ಉತ್ತರ ಪ್ರದೇಶ ವಿಧಾನಸಭೆಯಿಂದ ೬ ಪೊಲೀಸರಿಗೆ 1 ದಿನದ ಜೈಲುಶಿಕ್ಷೆ !

ಉತ್ತರಪ್ರದೇಶದ ವಿಧಾನಸಭೆಯಲ್ಲಿ ಭಾಜಪದ ಅಂದಿನ ಶಾಸಕ ಸಲಿಲ್ ಬಿಷ್ನೋಯಿ ಇವರು ೧೯ ವರ್ಷಗಳ ಹಿಂದೆ ಶಾಸಕರ ವಿಶೇಷ ಅಧಿಕಾರ ಭಂಗ ಆಗಿರುವ ಬಗ್ಗೆ ದೂರು ನೀಡಿದ್ದರು. ಇದರ ಬಗ್ಗೆ ಆಲಿಕೆ ನಡೆದು ಈ ಪ್ರಕರಣದಲ್ಲಿ ಶಾಸಕರ ಜೊತೆ ಅಸಭ್ಯವಾಗಿ ವರ್ತಿಸಿದ ೬ ಪೊಲೀಸರಿಗೆ ಒಂದು ದಿನದ ಜೈಲು ಶಿಕ್ಷೆ ವಿಧಿಸಿದೆ.

‘ಇಸ್ಲಾಮಿಕ್ ಸ್ಟೇಟ್ಸ್’ ೭ ಭಯೋತ್ಪಾದಕರಿಗೆ ಗಲ್ಲು ಶಿಕ್ಷೆ

ಎನ್.ಐ.ಎ.ದ ವಕ್ತಾರರು ನೀಡಿರುವ ಮಾಹಿತಿಯ ಪ್ರಕಾರ ಭಯೋತ್ಪಾದಕರು ಉತ್ತರ ಪ್ರದೇಶದಲ್ಲಿ ಅನೇಕ ಸ್ಥಳಗಳಲ್ಲಿ ಸ್ಪೋಟಕಗಳನ್ನ ಅಡಗಿಸುವ ಪ್ರಯತ್ನ ಮಾಡಿದ್ದರು. ತನಿಖೆಯಲ್ಲಿ ಇದರ ಅನೇಕ ಛಾಯಾಚಿತ್ರಗಳು ಪತ್ತೆಯಾಗಿವೆ, ಇದರಲ್ಲಿ ಅಪರಾಧಿಗಳು ಸ್ಪೋಟಕ ಉಪಕರಣಗಳು ಮತ್ತು ಸಿಡಿಮದ್ದು ತಯಾರಿಸುತ್ತಿರುವುದು ಕಾಣುತ್ತದೆ.

ಮದ್ರಾಸ ಉಚ್ಚ ನ್ಯಾಯಾಲಯವು ನ್ಯಾಯಾಲಯದಲ್ಲಿರುವ ಅಧಿಕಾರಿಗಳ ವಂಚನೆಯ ಪ್ರಕರಣದಲ್ಲಿ 3 ವರ್ಷಗಳ ಕಠಿಣ ಸೆರೆವಾಸ !

ಮದ್ರಾಸ ಉಚ್ಚ ನ್ಯಾಯಾಲಯ ನ್ಯಾಯಾಲಯದಲ್ಲಿರುವ ಒಬ್ಬ ಅಧಿಕಾರಿಗೆ ಹುದ್ದೆಯ ದುರುಪಯೋಗ ಮಾಡಿ ಒಬ್ಬ ವ್ಯಕ್ತಿಯ 40 ಸಾವಿರ ರೂಪಾಯಿಗಳನ್ನು ವಂಚಿಸಿರುವ ಪ್ರಕರಣದಲ್ಲಿ 3 ವರ್ಷಗಳ ಕಠಿಣ ಸೆರೆವಾಸ ಶಿಕ್ಷೆ ವಿಧಿಸಿದೆ. ಅಧಿಕಾರಿಯು ಸಂಬಂಧಿಸಿದ ವ್ಯಕ್ತಿಗೆ ನೌಕರಿ ನೀಡುವುದಾಗಿ ಸುಳ್ಳು ಆಶ್ವಾಸನೆಯನ್ನು ನೀಡಿ ಆ ವ್ಯಕ್ತಿಗೆ ಮೋಸಗೊಳಿಸಿದ್ದನು.

ನ್ಯಾಯಾಲಯದ ಅಪಮಾನ ಮಾಡಿರುವ ಪ್ರಕರಣದಲ್ಲಿ ನ್ಯಾಯವಾದಿಗೆ ನ್ಯಾಯಾಂಗ ಬಂಧನ !

ಕರ್ನಾಟಕ ಉಚ್ಚ ನ್ಯಾಯಾಲಯವು ನ್ಯಾಯವಾದಿ ಕೆ.ಎಸ್.ಅನಿಲ ಇವರಿಗೆ ನ್ಯಾಯ ವ್ಯವಸ್ಥೆ ಮತ್ತು ನ್ಯಾಯಾಂಗ ಅಧಿಕಾರಿಗಳ ಮೇಲೆ ತಲೆಬುಡವಿಲ್ಲದ ಆರೋಪ ಮಾಡಿರುವ ಪ್ರಕರಣದಲ್ಲಿ 1 ವಾರದ ನ್ಯಾಯಾಂಗ ಬಂಧನ ವಿಧಿಸಿತು.

ಗಾಝಿಯಾಬಾದ (ಉತ್ತರಪ್ರದೇಶ) ಇಲ್ಲಿ ೪ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ನಡೆಸಿ ಹತ್ಯೆ ಮಾಡಿದವನಿಗೆ ಗಲ್ಲು ಶಿಕ್ಷೆ !

ಇಂತಹ ಘಟನೆಗಳಿಗೆ ಹೀಗೆ ಮತ್ತು ಇಷ್ಟು ಬೇಗ ಶಿಕ್ಷ ನೀಡಿದರೇ, ಅಪರಾಧಿಗಳು ಅಪರಾಧ ಮಾಡುವ ಮೊದಲು ಯೋಚನೆ ಮಾಡಬೇಕಾಗುವುದು !

೨೦೨೨ ರಲ್ಲಿ ಸುಮಾರು ೧೬೫ ಜನರಿಗೆ ಗಲ್ಲು ಶಿಕ್ಷೆ !

ಆದರೂ ಭಾರತದಲ್ಲಿ ಅಪರಾಧಗಳು ಕಡಿಮೆಯಾಗುವ ಬದಲು ಹೆಚ್ಚುತ್ತಾ ಇದೆ, ಇದು ಯಾವಾಗ ನಿಲ್ಲಬಹುದು ?