Kulbhushan Jadhav Case : ಅಂತರಾಷ್ಟ್ರೀಯ ನ್ಯಾಯಾಲಯವು ಕುಲಭೂಷಣ ಜಾಧವ ಅವರಿಗೆ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ನೀಡಿಲ್ಲ!

ಪಾಕಿಸ್ತಾನದ ರಕ್ಷಣಾ ಸಚಿವಾಲಯದ ದಾವೆ

ಇಸ್ಲಾಮಾಬಾದ (ಪಾಕಿಸ್ತಾನ) – ಕುಲಭೂಷಣ ಜಾಧವ ಅವರಿಗೆ ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಅಂತರಾಷ್ಟ್ರೀಯ ನ್ಯಾಯಾಲಯ ನೀಡಿಲ್ಲ. ಜೂನ್ 2019 ರಲ್ಲಿ ಭಾರತದ ಪರವಾಗಿ ತೀರ್ಪು ನೀಡಿದ ಅಂತರಾಷ್ಟ್ರೀಯ ನ್ಯಾಯಾಲಯವು ಜಾಧವ ಅವರಿಗೆ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕ ಸಾಧಿಸಲು ಮತ್ತು ಕಾನೂನು ಸಹಾಯ ಪಡೆಯಲು ಆದೇಶಿಸಿತ್ತು. ಇದರೊಂದಿಗೆ ಅಂತರಾಷ್ಟ್ರೀಯ ನ್ಯಾಯಾಲಯವು ಪಾಕಿಸ್ತಾನಕ್ಕೆ ಕುಲಭೂಷಣ ಜಾಧವ ಅವರಿಗೆ ವಿಧಿಸಲಾದ ಗಲ್ಲು ಶಿಕ್ಷೆಯನ್ನು ಮರುಪರಿಶೀಲಿಸುವಂತೆ ಮನವಿ ಮಾಡಿತ್ತು. ‘ನ್ಯಾಯಾಲಯದ ಈ ತೀರ್ಪಿನಲ್ಲಿ ಮೇಲ್ಮನವಿ ಸಲ್ಲಿಸುವ ಹಕ್ಕಿನ ಉಲ್ಲೇಖವಿರಲಿಲ್ಲ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವಾಲಯದ ವಕೀಲ ಖ್ವಾಜಾ ಹ್ಯಾರಿಸ ಅಹ್ಮದ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದರು.

1. ಮೇ 9, 2023 ರಂದು ಇಮ್ರಾನ ಖಾನ್ ಅವರ ಬಂಧನದ ನಂತರ ನಡೆದ ಗಲಭೆಗಳಲ್ಲಿನ ತಥಾಕಥಿತ  ಪಾತ್ರಕ್ಕಾಗಿ ಸೈನಿಕ ನ್ಯಾಯಾಲಯಗಳು ದೋಷಿ ಎಂದು ತೀರ್ಪು ನೀಡಿದ ಪಾಕಿಸ್ತಾನಿ ನಾಗರಿಕರ ಪ್ರಕರಣಗಳಿಗೆ ಸಂಬಂಧಿಸಿದ ವಿಚಾರಣೆ ಇದಾಗಿತ್ತು. ಜಾಧವ ಅವರಿಗೂ ಮೇಲ್ಮನವಿ ಸಲ್ಲಿಸುವ ಸಮಾನ ಹಕ್ಕನ್ನು ನೀಡಲಾಗಿದೆಯೇ? ಮತ್ತು ಮಿಲಿಟರಿ ನ್ಯಾಯಾಲಯಗಳಲ್ಲಿ ದೋಷಿ ಎಂದು ತೀರ್ಪು ನೀಡಲಾದ ಪಾಕಿಸ್ತಾನಿ ನಾಗರಿಕರಿಗೆ ಈ ಸೌಲಭ್ಯವನ್ನು ಏಕೆ ನೀಡಲಾಗಿಲ್ಲ? ಎಂದು ಸರ್ವೋಚ್ಚ ನ್ಯಾಯಾಲಯವು ಪ್ರಶ್ನಿಸಿದಾಗ, ರಕ್ಷಣಾ ಸಚಿವಾಲಯದ ವಕೀಲರು ಮೇಲಿನ ಉತ್ತರ ನೀಡಿದರು.

2. ಪಾಕಿಸ್ತಾನವು ‘ವಿಯೆನ್ನಾ ಕನ್ವೆನ್ಷನ್ ಆನ್ ಕಾನ್ಸುಲರ್ ರಿಲೇಷನ್ಸ್’ನ (ಇದು ರಾಜತಾಂತ್ರಿಕ ಸಂಬಂಧಗಳ ನಿಯಮಗಳನ್ನು ನಿರ್ಧರಿಸುವ ಅಂತರಾಷ್ಟ್ರೀಯ ಒಪ್ಪಂದ. 1961 ರಲ್ಲಿ ಆಸ್ಟ್ರಿಯಾದ ವಿಯೆನ್ನಾದಲ್ಲಿ ಮಾಡಲಾಯಿತು.) ವಿಧಿ 36 ಅನ್ನು ಉಲ್ಲಂಘಿಸಿದೆಯೆಂದು ನ್ಯಾಯವಾದಿಗಳು ಒಪ್ಪಿಕೊಂಡಿದ್ದಾರೆ. ಇದರಲ್ಲಿ ಒಂದು ದೇಶದ ನಾಗರಿಕನನ್ನು ಇನ್ನೊಂದು ದೇಶದಲ್ಲಿ ಬಂಧಿಸಿದರೆ, ಆತನಿಗೆ ತನ್ನ ದೇಶದ ರಾಯಭಾರ ಕಚೇರಿಯೊಂದಿಗೆ ಸಂಪರ್ಕ ಸಾಧಿಸುವ, ಭೇಟಿ ಮಾಡುವ ಮತ್ತು ಕಾನೂನು ಸಹಾಯ ಪಡೆಯುವ ಹಕ್ಕಿದೆ ಎಂದು ಹೇಳಲಾಗಿದೆ.

3. ಇದರಿಂದ ಪಾಕಿಸ್ತಾನದ ರಕ್ಷಣಾ ಸಚಿವಾಲಯದ ನ್ಯಾಯವಾದಿಗಳು ಕುಲಭೂಷಣ ಜಾಧವ ಅವರಿಗೆ ನೀಡಲಾದ ಸೀಮಿತ ಹಕ್ಕುಗಳನ್ನು ಪಾಕಿಸ್ತಾನಿ ನಾಗರಿಕರಿಗೂ ನೀಡಲಾಗುತ್ತಿಲ್ಲ ಎಂದು ತೋರಿಸಲು ಅವರ ಪ್ರಕರಣವನ್ನು ಉಲ್ಲೇಖಿಸಿದ್ದರು.

4. ಕುಲಭೂಷಣ ಜಾಧವ ಅವರನ್ನು 2016 ರಲ್ಲಿ ಬಲೂಚಿಸ್ತಾನದಿಂದ ಗೂಢಚರ್ಯೆ ಮತ್ತು ಭಯೋತ್ಪಾದನೆಯ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪಾಕಿಸ್ತಾನ ವಾದಿಸಿದೆ. ಭಾರತವು ಪಾಕಿಸ್ತಾನದ ಆರೋಪಗಳನ್ನು ನಿರಾಕರಿಸಿತು ಮತ್ತು ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯಾದ ಕುಲಭೂಷಣ ಜಾಧವ ಅವರನ್ನು ಇರಾನಿನ ಚಾಬಹಾರ ಬಂದರಿನಿಂದ ಅಪಹರಿಸಲಾಗಿತ್ತು.

ಸಂಪಾದಕೀಯ ನಿಲುವು

ಅಂತರಾಷ್ಟ್ರೀಯ ನ್ಯಾಯಾಲಯದ ಆದೇಶಗಳನ್ನು ತನ್ನ ಸ್ವಾರ್ಥಕ್ಕೆ ಅನುಗುಣವಾಗಿ ಬದಲಾಯಿಸುವ ಪಾಕಿಸ್ತಾನ! ಇದರ ವಿರುದ್ಧ ಅಂತರಾಷ್ಟ್ರೀಯ ನ್ಯಾಯಾಲಯವು ಪಾಕಿಸ್ತಾನವನ್ನು ಪ್ರಶ್ನಿಸಬೇಕು!