ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವೀ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಈಶ್ವರೀ ರಾಜ್ಯದಲ್ಲಿ ಹೀಗಿರುವುದಿಲ್ಲ !

ಪೊಲೀಸರು ಮತ್ತು ನ್ಯಾಯಾಧೀಶರಿಗೆ ಸಾಧನೆಯನ್ನು ಕಲಿಸುತ್ತಿದ್ದರೆ ಅವರಿಗೆ ಒಂದು ಕ್ಷಣದಲ್ಲಿ ಅಪರಾಧಿ ಯಾರೆಂದು ತಿಳಿಯುತ್ತಿತ್ತು. ಸಾಧನೆಯ ಅಭಾವದಿಂದಾಗಿ ತನಿಖೆ ಮಾಡುವುದಕ್ಕಾಗಿಯೇ ಜನರ ಕೋಟಿಗಟ್ಟಲೆ ಹಣ ಖರ್ಚಾಗುತ್ತಿದೆ. ಈಶ್ವರೀ ರಾಜ್ಯದಲ್ಲಿ ಹೀಗಿರುವುದಿಲ್ಲ !

ಭಾರತವು ಪರಮ ಅಧೋಗತಿಗೆ ತಲುಪಲು ಕಾರಣ !

ಹಿಂದಿನ ಕಾಲದಲ್ಲಿ ರಾಜರು ರಾಜ್ಯಭಾರವನ್ನು ತ್ಯಾಗ ಮಾಡಿ ವಾನಪ್ರಸ್ಥಾಶ್ರಮ ಸ್ವೀಕಾರ ಮಾಡಿ ಕಾಡಿಗೆ ಹೋಗುತ್ತಿದ್ದರು. ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಒಬ್ಬ ಆಡಳಿತಗಾರರಾದರೂ ಹೀಗೆ ಮಾಡಿದ್ದಾರೆಯೇ ? ಅವರಿಂದಾಗಿಯೇ ಭಾರತವು ಪರಮ ಅಧೋಗತಿಗೆ ತಲುಪಿದೆ !

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ