೯ ಲಕ್ಷ ಪರೀಕ್ಷೆಗಳಲ್ಲಿ ಕೇವಲ ಶೇ. ೦.೨ ರಷ್ಟು ವರದಿಗಳು ಮಾತ್ರ ಪಾಸಿಟಿವ್ ! – ಪೊಲೀಸ್ ಇನ್ಸ್‌ಪೆಕ್ಟರ್‌ರ ಮಾಹಿತಿ

ಹರಿದ್ವಾರ ಕುಂಭಮೇಳದಿಂದ ಕೊರೊನಾ ಸೋಂಕು ಹೆಚ್ಚಾಗಿದೆ ಎಂಬ ಹೇಳಿಕೆ ಸುಳ್ಳು !

ಕುಂಭಮೇಳದಿಂದ ದೇಶದಲ್ಲಿ ಕೊರೊನಾದ ಎರಡನೇ ಅಲೆಯ ಸೋಂಕು ಹೆಚ್ಚಾಗಿದೆ ಎಂದು ಕೂಗಾಡುತ್ತಿದ್ದವರು ಎಷ್ಟು ಸುಳ್ಳುಬುರುಕರಾಗಿದ್ದಾರೆ, ಎಂಬುದು ಈ ಮಾಹಿತಿಯಿಂದ ಮತ್ತೊಮ್ಮೆ ಬಹಿರಂಗವಾಗಿದೆ ! ಈ ಬಗ್ಗೆ ಹಿಂದೂದ್ವೇಷಿಗಳು ಈಗ ಬಾಯಿ ತೆರೆಯುತ್ತಾರೆಯೇ ?

ಹರಿದ್ವಾರ (ಉತ್ತರಾಖಂಡ) – ಇಲ್ಲಿ ಕೊರೊನಾದ ವಿಷಯದಲ್ಲಿ ಜನವರಿ ೧ ರಿಂದ ಏಪ್ರಿಲ್ ೩೦ ರವರೆಗೆ ಒಟ್ಟು ೮ ಲಕ್ಷದ ೯೧ ಸಾವಿರದ ಆರ್.ಟಿ.ಪಿ.ಸಿ.ಆರ್.ಗಳ ಪರೀಕ್ಷಣೆ ಮಾಡಲಾಗಿತ್ತು. ಈ ಪೈಕಿ ೧೯೫೪ ಪರೀಕ್ಷೆಗಳು (ಶೇ ೦.೨) ಪಾಸಿಟಿವ್ ಬಂದಿದೆ. ಕುಂಭಮೇಳಕ್ಕೆ ೧೬೦೦೦ ಪೊಲೀಸರನ್ನು ನಿಯೋಜಿಸಲಾಗಿತ್ತು. ಏಪ್ರಿಲ್ ೩೦ ರ ಹೊತ್ತಿಗೆ, ಅವರಲ್ಲಿ ಕೇವಲ ೮೮ ಅಂದರೆ ಶೇಕಡಾ ೦.೫ ರಷ್ಟು ಮಾತ್ರ ಪೊಲೀಸರಿಗೆ ಕೊರೊನಾದ ಸೋಂಕು ತಗಲಿತ್ತು. ಏಪ್ರಿಲ್ ೧ ರಿಂದ ಏಪ್ರಿಲ್ ೩೦ ರ ಅವಧಿಯಲ್ಲಿ ೫೫ ಲಕ್ಷ ೫೫ ಸಾವಿರ ೮೯೩ ಉದ್ಯೋಗಿಗಳ ಮೂಗು/ಗಂಟಲಿನ ದ್ರವವನ್ನು (ಸ್ವಾಬ್) ಪಡೆಯಲಾಗಿದ್ದು, ಈ ಪೈಕಿ ೧೭ ಸಾವಿರ ೩೩೩ ಮಂದಿ ಪಾಸಿಟಿವ್ ಆಗಿದ್ದರು. ಆದ್ದರಿಂದ ಹರಿದ್ವಾರ ಕುಂಭಮೇಳದಿಂದ ದೇಶದಲ್ಲಿ ಕೊರೊನಾದ ಸೋಂಕು ಹೆಚ್ಚಾಗಿದೆ ಎಂದು ಹೇಳಲು ಸಾಧ್ಯವಿಲ್ಲ, ಎಂಬ ಮಾಹಿತಿಯನ್ನು ಕುಂಭಮೇಳದ ಸುರಕ್ಷತೆಯ ಹೊಣೆ ಹೊತ್ತಿರುವ ಪೊಲೀಸ್ ಇನ್ಸ್‌ಪೆಕ್ಟರ್ ಸಂಜಯ ಗುಂಜಯಾಲರು ತಿಳಿಸಿದ್ದಾರೆ.

ಸಂಜಯ ಗುಂಜಯಾಲ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಏಪ್ರಿಲ್ ೧ ರಂದು ಕುಂಭಮೇಳ ಪ್ರಾರಂಭವಾದಾಗ ಮಹಾರಾಷ್ಟ್ರ ಮತ್ತು ಹರಿಯಾಣದಂತಹ ರಾಜ್ಯಗಳಲ್ಲಿ ಕೊರೋನಾದ ಎರಡನೇ ಅಲೆ ಬಂದಿದ್ದರಿಂದ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲಿತ್ತ್ತು. ಹರಿದ್ವಾರ ಜಿಲ್ಲೆಯಲ್ಲಿ ಜನವರಿ ೧ ರಿಂದ ಎಪ್ರಿಲ್ ೩೦ ಕುಂಭಮೇಳ ಮುಗಿಯುವ ತನಕದ ಕೊರೊನಾ ರೋಗಿಗಳ ಮಾಹಿತಿಯನ್ನು ನೋಡಿದರೆ, ಕೊರೊನಾ ಹೆಚ್ಚಾಗಲು ಕುಂಭಮೇಳ ಕಾರಣ ಎಂದು ಹೇಳುವ ಪ್ರಯತ್ನ ಅಯೋಗ್ಯವಾಗಿದೆ ಎಂಬುದು ಗಮನಕ್ಕೆ ಬರುತ್ತದೆ ಎಂದಿದ್ದಾರೆ