೨೦೨೨ ರಲ್ಲಿ ಸುಮಾರು ೧೬೫ ಜನರಿಗೆ ಗಲ್ಲು ಶಿಕ್ಷೆ !

ನವ ದೆಹಲಿ-ನ್ಯಾಶನಲ್ ಲಾ ವಿಶ್ವವಿದ್ಯಾಲಯದ ‘ಪ್ರೊಜೆಕ್ಟ್ ೩೯ ಎ’ ಇದರ ಮೂಲಕ ‘ಡೆಥ್ ಪೆನಾಲ್ಟಿ ಇನ್ ಇಂಡಿಯಾ, ಅನ್ಯುವಲ್ ಸ್ಟಾಟಿಸ್ಟಿಕ್ಸ್ ರಿಪೋರ್ಟ್ ೨೦೨೨’ ಹೆಸರಿನ ವರದಿಯನ್ನು ಪ್ರಸಿದ್ಧಪಡಿಸಲಾಗಿದೆ. ಅದಕ್ಕನುಸಾರ ದೇಶದ ಸತ್ರ ನ್ಯಾಯಾಲಯಗಳು ೨೦೨೨ ರಲ್ಲಿ ೧೬೫ ಅಪರಾಧಿಗಳಿಗೆ ವಿವಿಧ ಖಟ್ಲೆಗಳಲ್ಲಿ ಗಲ್ಲು ಶಿಕ್ಷೆಯನ್ನು ವಿಧಿಸಿದೆ. ಕಳೆದ ೨೦ ವರ್ಷಗಳಲ್ಲಿ ವಿಧಿಸಿದ ಗಲ್ಲು ಶಿಕ್ಷೆಯ ತುಲನೆಯಲ್ಲಿ ಈ ಸಂಖ್ಯೆ ಹೆಚ್ಚಿದೆ. ಈ ೧೬೫ ರ ಪೈಕಿ ೩ ಜನರಿಗೆ ಬಲಾತ್ಕಾರದ ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿದೆ. ೨೦೨೧ ರಲ್ಲಿ ಸತ್ರ ನ್ಯಾಯಾಲಯ ೧೪೬ ಜನರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಇವರ ಪೈಕಿ ಬಾಂಬ್‌ಸ್ಫೋಟದ ಒಂದು ಖಟ್ಲೆಯಲ್ಲಿ ೩೮ ಜನರಿಗೆ ಗಲ್ಲು ಶಿಕ್ಷೆಯಾಗಿದೆ.

ಸಂಪಾದಕೀಯ ನಿಲುವು

ಆದರೂ ಭಾರತದಲ್ಲಿ ಅಪರಾಧಗಳು ಕಡಿಮೆಯಾಗುವ ಬದಲು ಹೆಚ್ಚುತ್ತಾ ಇದೆ, ಇದು ಯಾವಾಗ ನಿಲ್ಲಬಹುದು ?