ಮದ್ರಾಸ ಉಚ್ಚ ನ್ಯಾಯಾಲಯವು ನ್ಯಾಯಾಲಯದಲ್ಲಿರುವ ಅಧಿಕಾರಿಗಳ ವಂಚನೆಯ ಪ್ರಕರಣದಲ್ಲಿ 3 ವರ್ಷಗಳ ಕಠಿಣ ಸೆರೆವಾಸ !

ವಿಶೇಷ ನ್ಯಾಯಾಲಯವು ನಿರಪರಾಧಿ ಎಂದು ನಿರ್ಧರಿಸಿತ್ತು !

ಚೆನ್ನೈ (ತಮಿಳುನಾಡು) – ಮದ್ರಾಸ ಉಚ್ಚ ನ್ಯಾಯಾಲಯ ನ್ಯಾಯಾಲಯದಲ್ಲಿರುವ ಒಬ್ಬ ಅಧಿಕಾರಿಗೆ ಹುದ್ದೆಯ ದುರುಪಯೋಗ ಮಾಡಿ ಒಬ್ಬ ವ್ಯಕ್ತಿಯ 40 ಸಾವಿರ ರೂಪಾಯಿಗಳನ್ನು ವಂಚಿಸಿರುವ ಪ್ರಕರಣದಲ್ಲಿ 3 ವರ್ಷಗಳ ಕಠಿಣ ಸೆರೆವಾಸ ಶಿಕ್ಷೆ ವಿಧಿಸಿದೆ. ಅಧಿಕಾರಿಯು ಸಂಬಂಧಿಸಿದ ವ್ಯಕ್ತಿಗೆ ನೌಕರಿ ನೀಡುವುದಾಗಿ ಸುಳ್ಳು ಆಶ್ವಾಸನೆಯನ್ನು ನೀಡಿ ಆ ವ್ಯಕ್ತಿಗೆ ಮೋಸಗೊಳಿಸಿದ್ದನು. 2015 ರಲ್ಲಿ ಒಂದು ವಿಶೇಷ ನ್ಯಾಯಾಲಯವು ಈ ಅಧಿಕಾರಿಯನ್ನು ನಿರಪರಾಧಿಯೆಂದು ತೀರ್ಪು ನೀಡಿತ್ತು. ವಿ.ಡಿ. ಮೋಹನಕೃಷ್ಣನ್ ಎಂದು ಈ ಅಧಿಕಾರಿಯ ಹೆಸರಾಗಿದೆ. ಅವನಿಗೆ 5 ಸಾವಿರ ರೂಪಾಯಿಗಳ ದಂಡವನ್ನು ಕೂಡ ವಿಧಿಸಿದೆ.