‘ಫಿಜಿಯೋಥೆರಪಿಸ್ಟ್’ಗಳು ಇನ್ನು ಮುಂದೆ ತಮ್ಮ ಹೆಸರಿನ ಮುಂದೆ ‘ಡಾಕ್ಟರ್’ ಎಂದು ಸೇರಿಸಬಹುದು ! Physiotherapists Kerala High Court Order
‘ಫಿಜಿಯೋಥೆರಪಿ’ ಎಂಬುದು ಒಂದು ವೈಜ್ಞಾನಿಕ ಮತ್ತು ಪುರಾವೆ ಆಧಾರಿತ ಚಿಕಿತ್ಸಾ ಪದ್ಧತಿಯಾಗಿದೆ. ಆದ್ದರಿಂದ ಈ ಕ್ಷೇತ್ರದ ತಜ್ಞರಿಗೆ ಪೂರ್ಣ ಸ್ವಾಯತ್ತತೆಯಿಂದ ಕೆಲಸ ಮಾಡುವ ಅಧಿಕಾರವಿದೆ ಎಂದು ಹೇಳುತ್ತಾ, ಕೇರಳ ಉಚ್ಚ ನ್ಯಾಯಾಲಯವು ಅರ್ಹ ಫಿಜಿಯೋಥೆರಪಿಸ್ಟ್ ಗಳಿಗೆ ತಮ್ಮ ಹೆಸರಿನ ಮುಂದೆ ‘ಡಾಕ್ಟರ್’ ಎಂದು ಸೇರಿಸಿಕೊಳ್ಳಲು ಅನುಮತಿ ನೀಡಿದೆ.