ಎಲ್ಲಿ ಪಾಶ್ಚಿಮಾತ್ಯರ ಸಮಯ ವ್ಯರ್ಥ ಮಾಡುವ ಶೋಧನೆಯ ಪದ್ಧತಿ ಮತ್ತು ಎಲ್ಲಿ ಒಂದು ಕ್ಷಣದಲ್ಲಿ ಯಾವುದೇ ಪ್ರಶ್ನೆಗೆ ಉತ್ತರ ನೀಡುವ ಭಾರತೀಯರ ಸಾಧನೆ !
ಪಾಶ್ಚಿಮಾತ್ಯ ಶೋಧನೆಯ ಪದ್ಧತಿಯೆಂದರೆ, ಮಾಹಿತಿ ಒಟ್ಟು ಮಾಡಿ ಅದರ ಸಂಖ್ಯಾಶಾಸ್ತ್ರದ ವಿಶ್ಲೇಷಣೆ (statistical analysis) ಮಾಡುವುದು ಮತ್ತು ನಿಷ್ಕರ್ಷ ತೆಗೆಯುವುದು ! ಇದಕ್ಕೆ ತುಂಬಾ ವರ್ಷಗಳು ಬೇಕಾಗುತ್ತದೆ. ತದ್ವಿರುದ್ಧವಾಗಿ ಸಾಧನೆಯಲ್ಲಿ ಪ್ರಗತಿಯಾದ ಮೇಲೆ ಒಂದು ಕ್ಷಣದಲ್ಲಿ ಜಗತ್ತಿನ ಯಾವುದೇ ಪ್ರಶ್ನೆಗೆ ಉತ್ತರ ಸಿಗುತ್ತದೆ !
ಈಶ್ವರನ ಕೃಪೆಯಾಗಲು ಏನು ಮಾಡಬೇಕು ?
ತನು, ಮನ, ಧನ ಮತ್ತು ಅಹಂ ಇವುಗಳ ತ್ಯಾಗವಾಗಿ ಮತ್ತು ಈಶ್ವರನ ಬಗ್ಗೆ ಭಾವ ಮತ್ತು ಭಕ್ತಿ ಹೆಚ್ಚಾದಾಗ ಈಶ್ವರನ ಕೃಪೆಯಾಗುತ್ತದೆ !
– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ