ಗಾಝಿಯಾಬಾದ (ಉತ್ತರಪ್ರದೇಶ) ಇಲ್ಲಿ ೪ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ನಡೆಸಿ ಹತ್ಯೆ ಮಾಡಿದವನಿಗೆ ಗಲ್ಲು ಶಿಕ್ಷೆ !

ಕೇವಲ ೨ ತಿಂಗಳಲ್ಲಿ ತೀರ್ಪು !

ಗಾಝಿಯಾಯಾಬಾದ (ಉತ್ತರ ಪ್ರದೇಶ) – ೪ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ಮಾಡಿ ಹತ್ಯೆ ಮಾಡಿದ ಪ್ರಕರಣದಲ್ಲಿ ನ್ಯಾಯಾಲಯದಿಂದ ೨೦ ವರ್ಷದ ಸೋನು ಗುಪ್ತನಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಹಾಗೂ ೨೦ ಸಾವಿರ ರೂಪಾಯಿ ದಂಡ ಕೂಡ ವಿಧಿಸಿದೆ. ಡಿಸೆಂಬರ್ ೧, ೨೦೨೨ ರಂದು ಈ ಘಟನೆ ನಡೆದಿತ್ತು. ಕೇವಲ ೨ ತಿಂಗಳಲ್ಲಿ ಈ ಅಪರಾಧದ ತೀರ್ಪು ನೀಡಿದೆ. ಮನೆಯ ಹೊರಗೆ ಆಡುತ್ತಿರುವ ಹುಡುಗಿಯನ್ನು ಸೋನು ಅಪಹರಿಸಿ ಆಕೆಯನ್ನು ಕಾಡಿಗೆ ಕೊಂಡೊಯ್ದು ಬಲಾತ್ಕಾರ ಮಾಡಿ ನಂತರ ಕತ್ತು ಹಿಸಿಕೀ ಹತ್ಯೆ ಮಾಡಿದ್ದನು.

ಸಂಪಾದಕರ ನಿಲುವು

ಇಂತಹ ಘಟನೆಗಳಿಗೆ ಹೀಗೆ ಮತ್ತು ಇಷ್ಟು ಬೇಗ ಶಿಕ್ಷ ನೀಡಿದರೇ, ಅಪರಾಧಿಗಳು ಅಪರಾಧ ಮಾಡುವ ಮೊದಲು ಯೋಚನೆ ಮಾಡಬೇಕಾಗುವುದು !