ಯಾರ ಮಾಧ್ಯಮದಿಂದ ಚಮತ್ಕಾರಗಳು ಸಂಭವಿಸುತ್ತವೆ, ಅವರ ಮೇಲಾಗುವ ಆಧ್ಯಾತ್ಮಿಕ ಪರಿಣಾಮಗಳು !
೧. ಕಡಿಮೆ ಆಧ್ಯಾತ್ಮಿಕ ಮಟ್ಟದವರು : ‘ನಾನು ಈ ಚಮತ್ಕಾರ ಮಾಡಿದ್ದೇನೆ’ ಎಂದೆನಿಸಿ ಅವರ ಅಹಂಕಾರವು ಹೆಚ್ಚಾಗುತ್ತದೆ. ಅದರಿಂದ ಅವರ ಆಧ್ಯಾತ್ಮಿಕ ಮಟ್ಟವು ಕಡಿಮೆಯಾಗುತ್ತದೆ.
೨. ಹೆಚ್ಚು ಆಧ್ಯಾತ್ಮಿಕ ಮಟ್ಟದವರು : ‘ಈಶ್ವರನು ಈ ಚಮತ್ಕಾರವನ್ನು ಮಾಡಿದನು’ ಎಂಬ ಅರಿವು ಇರುವುದರಿಂದ, ಈಶ್ವರನ ಬಗ್ಗೆ ಅವರ ಭಾವವು ಹೆಚ್ಚಾಗುತ್ತ ಹೋಗುತ್ತದೆ. ಅದರಿಂದ ಅವರ ಆಧ್ಯಾತ್ಮಿಕ ಮಟ್ಟವು ಹೆಚ್ಚಾಗುತ್ತ ಹೋಗುತ್ತದೆ.
– (ಪರಾತ್ಪರ ಗುರು) ಡಾ. ಆಠವಲೆ (೨೬.೧೦.೨೦೨೧)
ಕಲಿಯುಗದಲ್ಲಿ ರಜ-ತಮಪ್ರಧಾನ ವಾತಾವರಣದಲ್ಲಿಯೂ ಸಾಧನೆ ಮಾಡಲು ಸಾಧ್ಯವಾಗಬೇಕೆಂದು ‘ಗುರುಕೃಪಾಯೋಗ’ದ ನಿರ್ಮಿತಿ
‘ಹಿಂದಿನ ಯುಗಗಳಲ್ಲಿ ಸಮಾಜವು ಸಾತ್ತ್ವಿಕವಾಗಿತ್ತು. ಆದ್ದರಿಂದ ಜ್ಞಾನಯೋಗ, ಧ್ಯಾನಯೋಗ, ಹಠಯೋಗ ಇವುಗಳಂತಹ ವಿವಿಧ ಮಾರ್ಗಗಳಿಂದ ಸಾಧನೆ ಮಾಡಲು ಸಾಧ್ಯವಿತ್ತು. ಕಲಿಯುಗದಲ್ಲಿ ಸಮಾಜವು ಸಾಧನೆ ಮಾಡುತ್ತಿಲ್ಲವಾದ್ದರಿಂದ ಇಡೀ ವಾತಾವರಣವು ರಜ-ತಮಪ್ರಧಾನವಾಗಿದೆ. ಆದುದರಿಂದ ಹಿಂದಿನ ಕಾಲದಂತೆ ಸಾಧನಾಮಾರ್ಗಗಳಿಂದ ಸಾಧನೆ ಮಾಡುವುದು ತುಂಬಾ ಕಠಿಣವಿದೆ. ಇಂತಹ ರಜ-ತಮಪ್ರಧಾನ ವಾತಾವರಣದಲ್ಲಿಯೂ ಸಾಧನೆ ಮಾಡಲು ಸಾಧ್ಯವಾಗಬೇಕೆಂದು ‘ಗುರುಕೃಪಾಯೋಗ’ದ ನಿರ್ಮಿತಿಯಾಗಿದೆ.
– (ಪರಾತ್ಪರ ಗುರು) ಡಾ. ಆಠವಲೆ (೨೦.೧೧.೨೦೨೧)
ಸನಾತನದ ಸಾಧಕರಿಗೆ ದೊರಕುತ್ತಿರುವ ಕಲ್ಪನಾತೀತ ಆಧ್ಯಾತ್ಮಿಕ ಜ್ಞಾನ !
‘ಕಥೆ ಮತ್ತು ಕಾದಂಬರಿಗಳಲ್ಲಿ ಮಂಡಿಸಲಾಗುವ ಸಂಕಲ್ಪನೆಗಳು ಕಾಲ್ಪನಿಕವಾಗಿರುತ್ತವೆ. ಅದರಲ್ಲಿ ಮಂಡಿಸಲಾದ ವಿಚಾರಗಳಿಗೆ ವಿಜ್ಞಾನದ ಆಧಾರ ಇರುವುದಿಲ್ಲ. ಪ್ರಸ್ತುತ ಸಂಚಾರವಾಣಿಯ ಶೋಧನೆಯು ೧೮-೧೯ ನೇ ಶತಮಾನದಲ್ಲಿನ ಜನರಿಗೆ ಕಲ್ಪನೆಯಾಚೆಗಿನದ್ದಾಗಿತ್ತು. ಕಾಲ್ಪನಿಕ ಮತ್ತು ಕಲ್ಪನಾತೀತ ಈ ಎರಡು ಪದಗಳಲ್ಲಿ ವ್ಯತ್ಯಾಸವಿದೆ. ಅದೇ ರೀತಿ ಸನಾತನದ ಕೆಲವು ಸಾಧಕರಿಗೆ ದೊರಕುವ ವಿವಿಧ ವಿಷಯಗಳ ಮೇಲಿನ ಜ್ಞಾನವು ‘ಕಲ್ಪನಾತೀತ’ವಾಗಿದೆ. ಈ ಜ್ಞಾನದಲ್ಲಿ ನೀಡಲಾಗಿರುವ ಯಾವುದೋ ಒಂದು ಘಟನೆಯ ಹಿಂದಿನ ಆಧ್ಯಾತ್ಮಿಕ ಕಾರಣಮೀಮಾಂಸೆಯನ್ನು ಓದಿದಾಗ ‘ಹೀಗೂ ಇರಲು ಸಾಧ್ಯವಿದೆ ! ಎಂದು ನಾನು ಈ ಮೊದಲು ಯಾವತ್ತೂ ಕಲ್ಪನೆ ಸಹ ಮಾಡಿರಲಿಲ್ಲ !’ ಎಂಬ ವಿಚಾರ ಮನಸ್ಸಿನಲ್ಲಿ ಬರುತ್ತದೆ.
– (ಪರಾತ್ಪರ ಗುರು) ಡಾ. ಆಠವಲೆ (೮.೧೧.೨೦೨೧)