ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

ಸನಾತನದ ಸಂತರು ಸಮಾಜದಲ್ಲಿ ಏಕೆ ಪ್ರಸಿದ್ಧರಾಗುವುದಿಲ್ಲ ?

ಪರಾತ್ಪರ ಗುರು ಡಾ. ಆಠವಲೆ

ಸಮಾಜದಲ್ಲಿಯ ಹೆಚ್ಚಿನ ಸಂತರು ಜನರಿಗೆ ಅವರ ಸಾಂಸಾರಿಕ, ಮಾನಸಿಕ, ಆರ್ಥಿಕ ಇವುಗಳಂತಹ ಮಾಯೆಯ ಸಮಸ್ಯೆಗಳಿಗೆ ಮಾರ್ಗದರ್ಶನ ಮಾಡುತ್ತಾರೆ ಹಾಗೂ ಉಪಾಯವನ್ನು ಹೇಳುತ್ತಾರೆ. ಕೆಲವರು ಚಮತ್ಕಾರವನ್ನು ಮಾಡುತ್ತಾರೆ. ಅದರಿಂದ ಸಕಾಮ ಸಾಧನೆ ಮಾಡುವ ಜನರಿಗೆ ಅವರತ್ತ ಸೆಳೆತವಿರುತ್ತದೆ. ತದ್ವಿರುದ್ಧ ಸನಾತನದ ಸಂತರು ಕೇವಲ ಈಶ್ವರಪ್ರಾಪ್ತಿಗಾಗಿ ಸಾಧನೆಯನ್ನು ಮಾಡುವಾಗ ಜಿಜ್ಞಾಸು ಹಾಗೂ ಸಾಧಕರಿಗೆ ‘ತನು, ಮನ, ಧನಗಳ ತ್ಯಾಗವನ್ನು ಹೇಗೆ ಮಾಡುವುದು ? ಪ್ರಾರಬ್ಧವನ್ನು ಸಹಿಸುವುದಕ್ಕಾಗಿ ಸಾಧನೆಯನ್ನು ಹೇಗೆ ಹೆಚ್ಚಿಸಬೇಕು ?’, ಇದನ್ನು ಕಲಿಸುತ್ತಾರೆ. ಅದುದರಿಂದ ಸಮಾಜದ ತುಂಬ ಕಡಿಮೆ ಜನರು ಅವರಲ್ಲಿ ಮಾರ್ಗದರ್ಶನ ಪಡೆಯಲು ಬರುತ್ತಾರೆ.

– (ಪರಾತ್ಪರ ಗುರು) ಡಾ. ಆಠವಲೆ (೧೬.೧೧.೨೦೨೧)

ಅಧ್ಯಾತ್ಮದಲ್ಲಿ ಸ್ತ್ರೀಯರು ಪುರುಷರಿಗಿಂತ ಮುಂದಿರಲು ಒಂದು ಕಾರಣ

ಹೆಚ್ಚಿನ ಪುರುಷರು ಅವರ ಕೆಲಸದ ನಿಮಿತ್ತವಾಗಿ ರಜ-ತಮಪ್ರಧಾನವಿರುವ ಸಮಾಜದಲ್ಲಿ ವಿಹರಿಸುತ್ತಿರುತ್ತಾರೆ. ಅವರ ಮೇಲೆ ಅದರ ಪರಿಣಾಮವಾಗಿ ಅವರು ಸಹ ರಜ-ತಮಯುಕ್ತರಾಗುತ್ತಾರೆ. ತದ್ವಿರುದ್ಧ ಹೆಚ್ಚಿನ ಸ್ತ್ರೀಯರು ಮನೆಯಲ್ಲಿಯೇ ಇರುವುದರಿಂದ ಸಮಾಜದಲ್ಲಿಯ ರಜ-ತಮದೊಂದಿಗೆ ಅವರ ಸಂಪರ್ಕ ಬರುವುದಿಲ್ಲ. ಅದುದರಿಂದ ಅವರು ಸಾಧನೆಯಲ್ಲಿ ಬೇಗನೆ ಮುಂದೆ ಹೋಗುತ್ತಾರೆ.

– (ಪರಾತ್ಪರ ಗುರು) ಡಾ. ಆಠವಲೆ (೧೪.೧೧.೨೦೨೧)