‘ಇಸ್ಲಾಮಿಕ್ ಸ್ಟೇಟ್ಸ್’ ೭ ಭಯೋತ್ಪಾದಕರಿಗೆ ಗಲ್ಲು ಶಿಕ್ಷೆ

೨೦೧೭ ರ ರೈಲಿನಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣ

ನವ ದೆಹಲಿ – ರಾಷ್ಟ್ರೀಯ ತನಿಖಾದಳ (ಎನ್.ಐ.ಎ.ಯ) ಲಕ್ಷ್ಮಣಪುರಿ ಇಲ್ಲಿಯ ವಿಶೇಷ ನ್ಯಾಯಾಲಯವು ೨೦೧೭ ರ ರೈಲಿನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇಸ್ಲಾಮಿಕ್ ಸ್ಟೇಟ್ ಗೆ ಸಂಬಂಧ ಪಟ್ಟ ಮಹಮ್ಮದ್ ಪೈಸಲ್, ಗೌಸ್ ಮುಹಮ್ಮದ್ ಖಾನ್, ಮಹಮ್ಮದ್ ಅಝಹರ್, ಆತಿಫ್ ಮುಜಫ್ಫರ್, ಮಹಮ್ಮದ್ ದಾನಿಶ್, ಸೈಯದ್ ಮಿರ್ ಹುಸೇನ್ ಮತ್ತು ಆಸಿಫ್ ಇಕ್ಬಾಲ್ ಅಲಿಯಾಸ್ ರಾಕಿ ಈ ೭ ಭಯೋತ್ಪಾದಕರಿಗೆ ಗಲ್ಲು ಶಿಕ್ಷೆ ಮತ್ತು ಅವರ ಮಹಮ್ಮದ್ ಆತಿಫ್ ಅಲಿಯಾಸ್ ಆತಿಫ ಇರಾಕಿ ಈ ಸಹಚರನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಎನ್.ಐ.ಎ.ದ ವಕ್ತಾರರು ನೀಡಿರುವ ಮಾಹಿತಿಯ ಪ್ರಕಾರ ಭಯೋತ್ಪಾದಕರು ಉತ್ತರ ಪ್ರದೇಶದಲ್ಲಿ ಅನೇಕ ಸ್ಥಳಗಳಲ್ಲಿ ಸ್ಪೋಟಕಗಳನ್ನ ಅಡಗಿಸುವ ಪ್ರಯತ್ನ ಮಾಡಿದ್ದರು. ತನಿಖೆಯಲ್ಲಿ ಇದರ ಅನೇಕ ಛಾಯಾಚಿತ್ರಗಳು ಪತ್ತೆಯಾಗಿವೆ, ಇದರಲ್ಲಿ ಅಪರಾಧಿಗಳು ಸ್ಪೋಟಕ ಉಪಕರಣಗಳು ಮತ್ತು ಸಿಡಿಮದ್ದು ತಯಾರಿಸುತ್ತಿರುವುದು ಕಾಣುತ್ತದೆ. ಜೊತೆಗೆ ‘ಇಸ್ಲಾಮಿಕ್ ಸ್ಟೇಟ್’ನ ಧ್ವಜ ಕೂಡ ಇದೆ. ಈ ಸಮೂಹವು ವಿವಿಧ ಸ್ಥಳಗಳಲ್ಲಿ ಕಾನೂನ ಬಾಹಿರ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳು ಸಂಗ್ರಹಿಸಿದ್ದರು. ಆತಿಫ್, ದಾನಿಶ್, ಹುಸೇನ್ ಮತ್ತು ಸೈಫ್ ಉಲ್ಲಾ ಇವರು ಮಾರ್ಚ್ 7, 2017 ರಂದು ಭೋಪಾಲ್ ಉಜ್ಜಯಿನಿ ಪ್ರಯಾಣಿಸುವ ರೈಲಿನಲ್ಲಿ ಬಾಂಬ್ ಸ್ಫೋಟ ನಡೆಸಿದ್ದರು. ಇದರಲ್ಲಿ ೧೦ ಜನರು ಗಾಯಗೊಂಡಿದ್ದರು.

ಇನ್ನೊಂದು ಪ್ರಕರಣದಲ್ಲಿ ೨ ಸಹೋದರರಿಗೆ ಕಠಿಣ ಜೈಲು ಶಿಕ್ಷೆ

‘ಇನ್ನೊಂದು ಪ್ರಕರಣದಲ್ಲಿ ‘ಇಸ್ಲಾಮಿಕ್ ಸ್ಟೇಟ್’ ಈ ಹೆಸರಿನಲ್ಲಿ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಾಗಿ ಕಟ್ಟರವಾದಿ ಯುವಕರನ್ನು ಸೇರಿಸಿ ಗುಜರಾತದಲ್ಲಿನ ಎನ್.ಐ.ಎ.ದ ಒಂದು ವಿಶೇಷ ನ್ಯಾಯಾಲಯವು ೨ ಸಹೋದರರಿಗೆ ೧೦ ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಈ ಎರಡೂ ಪ್ರಕರಣದಲ್ಲಿ ಅಪರಾಧಿಗಳನ್ನು ತಪ್ಪಿತಸ್ಥರನ್ನಾಗಿ ನಿಶ್ಚಯಿಸಿ ಶಿಕ್ಷೆ ವಿಧಿಸಿರುವುದರಿಂದ ‘ಎನ್.ಐ.ಎ.’ಯು ದಾಖಲಿಸಿರುವ ಪ್ರಕರಣದಲ್ಲಿ ತಪ್ಪಿತಸ್ಥರನ್ನಾಗಿ ನಿಶ್ಚಯಿಸಿರುವ ಪ್ರಮಾಣ ಶೇಕಡ ೯೩.೬೯ ಕ್ಕೆ ತಲುಪಿದೆ, ಎಂದು ಎನ್.ಐ.ಎ.ನ ಓರ್ವ ಅಧಿಕಾರಿ ಮಾಹಿತಿ ನೀಡಿದ್ದಾರೆ.