ಉತ್ತರ ಪ್ರದೇಶ ವಿಧಾನಸಭೆಯಿಂದ ೬ ಪೊಲೀಸರಿಗೆ 1 ದಿನದ ಜೈಲುಶಿಕ್ಷೆ !

೧೯ ವರ್ಷಗಳ ಹಿಂದೆ ನಡೆದಿರುವ ವಿಶೇಷ ಅಧಿಕಾರ ಭಂಗದ ಪ್ರಕರಣ

ಲಕ್ಷ್ಮಣಪುರಿ – ಉತ್ತರಪ್ರದೇಶದ ವಿಧಾನಸಭೆಯಲ್ಲಿ ಭಾಜಪದ ಅಂದಿನ ಶಾಸಕ ಸಲಿಲ್ ಬಿಷ್ನೋಯಿ ಇವರು ೧೯ ವರ್ಷಗಳ ಹಿಂದೆ ಶಾಸಕರ ವಿಶೇಷ ಅಧಿಕಾರ ಭಂಗ ಆಗಿರುವ ಬಗ್ಗೆ ದೂರು ನೀಡಿದ್ದರು. ಇದರ ಬಗ್ಗೆ ಆಲಿಕೆ ನಡೆದು ಈ ಪ್ರಕರಣದಲ್ಲಿ ಶಾಸಕರ ಜೊತೆ ಅಸಭ್ಯವಾಗಿ ವರ್ತಿಸಿದ ೬ ಪೊಲೀಸರಿಗೆ ಒಂದು ದಿನದ ಜೈಲು ಶಿಕ್ಷೆ ವಿಧಿಸಿದೆ.

ಅ. ಸಪ್ಟೆಂಬರ್ ೧೫, ೨೦೦೪ ರಲ್ಲಿ ಕಾನ್ಪುರದಲ್ಲಿ ಪದೇ ಪದೇ ವಿದ್ಯುತ್ ಪೂರೈಕೆಯಲ್ಲಿ ಆಗುತ್ತಿರುವ ವ್ಯತ್ಯಯದ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಶಾಸಕ ಬಿಶ್ನೋಯಿ ಇವರು ಒಂದು ನಿಯೋಗದ ಜೊತೆಗೆ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಹೊರಟಿದ್ದರು.

ಆ. ದಾರಿಯಲ್ಲಿ ಪೊಲೀಸರು ಅವರನ್ನು ತಡೆದರು ಮತ್ತು ಅವರಲ್ಲಿ ಮಾತಿನ ಚಕಮಕಿ ನಡೆಯಿತು, ಆ ಸಮಯದಲ್ಲಿ ಪೊಲೀಸರು ಬಿಶ್ನೋಯಿ ಅವರನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಾ ಥಳಿಸಿದರು. ಈ ಪ್ರಕರಣದಲ್ಲಿ ಬಿಶ್ನೋಯಿ ಇವರು ಶಾಸಕರ ವಿಶೇಷ ಅಧಿಕಾರ ಭಂಗ ಆಗಿರುವ ಪ್ರಕರಣದಲ್ಲಿ ಅಕ್ಟೋಬರ್ ೨೦೦೪ ರಲ್ಲಿ ವಿಧಾನಸಭೆಯ ಅಂದಿನ ಅಧ್ಯಕ್ಷರ ಬಳಿ ಇದರ ಬಗ್ಗೆ ದೂರು ನೀಡಿದ್ದರು. ಆ ಸಮಯದಲ್ಲಿ ಈ ಪ್ರಕರಣ ವಿಧಾನಸಭೆಯ ವಿಶೇಷ ಅಧಿಕಾರ ಸಮಿತಿಯ ಬಳಿ ಒಪ್ಪಿಸಿದ್ದರು.

ಇ. ಜುಲೈ ೨೭, ೨೦೦೫ ರಲ್ಲಿ ವಿಶೇಷ ಅಧಿಕಾರ ಸಮಿತಿಯಿಂದ ಶಾಸಕರ ಅವಮಾನ ಆಗಿರುವ ಪ್ರಕರಣದಲ್ಲಿ ಅಂದಿನ ಪೊಲೀಸ್ ಅಧಿಕಾರಿ ಅಬ್ದುಲ್ ಸಮದ ಇವರಿಗೆ ಜೈಲು ಶಿಕ್ಷೆ ನೀಡುವ ಹಾಗೂ ಶ್ರೀಕಾಂತ ಶುಕ್ಲಾ, ಸಬ್ ಇನ್ಸ್ಪೆಕ್ಟರ್ ತ್ರಿಲೋಕಿ ಸಿಂಹ, ಹವಾಲದಾರ ಛೋಟೆ ಸಿಂಹ, ವಿನೋದ ಮಿಶ್ರ ಮತ್ತು ಮೆಹರಬಾನ ಸಿಂಹ ಇವರಿಗೆ ವಿಧಾನಸಭೆಯ ಸಭಾಗೃಹದಲ್ಲಿ ಕರೆದು ಎಚ್ಚರಿಕೆ ನೀಡುವ ಠರಾವು ಮಾಡಿದ್ದರು. ಆ ಸಮಯದಲ್ಲಿ ಈ ಪ್ರಕರಣ ಕೆಲವು ಕಾರಣಗಳಿಂದ ಮುಂದೆ ಹೋಗಲು ಸಾಧ್ಯವಿರಲಿಲ್ಲ. (ಈ ಪ್ರಕರಣ ಮುಂದೆಹೋಗಲು ಏಕೆ ಸಾಧ್ಯವಾಗಲಿಲ್ಲ, ಜನರಿಗೆ ಇದರ ಮಾಹಿತಿ ದೊರೆಯಬೇಕು ! – ಸಂಪಾದಕರು)

ಈ. ಈಗ ಅದೇ ಪ್ರಕಾರಣಕ್ಕೆ ಸಂಬಂಧ ಪಟ್ಟವರಿಗೆ 1 ದಿನದ ಜೈಲು ಶಿಕ್ಷೆ ವಿಧಿಸಿದ್ದಾರೆ.