದ ಸಂಸ್ಥೆಗಳಿಗೆ ಹಾನಿಯಾಗಲು ಆರಂಭವಾಗಿತ್ತು. ಫೆಬ್ರುವರಿ ೧೦ರ ನಂತರ ಅಲ್ಲಿನ ಶೇರ ಮಾರುಕಟ್ಟೆಯು ಶೇ. ೪೦ರಷ್ಟು ಕುಸಿದಿದೆ. ಇದರಿಂದ ರಷ್ಯಾದ ಸಂಸ್ಥೆಗಳಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯನ್ನು ಸಹಿಸಬೇಕಾಗುತ್ತಿದೆ.
೩. ಯುಕ್ರೇನಿನ ಮೇಲಿನ ಆಕ್ರಮಣದ ನಂತರ ರಷ್ಯಾವು ನೆಟೋದಲ್ಲಿ ಸಹಭಾಗಿಯಾಗುವ ವಿಚಾರವಿರುವ ಫಿನಲ್ಯಾಂಡ್ ಮತ್ತು ಸ್ವೀಡನನ ಸುತ್ತಮುತ್ತಲಿನ ದೇಶಗಳ ಮೇಲೂ ಆಕ್ರಮಣ ಮಾಡಬಹುದು. ಇನ್ನೊಂದು ಕಡೆಯಲ್ಲಿ ಯುರೋಪ ಮತ್ತು ಅಮೇರಿಕಾ ಹೇರಿರುವ ವಿವಿಧ ಆರ್ಥಿಕ ನಿರ್ಬಂಧಗಳಿಂದಾಗಿ ರಷ್ಯಾದ ಅರ್ಥವ್ಯವಸ್ಥೆಗೆ ಹಾನಿಯಾಗುತ್ತಿದೆ.
೪. ಅಮೇರಿಕಾದ ಸಂರಕ್ಷಣಾ ತಜ್ಞರ ಹೇಳಿಕೆಯಂತೆ ‘ಈ ಯುದ್ಧವು ಒಂದು ತಿಂಗಳು ನಡೆದರೆ ರಷ್ಯಾಗೆ ಲಾಭಕ್ಕಿಂತಯೂ ಹಾನಿಯೇ ಹೆಚ್ಚು. ಕೀವ ಮತ್ತು ಖಾರಕೀವನಲ್ಲಿ ಯುಕ್ರೇನಿನ ರಣರಂಗವು ಭದ್ರವಾಗಿರಲು ಯುರೋಪಿನ ಅನೇಕ ದೇಶಗಳು ಯುಕ್ರೇನಿಗೆ ಶಸ್ತ್ರಪೂರೈಕೆ ಮಾಡುತ್ತಿದೆ. ಈಗ ರಷ್ಯಾವನ್ನು ಹೆಚ್ಚಿನ ಸಮಯದ ವರೆಗೆ ಯುದ್ಧದಲ್ಲಿ ಸಿಲುಕಿಸುವುದು ಯುರೋಪಿನ ಉದ್ದೇಶವಾಗಿದೆ’.