ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಸಾಧನೆಯ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ಅಧ್ಯಾತ್ಮದಲ್ಲಿ ಮಾತುಗಳ ಸ್ತರದಲ್ಲಿ ಕಲಿಯಲು ಸಿಕ್ಕಿದ ಅಂಶಗಳಿಗೆ ಅಲ್ಲ, ಸಂತರ ಪ್ರತ್ಯಕ್ಷ ಸತ್ಸಂಗ ದೊರಕಿದ ನಂತರ ಬಂದ ಅನುಭೂತಿಗೆ ಮಹತ್ವವಿರುತ್ತದೆ !

ಯೋಗಿತಾ ಘಾಟೆ : ‘ಇಂದು ಬೆಳಗ್ಗೆ ದೇವರಿಗೆ, ಅಂದರೆ ನಿಮಗೇ ಪ್ರಾರ್ಥನೆ ಮಾಡಿದೆನು, ‘ಪರಮ ಪೂಜ್ಯ, ನನಗೆ ಏನು ತಿಳಿಯುತ್ತಿಲ್ಲ, ನಾನು ಈ ಸತ್ಸಂಗದಿಂದ ಆಧ್ಯಾತ್ಮಿಕ ಸ್ತರದಲ್ಲಿ ಹೇಗೆ ಲಾಭ ಪಡೆಯಲಿ ? ಅದರಿಂದ ನಿಮ್ಮ ಸಮಯವೂ ಹೋಗಬಾರದು.’

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಮಾತುಗಳ ಸ್ತರದಲ್ಲಿ ಕಲಿಯಲು ಸಿಕ್ಕಿರುವ ಅಂಶಗಳಿಗೆ ಅಧ್ಯಾತ್ಮದಲ್ಲಿ ಹೆಚ್ಚು ಮಹತ್ವ ಇರುವುದಿಲ್ಲ. ಮಾತುಗಳ ಸ್ತರದ ಎಲ್ಲವನ್ನೂ ಗ್ರಂಥಗಳಲ್ಲಿ ಬರೆದಿರುತ್ತದೆ; ಆದರೆ ಸಂತರನ್ನು ಭೇಟಿಯಾದಾಗ ಅನುಭೂತಿ ಬಂದರೆ ಮಹತ್ವದ್ದಾಗಿದೆ ! ನಾವು ದೇವಸ್ಥಾನಕ್ಕೆ ಹೋದಾಗ ದೇವರು ನಮ್ಮೊಂದಿಗೆ ಮಾತನಾಡುತ್ತಾನೆಯೇ ? ಆದರೆ ಮೂರ್ತಿಯನ್ನು ನೋಡಿ ನಮಸ್ಕರಿಸಿದಾಗ ಸ್ಪಂದನ ಗಳು ಅರಿವಾಗುತ್ತವೆ. ಅದು ಮಹತ್ವದ್ದಾಗಿರುತ್ತದೆ.

ಯೋಗಿತಾ ಘಾಟೆ

೨. ದೇವರಕೋಣೆಯಲ್ಲಿನ ದೇವತೆಗಳ ತತ್ತ್ವವು ಯಾವ ದಿಕ್ಕಿನಿಂದ ಹೋಗುವುದು ಆವಶ್ಯಕವಾಗಿರುತ್ತದೆಯೋ, ಆ ದಿಕ್ಕಿಗೆ ಆ ದೇವತೆಗಳ ಮೂರ್ತಿಗಳು ತಿರುಗುತ್ತವೆ !

ಯೋಗಿತಾ ಘಾಟೆ : ಪರಮ ಪೂಜ್ಯ, ನಮ್ಮ ಮನೆಯಲ್ಲಿ ದೇವರಕೋಣೆಯಲ್ಲಿನ ದೇವರ ರಚನೆಯು ಪ್ರತಿದಿನ ಬದಲಾಗಿರುತ್ತವೆ. ರಾತ್ರಿ ದೇವರಮನೆಯಲ್ಲಿನ ಮೂರ್ತಿಗಳ ದಿಕ್ಕು ಬೇರೆ ಇರುತ್ತವೆ ಮತ್ತು ಬೆಳಗ್ಗೆ ಎದ್ದ ನಂತರ ನೋಡಿದರೆ, ಮೂರ್ತಿಗಳು ತಿರುಗಿರುತ್ತವೆ. ಹೀಗೆ ಅನೇಕ ದಿನಗಳಿಂದ ತನ್ನಷ್ಟಕ್ಕೆ ಆಗುತ್ತಿರುತ್ತದೆ. ನನಗೆ ಇದರ ಕಾರಣ ತಿಳಿಯಲಿಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಮೂರ್ತಿಗಳು ತಿರುಗುತ್ತವೆ, ಅಂದರೆ ಆ ದಿಕ್ಕಿನಿಂದ ಆ ದೇವತೆಯ ತತ್ತ್ವ ಹೋಗುವುದು ಆವಶ್ಯಕವಾಗಿರುತ್ತದೆ, ನಮಗೆ ಸಹಾಯ ಮಾಡಲು ಆ ದಿಕ್ಕಿಗೆ ಮೂರ್ತಿಗಳು ತಿರುಗುತ್ತವೆ. ಚೆನ್ನಾಗಿದೆ ! ಇದು ನಿಮ್ಮ ಸಾಧನೆಯಿಂದ ಆಗುತ್ತಿದೆ.

೩. ‘ಭಾವಾಸ್ಥೆಯಲ್ಲಿರುವುದು ಮತ್ತು ಸೇವೆ ಮಾಡುವುದು’, ಈ ಎರಡೂ ಮಹತ್ವದ್ದಾಗಿದೆ !

ಯೋಗಿತಾ ಘಾಟೆ : ನಿರಂತರ ಭಾವಾವಸ್ಥೆಯಲ್ಲಿರಲು ನಾನು ಇನ್ನೂ ಹೇಗೆ ಪ್ರಯತ್ನಿಸಲಿ ?

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ನಿರಂತರ ಭಾವಾವಸ್ಥೆಯಲ್ಲಿರುವುದು ಬೇಡ; ಏಕೆಂದರೆ ನೀವು ಸಮಷ್ಟಿ ಸೇವೆಯನ್ನೂ ಮಾಡುತ್ತೀರಲ್ಲ ! ನಿರಂತರ ಭಾವಾವಸ್ಥೆಯಲ್ಲಿದ್ದರೆ ಸಮಷ್ಟಿ ಸೇವೆಯೇ ಆಗಲಾರದು. ‘ಭಾವಾವಸ್ಥೆಯಲ್ಲಿರುವುದು ಮತ್ತು ಸೇವೆ ಮಾಡುವುದು’, ಈ ಎರಡೂ ಮಹತ್ವದ್ದಾಗಿದೆ.’