ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

ಸಾಧನೆಯಲ್ಲಿ ಮುಂದೆ ಹೋಗಲು ನಿಮಗೆ ಯಾವಾಗಲೂ ಮುಂದಿನ ಹಂತದ ಗುರುಗಳು ಆವಶ್ಯಕ !

(ಪರಾತ್ಪರ ಗುರು) ಡಾ. ಆಠವಲೆ

‘ಸಾಧನೆ ಮಾಡುವಾಗ, ಗುರುಗಳು ತಮ್ಮ ಶಿಷ್ಯರನ್ನು ಹೆಚ್ಚೆಂದರೆ ತಮ್ಮ ಆಧ್ಯಾತ್ಮಿಕ ಮಟ್ಟದ ತನಕ ತರಲು ಸಾಧ್ಯವಿದೆ, ಉದಾ. ಸಂತರು ಶೇ. ೭೦, ಸದ್ಗುರು ಶೇ. ೮೫ ಮತ್ತು ಪರಾತ್ಪರ ಗುರುಗಳು ಶೇ. ೯೦ ರಷ್ಟು ಮಟ್ಟದ ವರೆಗೆ ತಲುಪಿಸಬಹುದು. ಶೇ. ೯೦ ರಷ್ಟು ಮಟ್ಟದ ನಂತರ ಈಶ್ವರನೇ ಮುಂದಿನ ಮಾರ್ಗದರ್ಶನ ಮಾಡುತ್ತಾನೆ. ಆದ್ದರಿಂದ, ಸಾಧನೆ ಮಾಡುವವನಿಗೆ ಆಯಾ ಹಂತದಲ್ಲಿ ಸಂತರು, ಸದ್ಗುರುಗಳು ಮತ್ತು ಪರಾತ್ಪರ ಗುರುಗಳ ಆವಶ್ಯಕತೆ ಇರುತ್ತದೆ.

– (ಪರಾತ್ಪರ ಗುರು) ಡಾ. ಆಠವಲೆ (೩.೧೧.೨೦೨೧)

ಸ್ವಭಾವದೋಷ ಮತ್ತು ಅಹಂಕಾರ ಇರುವವರಿಂದ ತ್ರಸ್ತರಾಗಬೇಡಿ, ಅವರ ಕುರಿತು ಸಹಾನುಭೂತಿ ತೋರಿ ಸಹಾಯ ಮಾಡಿ !

‘ಸ್ವಭಾವದೋಷ ಮತ್ತು ಅಹಂಕಾರವಿರುವ ವ್ಯಕ್ತಿಯು ನಮ್ಮ ಸಂಪರ್ಕಕ್ಕೆ ಬಂದಾಗ ನಾವು ಅವರ ಸ್ವಭಾವದೋಷಗಳಿಂದಾಗುವ ದುಷ್ಪರಿಣಾಮಗಳಿಂದ ತ್ರಸ್ತರಾಗುತ್ತೇವೆ ಮತ್ತು ಕೆಲವೊಮ್ಮೆ ನಾವು ಅವರ ಮೇಲೆ ಕೋಪಿಸಿಕೊಳ್ಳುತ್ತೇವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನಾವು ಆ ವ್ಯಕ್ತಿಯ ಕೆಲವೊಮ್ಮೆ ಸಂಪರ್ಕಕ್ಕೆ ಬಂದಾಗ, ನಮ್ಮ ಮೇಲೆ ಇಷ್ಟು ಪರಿಣಾಮವಾಗುವುದಾದರೆ ಆ ವ್ಯಕ್ತಿಗೆ ಆ ದೋಷಗಳಿಂದಾಗಿ ಅದೆಷ್ಟು ತೊಂದರೆಗಳು ಆಗುತ್ತಿರಬಹುದು ! ಆದ್ದರಿಂದ ನಾವು ಅವರ ಬಗ್ಗೆ ಸಹಾನುಭೂತಿ ಇಟ್ಟುಕೊಂಡು ಅವನಿಗೆ ದೋಷಗಳ ನಿರ್ಮೂಲನೆಗಾಗಿ ಸಹಾಯ ಮಾಡಬೇಕು.

– (ಪರಾತ್ಪರ ಗುರು) ಡಾ. ಆಠವಲೆ (೩೦.೧೦.೨೦೨೧)

ಹಿಂದೂ ರಾಷ್ಟ್ರದಲ್ಲಿ, ಮನೋರಂಜನೆಯದ್ದಲ್ಲ ಬದಲಾಗಿ ವೀಕ್ಷಕರಿಗೆ ಕಲಿಯಲು ಸಿಗುವ ಮತ್ತು ಅವರ ಸಮಯವು ಸತ್ಕಾರ್ಯದಲ್ಲಿ ತೊಡಗುವಂತಹ ಕಾರ್ಯಕ್ರಮಗಳನ್ನು ತೋರಿಸಲಾಗುವುದು !

ಪ್ರಸ್ತುತ ಜಾಲತಾಣಗಳು, ದೂರದರ್ಶನಗಳ ಮೂಲಕ ಹೆಚ್ಚಾಗಿ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಅವುಗಳಿಂದ ವೀಕ್ಷಕರಿಗೆ ಯಾವುದೇ ಲಾಭವಾಗುವುದಿಲ್ಲ. ಅವರ ಸಮಯವು ವ್ಯರ್ಥವಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ. ಕಲಿಯುಗದಲ್ಲಿ ಮಾನವನ ಆಯುಷ್ಯ ಸೀಮಿತವಾಗಿದೆ. ಈ ಅಲ್ಪಾವಧಿಯಲ್ಲಿ ಮಾನವನ ಜೀವನದ ಮೂಲ ಧ್ಯೇಯವಾದ ‘ಈಶ್ವರಪ್ರಾಪ್ತಿ’ಯನ್ನು ಸಾಧಿಸಲು ಸಮಯವನ್ನು ಹೆಚ್ಚೆಚ್ಚು ಸದುಪಯೋಗಪಡಿಸಿಕೊಳ್ಳುವುದು ಅಗತ್ಯವಾಗಿದೆ. ಈ ಕಾರಣಕ್ಕಾಗಿಯೇ ಹಿಂದೂ ರಾಷ್ಟ್ರದಲ್ಲಿ, ‘ವೀಕ್ಷಕರಿಗೆ ಕಲಿಯುವಂತಹ ಮತ್ತು ಅವರ ಸಮಯವನ್ನು ಸದುಪಯೋಗಪಡಿಸಿಕೊಳ್ಳುವಂತಹ’ ಕಾರ್ಯಕ್ರಮಗಳನ್ನೇ ದೂರದರ್ಶನ ಅಥವಾ ಇತರ ಯಾವುದೇ ಮಾಧ್ಯಮಗಳಲ್ಲಿ ತೋರಿಸಲಾಗುವುದು.

– (ಪರಾತ್ಪರ ಗುರು) ಡಾ. ಆಠವಲೆ.