ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವೀ ವಿಚಾರ

ಎಲ್ಲೆಡೆಯ ಹಿಂದೂಗಳಿಗೆ ಹಿಂದೂ ರಾಷ್ಟ್ರವೇ ನಿಜವಾದ ಆಧಾರವಾಗಿದೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

’ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಇತ್ಯಾದಿ ದೇಶಗಳಷ್ಟೇ ಅಲ್ಲದೆ, ಭಾರತದ ಕಾಶ್ಮೀರ ಸಹಿತ ಎಲ್ಲೆಡೆಯ ಹಿಂದೂಗಳಿಗೆ ಈಗ ಯಾರ ಆಧಾರವೂ ಇಲ್ಲ. ಆಧಾರ ನೀಡಲು ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವುದು ಅನಿವಾರ್ಯವಾಗಿದೆ !’

’ಮೋಕ್ಷ ಪ್ರಾಪ್ತಿಯಾಗಲಿ’ ಹೀಗೆ ಅನಿಸುವುದು ಮತ್ತು ’ಧರ್ಮಕಾರ್ಯ ಮಾಡಲು ಪುನಃ ಪುನಃ ಜನ್ಮಸಿಗಬೇಕು’, ಎಂದೆನಿಸುವುದು

’ಸಾಧನೆ ಮಾಡುವವರು  ’ಮುಂದಿನ ಜನ್ಮ ಬೇಡ; ಸಾಧನೆ ಮಾಡಿ ಇದೇ ಜನ್ಮದಲ್ಲಿ ಮೋಕ್ಷ ಪ್ರಾಪ್ತಿಯಾಗಬೇಕು’, ಎಂದು ಇಚ್ಚಿಸುತ್ತಾರೆ ! ತದ್ವಿರುದ್ಧ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿ ಜನರಿಗೆ ’ಧರ್ಮಕಾರ್ಯ ಮಾಡುವುದಕ್ಕಾಗಿ ಪುನಃ ಪುನಃ ಜನ್ಮ ಸಿಗಬೇಕು’ ಎಂದು ಅನಿಸುತ್ತದೆ.’ ಒಂದು ವೇಳೆ ಇದನ್ನು ಸ್ವೇಚ್ಛೆ ಎನ್ನುವುದಾದರೆ, ’ಮುಂದಿನ ಜನ್ಮ ಬೇಡ’, ಎನ್ನುವುದೂ ಸ್ವೇಚ್ಛೆಯೇ ಆಗಿದೆ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ