ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಬುದ್ಧಿಪ್ರಾಮಾಣ್ಯವಾದಿಗಳ ವ್ಯರ್ಥ ಅಹಂಕಾರ !

ಬುದ್ಧಿಪ್ರಾಮಾಣ್ಯವಾದಿಗಳಿಗೆ ‘ಮಾನವನು ವಿವಿಧ ಯಂತ್ರಗಳನ್ನು ಕಂಡು ಹಿಡಿದಿದ್ದಾನೆ’, ಎಂಬುದರ ಬಗ್ಗೆ ಅಹಂಕಾರವಿರುತ್ತದೆ. ಅವರ ಗಮನಕ್ಕೆ ಬಾರದ ವಿಷಯವೇನೆಂದರೆ ಈಶ್ವರನು ಜೀವಾಣು, ಪಶು-ಪಕ್ಷಿ, ೭೦-೮೦ ವರ್ಷಗಳ ತನಕ ನಡೆಯುವ ಒಂದು ಯಂತ್ರ ಅಂದರೆ ಮಾನವನ ಶರೀರ ಇವುಗಳಂತಹ ಅಬ್ಜಗಟ್ಟಲೆ ಸಂಗತಿಗಳನ್ನು ಸೃಷ್ಟಿಸಿದ್ದಾನೆ. ಇವುಗಳ ಪೈಕಿ ಒಂದನ್ನಾದರೂ ವಿಜ್ಞಾನಿಗಳು  ಸೃಷ್ಟಿಸಲು ಸಾಧ್ಯವಾಗಿದೆಯೇ ?’

ಸಾತ್ತ್ವಿಕ  ವ್ಯಕ್ತಿಗಳ ಜೀವನದ ಅಂತಿಮ ಧ್ಯೇಯ !

‘ಸಾತ್ತ್ವಿಕ  ವ್ಯಕ್ತಿಗಳ ವ್ಯಷ್ಟಿ ಜೀವನದ ಧ್ಯೇಯವು ಈಶ್ವರಪ್ರಾಪ್ತಿಯಾಗಿದ್ದರೆ ರಾಮರಾಜ್ಯವು ಅವರ ಸಮಷ್ಟಿ ಜೀವನದ ಧ್ಯೇಯವಾಗಿರುತ್ತದೆ  !’

ಆಪತ್ಕಾಲದಲ್ಲಿ ರಕ್ಷಣೆ ಪಡೆಯಲು ಸಾಧನೆ ಮಾಡಿ !

‘ನ ಮೇ ಭಕ್ತಃ ಪ್ರಣಶ್ಯತಿ |’

– ಶ್ರೀಮದ್ಭಗವದ್ಗೀತೆ, ಅಧ್ಯಾಯ ೯, ಶ್ಲೋಕ ೩೧

ಅರ್ಥ : ನನ್ನ ಭಕ್ತರ ನಾಶವಾಗುವುದಿಲ್ಲ.

ಭಕ್ತನನ್ನು, ಸಾಧನೆ ಮಾಡುವವನನ್ನೇ ಭಗವಂತನು ರಕ್ಷಿಸುತ್ತಾನೆ, ಇದನ್ನು ಗಮನದಲ್ಲಿಟ್ಟುಕೊಂಡು ಈಗಿನಿಂದಲೇ ತೀವ್ರ ಸಾಧನೆ ಮಾಡಿ, ಆಗಲೇ ಭಗವಂತನು ಆಪತ್ಕಾಲದಲ್ಲಿ ಕಾಪಾಡುವನು.

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ