ನ್ಯಾಯಾಲಯದ ಅಪಮಾನ ಮಾಡಿರುವ ಪ್ರಕರಣದಲ್ಲಿ ನ್ಯಾಯವಾದಿಗೆ ನ್ಯಾಯಾಂಗ ಬಂಧನ !

ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶ

ಬೆಂಗಳೂರು – ಕರ್ನಾಟಕ ಉಚ್ಚ ನ್ಯಾಯಾಲಯವು ನ್ಯಾಯವಾದಿ ಕೆ.ಎಸ್.ಅನಿಲ ಇವರಿಗೆ ನ್ಯಾಯ ವ್ಯವಸ್ಥೆ ಮತ್ತು ನ್ಯಾಯಾಂಗ ಅಧಿಕಾರಿಗಳ ಮೇಲೆ ತಲೆಬುಡವಿಲ್ಲದ ಆರೋಪ ಮಾಡಿರುವ ಪ್ರಕರಣದಲ್ಲಿ 1 ವಾರದ ನ್ಯಾಯಾಂಗ ಬಂಧನ ವಿಧಿಸಿತು. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ ಎಸ್. ಕಿಣಗಿಯವರ ಖಂಡ ಪೀಠವು ಈ ಶಿಕ್ಷೆಯನ್ನು ವಿಧಿಸಿದೆ. ನ್ಯಾಯಾಲಯದ ಅಪಮಾನ ಮಾಡಿರುವ ಪ್ರಕರಣದಲ್ಲಿ ನ್ಯಾಯವಾದಿ ಅನಿಲ ಇವರು, ‘ಯಾವ ಖಂಡಪೀಠದ ಅಡಿಯಲ್ಲಿ ನನ್ನ ಮೊಕದ್ದಮೆ ನಡೆದಿದೆಯೋ, ಅದೇ ಖಂಡಪೀಠದ ನ್ಯಾಯಮೂರ್ತಿಗಳ ವಿರುದ್ಧ ಆರೋಪ ಮಾಡಿದ್ದರಿಂದ ನನ್ನ ವಿರುದ್ಧ ನಡೆಸಲಾಗಿರುವ ಮೊಕದ್ದಮೆಯನ್ನು ಬೇರೆ ಖಂಡಪೀಠಕ್ಕೆ ವರ್ಗಾಯಿಸಬೇಕು’ ಎಂದು ಕೋರಿದ್ದರು.

ನ್ಯಾಯವಾದಿ ಅನಿಲ ಇವರಿಗೆ ಶಿಕ್ಷೆಯನ್ನು ವಿಧಿಸುವಾಗ ನ್ಯಾಯಾಲಯವು,

1. ನ್ಯಾಯವಾದಿ ನ್ಯಾಯಾಧೀಶರ ಮೇಲೆ ಮಾಡಿರುವ ಆರೋಪಗಳಿಂದ, ನ್ಯಾಯವಾದಿಗಳಿಗೆ ನ್ಯಾಯ ವ್ಯವಸ್ಥೆಯೊಂದಿಗೆ ಏನೂ ಕೊಡು ಕೊಳ್ಳುವುದು ಇಲ್ಲ. ಅವರು ಈ ಹಿಂದೆಯೂ ನ್ಯಾಯವ್ಯವಸ್ಥೆಯ ವಿಷಯದಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡಿದ್ದರು ಎಂಬುದು ಗಮನಕ್ಕೆ ಬರುತ್ತದೆ.

2. ಅವರು ನ್ಯಾಯವ್ಯವಸ್ಥೆ ಮತ್ತು ನ್ಯಾಯಾಂಗ ಅಧಿಕಾರಿಗಳ ಮೇಲೆ ತಲೆಬುಡವಿಲ್ಲದ ಆರೋಪಗಳನ್ನು ಮಾಡಿ ಸಮಾಜದಲ್ಲಿ ನ್ಯಾಯವ್ಯವಸ್ಥೆಯ ಪ್ರತಿಷ್ಠೆಯನ್ನು ಮಲಿನಗೊಳಿಸಲು ಪ್ರಯತ್ನಿಸಿದ್ದಾರೆ.

3. ಅನಿಲ ಇವರು ನ್ಯಾಯವಾದಿಯ ವ್ಯವಸಾಯ ಮಾಡುತ್ತಾರೆ; ಆದರೆ ಅವರು ಮಾಡಿರುವ ಆರೋಪಗಳನ್ನು ನೋಡಿದರೆ, ಅವರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸದೇ ಬೇರೆ ಪರ್ಯಾಯವಿಲ್ಲವೆಂದು ಹೇಳಿದರು.

4. ನ್ಯಾಯಾಧೀಶರ ವಿರುದ್ಧ ಮಾಡಿರುವ ಆರೋಪವನ್ನು ಯಾವುದೇ ಷರತ್ತಿಲ್ಲದೇ ಹಿಂಪಡೆಯುವ ಅವಕಾಶವನ್ನು ಅನಿಲರಿಗೆ ನೀಡಿದ್ದರು. ಹಾಗೆಯೇ ಕ್ಷಮೆ ಕೇಳುವಂತೆ ಆರೋಪಿಗೆ ಸಮಯ ನೀಡಿದ್ದರೂ ಅವರು ಹಾಗೆ ಮಾಡಲಿಲ್ಲ.

5. ಮೌಖಿಕ ಅಥವಾ ಲಿಖಿತ ಅರ್ಜಿ ಮಾಡಿರುವ ವಿಷಯದಲ್ಲಿ ನ್ಯಾಯಾಲಯವು ನ್ಯಾಯವಾದಿ ಅನಿಲರಿಗೆ ಕೆಲವು ಪ್ರಶ್ನೆ ಕೇಳಿದಾಗ; ಅವರು ನ್ಯಾಯಾಲಯದ ಪ್ರಶ್ನೆಯನ್ನು ಉಡಾಫೆ ಮಾಡಿ ಅಹಂಕಾರದಿಂದ ವರ್ತಿಸಲು ಪ್ರಾರಂಭಿಸಿದರು. ನ್ಯಾಯಾಲಯವು ಸಂಯಮದಿಂದ ಆಲಿಸಲು ಪ್ರಯತ್ನಿಸಿದರು. ಆದರೂ ಅನಿಲ ನ್ಯಾಯಾಲಯದಲ್ಲಿ ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸಿದರು.