ಯುಕ್ರೆನ್‍ನ ಖಾರಕೀವ್ ನಗರದ ಮೇಲೆ ರಷ್ಯಾದ ತೀವ್ರ ದಾಳಿ

ರಶಿಯಾದ ಸೈನಿಕರು ವಾಯುವಾಹಿನಿಯನ್ನು ಧ್ವಂಸ ಮಾಡಿದ್ದರಿಂದ ನಗರದಲ್ಲಿ ಹಾಹಾಕಾರ

ಕಿವ್ (ಯುಕ್ರೆನ್) – ಯುಕ್ರೆನನ ಖಾರಕೀವ್ ನಗರದ ಮೇಲೆ ರಶಿಯಾದ ಸೈನಿಕರು ತೀವ್ರ ದಾಳಿ ಮಾಡಿದುದರಿಂದ ನಗರದಲ್ಲಿ ಭೀತಿ ವಾತಾವರಣವಿದೆ. ಯುಕ್ರೆನನ ರಾಜಧಾನಿ ಕಿವ್ ನಗರದ ನಂತರ ಖಾರಕೀವ್ ಇದು ಯುಕ್ರೆನನಲ್ಲಿಯ ಎರಡನೆ ದೊಡ್ಡ ನಗರವಾಗಿದೆ. ರಶಿಯಾದ ಸೈನಿಕರು ನಗರದ ವಾಯುವಾಹಿನಿಯನ್ನು ಸ್ಪೋಟಿಸಿದ ನಂತರ ನಗರದಲ್ಲಿ ಹಾಹಾಕಾರವೆದ್ದಿದೆ.

ಅನೇಕರಿಗೆ ಉಸಿರಾಡಲೂ ತೊಂದರೆಯಾಗುವುದು

ವಾಯುವಾಹಿನಿಯು ಧ್ವಂಸವಾಗಿದ್ದರಿಂದ ನಗರದಲ್ಲಿ ದೊಡ್ಡದಾಗಿ ಹೊಗೆಯು ಹರಡಿದೆ. ಈ ಸ್ಥಿತಿಯನ್ನು ಗಮನದಲ್ಲಿರಿಸಿ ಆಡಳಿತವು ಜಾಗರೂಕತೆ ವಹಿಸಲು ಎಚ್ಚರಿಕೆಯನ್ನು ನೀಡಿದೆ. ಜನರಿಗೆ ಮನೆಯ ಬಾಗಿಲು ಹಾಗೂ ಕಿಟಕಿಯನ್ನು ಮುಚ್ಚಲು ಹೇಳಲಾಗಿದ್ದು `ಹೆಚ್ಚೆಚ್ಚು ನೀರು ಕುಡಿಯಿರಿ ಮತ್ತು ಮೂಗಿನ ಮೇಲೆ ಒದ್ದೆ ಬಟ್ಟೆ ಇಡಿ’, ಎಂಬ ಸಲಹೆಯನ್ನು ನೀಡಲಾಗಿದೆ. ಅನೇಕ ನಾಗರಿಕರಿಗೆ ಉಸಿರಾಡಲು ತೊಂದರೆಯಾಗುತ್ತಿದೆ.

ನಗರದ ಸರಕಾರಿ ಕಟ್ಟಡದ ಮೇಲೆ ಹಿಗ್ಗಾಮುಗ್ಗಾ ಗೋಲಿಬಾರ

ಖಾರಕೀವ್ ನಗರವನ್ನು ಹತೋಟಿಯಲ್ಲಿ ತೆಗೆದುಕೊಳ್ಳುವುದಕ್ಕಾಗಿ ರಶಿಯಾದ ಸೈನಿಕರು ಭಯಂಕರ ಆಕ್ರಮಣ ಮಾಡಿದ್ದು ಯುಕ್ರೆನ್ ಸೈನಿಕರು ಅದಕ್ಕೆ ಪ್ರತ್ಯುತ್ತರ ನೀಡುತ್ತಿದೆ ಎಂದು ಓರ್ವ ಅಧಿಕಾರಿಯು ಹೇಳಿದ್ದಾನೆ. ಖಾರಕಿವ್ ನಗರ ರಶಿಯಾದ ಸೀಮೆಯಿಂದ 40 ಕಿಲೋಮೀಟರ ದೂರದಲ್ಲಿದೆ. 15 ಲಕ್ಷ ಜನಸಂಖ್ಯೆಯಿರುವ ಈ ನಗರವನ್ನು ರಶಿಯಾ ಸೈನಿಕರು ಗುರಿ ಮಾಡುತ್ತಿದ್ದಾರೆ. ಇಲ್ಲಿಯ ಸರಕಾರಿ ಕಟ್ಟಡಗಳ ಮೇಲು ಗೋಲಿಬಾರ ಮಾಡಲಾಗಿರುವ ಸುದ್ದಿಯಿದೆ.

ಮಾರಿಯುಪೋಲ ನಗರದ ಮೇಲಿನ ಆಕ್ರಮಣದಲ್ಲಿ 10 ಗ್ರೀಕ್‍ರು ಹತ

ರಶಿಯಾದ ಸೈನಿಕರು ಮಾರಿಯುಪೋಲ ನಗರದ ಮೇಲೆ ಮಾಡಿದ ಆಕ್ರಮಣದಲ್ಲಿ 10 ಗ್ರೀಕ್ ನಾಗರಿಕರು ಸಾವನ್ನಪ್ಪಿದ್ದು 6 ಜನರಿಗೆ ಗಾಯಾಳುಗಳಾಗಿದ್ದಾರೆ ಈ ಘಟನೆಯ ನಂತರ ಗ್ರೀಸ್.ನ ರಾಜದೂತರು ರಶಿಯಾದ ರಾಜದೂತರಿಗೆ ಸಮನ್ಸ್ ಜಾರಿಗೆ ಮಾಡಿದ್ದಾರೆ. ಇದರ ಬಗ್ಗೆ ಗ್ರೀಸ್‍ನ ಪ್ರದಾನಮಂತ್ರಿ ಕಾರಿಕೋಸ ಮಿತಸೋಟಾಕಿಸರು ಟ್ವಿಟ್ ಮಾಡಿ ‘ರಶಿಯಾದ ಆಕ್ರಮಣದಲ್ಲಿ 10 ಅಮಾಯಕರು ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು ಇದು ಚಿಂತಾಜನಕವಾಗಿದ್ದು ರಶಿಯಾವು ಈ ಆಕ್ರಮಣವನ್ನು ಕೂಡಲೆ ನಿಲ್ಲಿಸಬೇಕು’. ಎಂದು ರಶಿಯಾಗೆ ಕರೆ ನೀಡಿದೆ.