ಯುದ್ಧ ಗೆಲ್ಲಲು ೫೦ ಸಾವಿರ ಸೈನಿಕರನ್ನು ಕಳೆದುಕೊಳ್ಳಲು ಸಿದ್ಧರಾಗಿರುವ ಪುತಿನ್ !

ಮಾಸ್ಕೋ (ರಷ್ಯಾ) – ರಷ್ಯಾ ರಾಸಾಯನಿಕ ಶಸ್ತ್ರಾಸ್ತ್ರಗಳ ಪ್ರಯೋಗ ಮಾಡಬಹುದು. ಯಾವುದೇ ಪರಿಸ್ಥಿತಿಯಲ್ಲಿ ಈ ಯುದ್ಧವನ್ನು ಗೆಲ್ಲಲು ರಷ್ಯಾದ ರಾಷ್ಟ್ರಾಧ್ಯಕ್ಷ ಬ್ಲಾದಿಮೀರ ಪುತಿನ್ ಇವರು ಸ್ವಂತದ ೫೦ ಸಾವಿರ ಸೈನಿಕರನ್ನು ಕಳೆದುಕೊಳ್ಳಲು ಸಿದ್ಧರಾಗಿದ್ದಾರೆ, ಎಂದು ಬ್ರಿಟಿಷ್ ಗುಪ್ತಚರ ಇಲಾಖೆ ಪ್ರಮುಖ ‘ದಿ ಮಿರರ’ ಈ ವಾರ್ತಾ ಸಮೂಹಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. ಪುತಿನ್ ಇವರಿಗೆ ಸೈನಿಕರ ಸಾವಿನ ಚಿಂತೆ ಸ್ವಲ್ಪವೂ ಇಲ್ಲ ಎಂದು ಮೂಲಗಳು ಹೇಳಿವೆ. ಈವರೆಗೆ ರಷ್ಯಾದ ೩ ಸಾವಿರದ ೫೦೦ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.