ವಿದ್ಯೆಯೇ ಆತ್ಮಜ್ಞಾನ  !

ಪರಾತ್ಪರ ಗುರು ಡಾ. ಆಠವಲೆ

‘ಸಾಧಕನು ಸಾಧನೆಯನ್ನು ಮಾಡುವಾಗ ಸಾಧನೆಯ ಮಟ್ಟದಲ್ಲಿ ಎಷ್ಟೇ ಕೃತಿಗಳನ್ನು ಮಾಡಿದರೂ ಯಾವಾಗ ಅವನಿಗೆ ಆತ್ಮದ ನಿಜವಾದ ಸ್ವರೂಪದ ಜ್ಞಾನವಾಗುತ್ತದೆಯೋ, ಅದುವೇ ಸರ್ವಶ್ರೇಷ್ಠವಾಗಿರುತ್ತದೆ. ವಿವಿಧ ವಿದ್ಯೆಗಳ ಮಾಧ್ಯಮದಿಂದಲೇ ಈ ಜ್ಞಾನ ಸಿಗುತ್ತಿರುತ್ತದೆ’.

– (ಪರಾತ್ಪರ ಗುರು) ಡಾ. ಆಠವಲೆ (೧೧.೧.೨೦೨೨)

ಪ್ರತಿಯೊಬ್ಬ ಜಿಜ್ಞಾಸುವಿನ ಉದ್ಧಾರಕ್ಕಾಗಿಯೇ ಸನಾತನದ ಕಾರ್ಯವಿರುತ್ತದೆ !

‘ಭಗವಂತನು ತನ್ನ ಕೇವಲ ಒಬ್ಬನೇ ಭಕ್ತನಿಗಾಗಿಯೂ ಅವತರಿಸುತ್ತಾನೆ’. ಇದೇ ತತ್ತ್ವದೊಂದಿಗೆ ಸನಾತನದ ಕಾರ್ಯವು ನಡೆಯುತ್ತಿದೆ, ಉದಾ. ಸನಾತನ ಸಂಸ್ಥೆಯ ಅಧ್ಯಾತ್ಮಪ್ರಚಾರ ಕಾರ್ಯಕ್ಕೆ ಒಂದೆಡೆ ಉತ್ತಮ ಬೆಂಬಲ ಸಿಗದಿದ್ದರೂ ಆ ಪ್ರದೇಶದಲ್ಲಿರುವ ಒಬ್ಬ ಜಿಜ್ಞಾಸುವಿಗಾಗಿ ಅಲ್ಲಿ ಕಾರ್ಯವನ್ನು ಮಾಡಲಾಗುತ್ತದೆ. ಆ ಒಬ್ಬ ಜಿಜ್ಞಾಸುವಿನ ಆಧ್ಯಾತ್ಮಿಕ ಪ್ರಗತಿಯಾಗುವುದು ಮಹತ್ವದ್ದಾಗಿದೆ. ಯಾವುದಾದರೊಂದು ಗ್ರಂಥವನ್ನು ಮುದ್ರಿಸಿದಾಗ, ಅದು ತುಂಬಾ ಮಾರಾಟವಾಗದಿದ್ದರೂ ನಡೆಯುತ್ತದೆ; ಆದರೆ ‘ಯಾವ ಜಿಜ್ಞಾಸುವಿಗೆ ಅದರ ಅವಶ್ಯಕತೆಯಿದೆಯೋ ಆತನಿಗೆ ಅದು ಸಿಗಬೇಕು’ ಎಂಬ ಉದ್ದೇಶದಿಂದ ಅದನ್ನು ಮುದ್ರಿಸಲಾಗುತ್ತದೆ.

– (ಪರಾತ್ಪರ ಗುರು) ಡಾ. ಆಠವಲೆ (೨೫.೧.೨೦೨೨)

ಆಧ್ಯಾತ್ಮಿಕ ಸಾಮರ್ಥ್ಯವಿಲ್ಲದವರಿಗೆ ಸಂತರ ‘ಸಂತತ್ವ’ವನ್ನು ಗುರುತಿಸಲು ಸಾಧ್ಯವಿರುವುದಿಲ್ಲ, ಅವರು ಸಂತರನ್ನು ‘ಅವರು ಸಂತರಲ್ಲ’ ಎಂದು ಹೇಳುವುದು ಎಂದರೆ, ವೈದ್ಯಕೀಯ ಶಿಕ್ಷಣ ಇಲ್ಲದವರು ಒಬ್ಬ ವೈದ್ಯರನ್ನು ‘ಅವರು ವೈದ್ಯರಲ್ಲ’, ಎಂದು ಹೇಳುವ ಹಾಗೆ ಹಾಸ್ಯಾಸ್ಪದವಿದೆ.

– (ಪರಾತ್ಪರ ಗುರು) ಡಾ. ಆಠವಲೆ (೮.೧.೨೦೨೨)