ವೃದ್ಧಾಪ್ಯವು ಇದು ಒಂದು ರೀತಿಯಲ್ಲಿ ದೇವರ ಆಶೀರ್ವಾದವೇ ಇರುತ್ತದೆ !

ಪರಾತ್ಪರ ಗುರು ಡಾ. ಆಠವಲೆ

‘ಮನುಷ್ಯ ಹುಟ್ಟಿದಾಗಿನಿಂದ ವಯಸ್ಕರನಾಗುವವರೆಗೂ ಅವನು ತನ್ನ ಸಾಮರ್ಥ್ಯದ ಬಗ್ಗೆ ಅಭಿಮಾನ, ಬಂಧುಬಳಗ, ನಾನಾ ವಿಷಯಗಳ ಆಸಕ್ತಿ ಮುಂತಾದ ಅನೇಕ ಸಾಂಸಾರಿಕ ವಿಷಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುತ್ತಾನೆ. ಈ ಸ್ಥಿತಿಯಲ್ಲಿ ಅವನಿಗೆ ‘ನನಗೆ ಸಾವು ಬೇಡ’ ಎಂದೆನಿಸುತ್ತದೆ. ಅದರ ನಂತರ, ವೃದ್ಧಾಪ್ಯದಲ್ಲಿ ವಿವಿಧ ಕಾಯಿಲೆಗಳಿಂದ ದುಃಖವನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಅವನಿಗೆ ‘ಸಾವು ಬೇಗ ಬರಬೇಕು’ ಎಂದೆನಿಸುತ್ತದೆ. ಆದ್ದರಿಂದ ವೃದ್ಧಾಪ್ಯವು ಒಂದು ರೀತಿಯಲ್ಲಿ ಮಾಯೆಯಿಂದ ನಮ್ಮನ್ನು ಮುಕ್ತಗೊಳಿಸುವುದಕ್ಕಾಗಿ ದೇವರು ನೀಡಿದ ಆಶೀರ್ವಾದವೇ ಆಗಿದೆ, ಆದ್ದರಿಂದ ಮನುಷ್ಯನು ಸ್ವತಃ ತನ್ನ ದೇಹವನ್ನು ತ್ಯಜಿಸಲು ಸಿದ್ಧನಾಗುತ್ತಾನೆ.

– (ಪರಾತ್ಪರ ಗುರು) ಡಾ. ಆಠವಲೆ (೧೧.೧.೨೦೨೨)

ಕಲಿಯುಗದಲ್ಲಿ ಸ್ವಭಾವದೋಷ ಮತ್ತು ಅಹಂ ಇವುಗಳಿಂದಾಗಿ ಮದುವೆಯನ್ನು ಉಳಿಸಿಕೊಳ್ಳುವುದು ಕಠಿಣವಾಗುತ್ತಿರುವುದು !

‘ಸತ್ಯಯುಗದಿಂದ ದ್ವಾಪರಯುಗದ ವರೆಗೆ ಎಲ್ಲ ಜನರೂ ಸಾತ್ತ್ವಿಕವಾಗಿದ್ದರು. ಅವರಲ್ಲಿ ಸ್ವಭಾವದೋಷ ಅಥವಾ ಅಹಂ ಕಡಿಮೆ ಇರುತ್ತಿತ್ತು. ಅವರು ಸಾಧನೆ ಮಾಡುತ್ತಿದ್ದರಿಂದ ಅವರು ಪರಸ್ಪರರನ್ನು ಅರ್ಥಮಾಡಿಕೊಳ್ಳುತ್ತಿದ್ದರು. ಕಲಿಯುಗದಲ್ಲಿ ಸ್ವಭಾವದೋಷ ಮತ್ತು ಅಹಂ ಇವುಗಳ ತೀವ್ರತೆ ಹೆಚ್ಚುತ್ತಿರುವುದರಿಂದ ಮದುವೆಯನ್ನು ಉಳಿಸಿಕೊಳ್ಳುವುದು ಕಠಿಣವಾಗುತ್ತಿದೆ !

– ಪರಾತ್ಪರ ಗುರು ಡಾ. ಆಠವಲೆ (೭.೧೨.೨೦೨೧)

ಕರ್ಮಯೋಗ ಮತ್ತು ಭಕ್ತಿಯೋಗಗಳಿಗಿಂತ ಜ್ಞಾನಯೋಗವನ್ನು ಆಚರಣೆಗೆ ತರುವುದು ಕಠಿಣ !

‘ಕರ್ಮಯೋಗದಲ್ಲಿ ಕೃತಿಯ ಭಾಗ ಹೆಚ್ಚಿರುವುದರಿಂದ ಅದು ದೈಹಿಕ ಮಟ್ಟದಲ್ಲಿರುತ್ತದೆ. ಭಕ್ತಿಯು ಮನಸ್ಸಿನ ಅವಸ್ಥೆಯಾಗಿರುವುದರಿಂದ ಭಕ್ತಿಯೋಗವು ಮಾನಸಿಕ ಸ್ತರದಲ್ಲಿರುತ್ತದೆ, ಆದರೆ ‘ಜ್ಞಾನ’ ಇದು ಬುದ್ಧಿಗೆ ಸಂಬಂಧಿಸಿದ್ದರಿಂದ ಜ್ಞಾನಯೋಗವು ಬೌದ್ಧಿಕ ಸ್ತರದಲ್ಲಿರುತ್ತದೆ. ಆದ್ದರಿಂದ ಕರ್ಮಯೋಗ ಮತ್ತು ಭಕ್ತಿಯೋಗ ಇವುಗಳ ತುಲನೆಯಲ್ಲಿ ಜ್ಞಾನಯೋಗವನ್ನು ಆಚರಣೆಗೆ ತರುವುದು ಕಠಿಣವಿದೆ.

– (ಪರಾತ್ಪರ ಗುರು) ಡಾ. ಆಠವಲೆ (೧೧.೧.೨೦೨೨)