ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವೀ ವಿಚಾರ
ಜಾತ್ಯಂಧತೆ, ಸರ್ವ ಧರ್ಮಸಮಭಾವ ಮತ್ತು ಬುದ್ಧಿವಾದಕ್ಕೆ ಬಲಿಯಾದ ಹಿಂದೂಗಳು ಸ್ವಾತಂತ್ರ್ಯದ ನಂತರ ಪ್ರಗತಿ ಮಾಡಿಕೊಂಡ ಒಂದಾದರೂ ಕ್ಷೇತ್ರ ಇದೆಯೇ ? – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಜಾತ್ಯಂಧತೆ, ಸರ್ವ ಧರ್ಮಸಮಭಾವ ಮತ್ತು ಬುದ್ಧಿವಾದಕ್ಕೆ ಬಲಿಯಾದ ಹಿಂದೂಗಳು ಸ್ವಾತಂತ್ರ್ಯದ ನಂತರ ಪ್ರಗತಿ ಮಾಡಿಕೊಂಡ ಒಂದಾದರೂ ಕ್ಷೇತ್ರ ಇದೆಯೇ ? – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಆದಿ ಶಂಕರಾಚಾರ್ಯರು ವಿರೋಧಿ ಪಂಡಿತರೊಂದಿಗೆ ವಾದ – ವಿವಾದ ಮಾಡಿ ಅವರನ್ನು ಪರಾಭವಗೊಳಿಸಿದ್ದರು. ಆದರೆ ಇತ್ತೀಚಿನ ಬುದ್ಧಿ ಪ್ರಾಮಾಣ್ಯವಾದಿಗಳಿಗೆ ಮತ್ತು ಧರ್ಮ ದ್ರೋಹಿಗಳಿಗೆ ವಾದ-ವಿವಾದ ಮಾಡಿ ಪರಾಭವಗೊಳಿಸಲು ಆಗುವುದಿಲ್ಲ ಏಕೆಂದರೆ ಅವರು ಧರ್ಮದ ಬಗ್ಗೆ ಎಳ್ಳಷ್ಟೂ ಅಧ್ಯಯನ ಮಾಡಿರುವುದಿಲ್ಲ.
’ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಇತ್ಯಾದಿ ದೇಶಗಳಷ್ಟೇ ಅಲ್ಲದೆ, ಭಾರತದ ಕಾಶ್ಮೀರ ಸಹಿತ ಎಲ್ಲೆಡೆಯ ಹಿಂದೂಗಳಿಗೆ ಈಗ ಯಾರ ಆಧಾರವೂ ಇಲ್ಲ. ಆಧಾರ ನೀಡಲು ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವುದು ಅನಿವಾರ್ಯವಾಗಿದೆ !’
ಭಗವದ್ಗೀತೆಯನ್ನು ಕೇವಲ ಕಲಿಯುವುದಕ್ಕಷ್ಟೇ ಮಾಡಬೇಡಿ, ಅದರ ಕಲಿಕೆಯನ್ನು ಕೃತಿಯಲ್ಲಿ ತಂದು ಹಿಂದೂ ರಾಷ್ಟ್ರವನ್ನು ಸ್ಥಾಪಿಸಿರಿ ! – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ
ತನು, ಮನ, ಧನ ಮತ್ತು ಅಹಂ ಇವುಗಳ ತ್ಯಾಗವಾಗಿ ಮತ್ತು ಈಶ್ವರನ ಬಗ್ಗೆ ಭಾವ ಮತ್ತು ಭಕ್ತಿ ಹೆಚ್ಚಾದಾಗ ಈಶ್ವರನ ಕೃಪೆಯಾಗುತ್ತದೆ !
‘ಎಲ್ಲಿ ಸ್ವೇಚ್ಛೆಯಿಂದ ವರ್ತಿಸಲು ಪ್ರೋತ್ಸಾಹಿಸಿ ಮಾನವನನ್ನು ಅವನತಿಯತ್ತ ಕರೆದೊಯ್ಯುವ ಬುದ್ಧಿಜೀವಿಗಳು ಮತ್ತು ಎಲ್ಲಿ ಮಾನವನಿಗೆ ಸ್ವೇಚ್ಛೆಯ ತ್ಯಾಗ ಮಾಡುವುದನ್ನು ಕಲಿಸಿ ಈಶ್ವರ ಪ್ರಾಪ್ತಿಯನ್ನು ಮಾಡಿಸುವ ಸಂತರು !’
ಎಲ್ಲಿ ಶಿಶುವಿಹಾರ ಮಟ್ಟದ ಮತ್ತು ಶೋಧ ಕಾರ್ಯ ಮಾಡುವ ಪಾಶ್ಚಾತ್ಯರ ವಿಜ್ಞಾನ; ಮತ್ತು ಎಲ್ಲಿ ಲಕ್ಷಾಂತರ ವರ್ಷಗಳ ಹಿಂದೆಯೇ ಪರಿಪೂರ್ಣತೆ ಪ್ರಾಪ್ತ ಮಾಡಿಕೊಂಡಹಿAದೂ ಧರ್ಮದ ವಿಜ್ಞಾನ !
ವಿಜ್ಞಾನದಲ್ಲಿ ಪ್ರಯೋಗ ಮಾಡುವುದು, ಅಂಕಿಅಂಶಗಳನ್ನು ಸಂಗ್ರಹಿಸಿ ಅದರ ವಿಶ್ಲೇಷಣೆ ಮಾಡುವುದು ಇತ್ಯಾದಿಗಳ ಆಧಾರದಲ್ಲಿ ನಿಷ್ಕರ್ಷಕ್ಕೆ ಬರಲಾಗುತ್ತದೆ. ತದ್ವಿರುದ್ಧ ಅಧ್ಯಾತ್ಮದಲ್ಲಿ ತಕ್ಷಣವೇ ನಿಷ್ಕರ್ಷವು ತಿಳಿಯುತ್ತದೆ !
ಪೊಲೀಸರು ಮತ್ತು ನ್ಯಾಯಾಧೀಶರಿಗೆ ಸಾಧನೆಯನ್ನು ಕಲಿಸುತ್ತಿದ್ದರೆ ಅವರಿಗೆ ಒಂದು ಕ್ಷಣದಲ್ಲಿ ಅಪರಾಧಿ ಯಾರೆಂದು ತಿಳಿಯುತ್ತಿತ್ತು. ಸಾಧನೆಯ ಅಭಾವದಿಂದಾಗಿ ತನಿಖೆ ಮಾಡುವುದಕ್ಕಾಗಿಯೇ ಜನರ ಕೋಟಿಗಟ್ಟಲೆ ಹಣ ಖರ್ಚಾಗುತ್ತಿದೆ. ಈಶ್ವರೀ ರಾಜ್ಯದಲ್ಲಿ ಹೀಗಿರುವುದಿಲ್ಲ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ದೇಶದಲ್ಲಿ ಎಷ್ಟು ಕೋಟಿ ಮನುಷ್ಯರು ಸುಖವಾಗಿ ಬಾಳಬಹುದು, ಅವರಿಗೆ ಸಾಕಾಗುವಷ್ಟು ಆಹಾರ-ನೀರು ದೊರಕುವುದು ಇದರ ಬಗ್ಗೆ ವಿಚಾರ ಮಾಡದ ಇದುವರೆಗಿನ ಸರಕಾರಗಳಿಂದಾಗಿ ದೇಶದ ಜನಸಂಖ್ಯೆ ಸ್ವಾತಂತ್ರ‍್ಯದ ಸಮಯದಲ್ಲಿ ೩೫ ಕೋಟಿ ಇದ್ದದ್ದು ಈಗ ೧೩೫ ಕೋಟಿಗಿಂತಲೂ ಹೆಚ್ಚು ಆಗಿದೆ.