ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ರಾಜಕಾರಣಿಗಳ ಬಗ್ಗೆ ಯಾರೂ ಅವಾಚ್ಯವಾಗಿ ಮಾತನಾಡಲು ಸಾಧ್ಯವಿಲ್ಲ; ಆದರೆ ದೇವತೆಗಳ ಬಗ್ಗೆ ಮಾತನಾಡುತ್ತಾರೆ !

ವಿಜ್ಞಾನದ ಅಹಂಕಾರ ಇರುವ ಬುದ್ಧಿಜೀವಿಗಳು !

ಬುದ್ಧಿಜೀವಿಗಳಿಗೆ ವಿಜ್ಞಾನದ ಬಗ್ಗೆ ಎಷ್ಟೇ ಅಹಂಕಾರವಿದ್ದರೂ,  ಒಂದು ವಿಷಯ ಗಮನದಲ್ಲಿ ಇಡಬೇಕು; ಅವರಿಗೆ ಅತ್ಯಂತ ಚಿಕ್ಕದಾದ ಒಂದು ಏಕಕೋಶಿ ಪ್ರಾಣಿ ಅಥವಾ ಯಾವುದೇ ವಸ್ತುಗಳ ಸಹಾಯವಿಲ್ಲದೆ ಕಲ್ಲಿನ ಒಂದು ಕಣವನ್ನೂ ನಿರ್ಮಿಸಲು ಸಾಧ್ಯವಿಲ್ಲ.

ಸ್ಥೂಲ ಮಾಲಿನ್ಯಕ್ಕಿಂತ ಸೂಕ್ಷ್ಮ ಮಾಲಿನ್ಯವು ಅನೇಕ ಪಟ್ಟು ಹೆಚ್ಚು ಹಾನಿಕರ !

ಮೂರನೇ ಮಹಾಯುದ್ಧದ ಭೀಕರ ಕಾಲದಲ್ಲಿ ಕೇವಲ ಭಗವಂತನು ಮಾತ್ರ ನಮ್ಮನ್ನು ರಕ್ಷಿಸಬಲ್ಲನು; ಆದ್ದರಿಂದ ಆಪತ್ತಿನಿಂದ ಪಾರಾಗಲು ಈಗಲಾದರೂ ದೇವರ ಭಕ್ತರಾಗಿ !

ಸನಾತನದ ಸಂತರ ಸಮಷ್ಟಿ ಕಾರ್ಯವು, ಅವರ ಬ್ರಾಹ್ಮತೇಜದ ಸ್ತರದ ಸಾಧನೆಯೇ ಆಗಿದೆ !

ಕೆಲವರು ‘ಯೋಗ್ಯ ಕಾಲ ಬಂದಾಗ ಸಾಧನೆಯನ್ನು ಮಾಡುತ್ತೇವೆ’ ಎನ್ನುತ್ತಾರೆ; ಆದರೆ ಸಾಮಾನ್ಯ ವ್ಯಕ್ತಿಯ ಜೀವನದಲ್ಲಿ ಬಾಲ್ಯವು ಶಿಕ್ಷಣದಲ್ಲಿ, ಯೌವ್ವನವು ಸಂಸಾರದಲ್ಲಿ ಮತ್ತು ವೃದ್ಧಾಪ್ಯವು ಅನಾರೋಗ್ಯದಲ್ಲಿ ಕಳೆಯುತ್ತದೆ. ಆದುದರಿಂದ ಸಾಧನೆಗೆ ಪ್ರತ್ಯೇಕವಾದ ಸಮಯವೇ ಉಳಿಯುವುದಿಲ್ಲ.

ವಿದ್ಯಾರ್ಥಿ ದೆಸೆಯಲ್ಲಿರುವ ಮಕ್ಕಳಿಗೆ ಧರ್ಮಪಾಲನೆಯ ಹಿಂದಿನ ಕಾರ್ಯಕಾರಣಭಾವವನ್ನು ಕಲಿಸುವುದು ಅತ್ಯಗತ್ಯ !

‘ಹಿಂದೂಗಳ ಕಳೆದ ಕೆಲವು ಪೀಳಿಗೆ ಗಳಿಗೆ ಧರ್ಮಪಾಲನೆಯ ಹಿಂದಿನ ಕಾರ್ಯಕಾರಣ ಭಾವವನ್ನು ತಿಳಿಸಿಕೊಟ್ಟಿಲ್ಲ. ಆದ್ದರಿಂದ ಈಗ ಅವರಿಗೆ ಧರ್ಮದ ಮಹತ್ವವು ಕಡಿಮೆಯಾಗಿದೆ.