
ಕೋಲಕಾತಾ (ಬಂಗಾಳ) – ಬಂಗಾಳದಲ್ಲಿ ಆಡಳಿತ ಬದಲಾವಣೆಯಾದ ನಂತರ, ಸಾರ್ವಜನಿಕರು ತೃಣಮೂಲ ಕಾಂಗ್ರೆಸ್‌ನ ಭ್ರಷ್ಟ ನಾಯಕರಿಂದ ತಾವು ನೀಡಿದ್ದ ಹಣವನ್ನು ಮರಳಿ ಕೇಳಲು ಪ್ರಾರಂಭಿಸಿದ್ದಾರೆ. ಈ ನಾಯಕರು ಸರಕಾರಿ ಯೋಜನೆಗಳ ಲಾಭ ಕೊಡಿಸಲು ಜನರಿಂದ ಲಂಚ ಪಡೆದಿದ್ದರು. ಸಾರ್ವಜನಿಕರ ಆಕ್ರೋಶದ ನಂತರ ಹಲವು ನಾಯಕರು ಹಣವನ್ನು ಹಿಂತಿರುಗಿಸಲು ಆರಂಭಿಸಿದ್ದಾರೆ. ಕೂಚ್ ಬೆಹಾರ್‌ನ ಘುಘುಮಾರಿ ಪ್ರದೇಶದಲ್ಲಿ ತೃಣಮೂಲದ ಸ್ಥಳೀಯ ನಾಯಕರು ಧ್ವನಿವರ್ಧಕಗಳ (ಮೈಕ್) ಮೂಲಕ ಘೋಷಣೆ ಮಾಡಿ ಜನರಿಗೆ ಹಣ ಮರಳಿ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಚ್ ಬೆಹಾರ್‌ನ ಮಾತಾಭಂಗಾ ನಗರದ ಸುಭಾಷಪಲ್ಲಿ ಪ್ರದೇಶದಲ್ಲಿ ವಸತಿ ಯೋಜನೆಯ 14 ಫಲಾನುಭವಿಗಳಿಂದ ಪಡೆದಿದ್ದ ಲಂಚದ ಹಣವನ್ನು ಮರಳಿ ನೀಡಲಾಗಿದೆ. ಹಣ ವಾಪಸ್ ಸಿಕ್ಕ ನಂತರ ಕೆಲವು ಫಲಾನುಭವಿಗಳು ಸ್ಥಳೀಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿದರು.
1. ಕೂಚ್ ಬೆಹಾರ್‌ನ ಫಕೀರೇರ್ ಕುಠಿಯ ಶಾಲಾ ಮೈದಾನದಲ್ಲಿ ತೃಣಮೂಲದ ಪಚಗಢ್ ಗ್ರಾಮ ಪಂಚಾಯಿತಿಯ ಬೂತ್ ಅಧ್ಯಕ್ಷ ತಪನ್ ಡೇ ಅವರು ಖುದ್ದಾಗಿ ಗ್ರಾಮಸ್ಥರಿಗೆ ಹಣ ಹಿಂತಿರುಗಿಸಿದ್ದಾರೆ.
2. ದಕ್ಷಿಣ 24 ಪರಗಣದ ನಾಮಖಾನಾದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಹೆಸರಿನಲ್ಲಿ ಗ್ರಾಮಸ್ಥರಿಂದ ಪಡೆದಿದ್ದ ತಲಾ 5,೦೦೦ ರೂಪಾಯಿಗಳನ್ನು ವಾಪಸ್ ಮಾಡಲಾಗಿದೆ.
3. ನಾಮಖಾನಾದ ಶಿಬರಾಮ್‌ಪುರ ಗ್ರಾಮ ಪಂಚಾಯಿತಿ ಸದಸ್ಯ ಮಾಧವ್ ಚಂದ್ರ ಲಾಯಾ ಅವರು, ‘ಯಾವುದೇ ಒತ್ತಡವಿಲ್ಲದೆ ತಾವಾಗಿಯೇ 45 ಗ್ರಾಮಸ್ಥರಿಗೆ ಹಣ ಹಿಂತಿರುಗಿಸಿರುವುದಾಗಿ’ ಹೇಳಿಕೊಂಡಿದ್ದಾರೆ. ಈ ಹಣವನ್ನು ಪಕ್ಷದ ಒತ್ತಡದ ಮೇರೆಗೆ ತೆಗೆದುಕೊಳ್ಳಲಾಗಿತ್ತು ಮತ್ತು ಇದರಲ್ಲಿ ಹಿರಿಯ ಪಂಚಾಯತ್ ಅಧಿಕಾರಿಗಳು ಹಾಗೂ ತೃಣಮೂಲ ಕಾಂಗ್ರೆಸ್ ನಾಯಕರು ಶಾಮೀಲಾಗಿದ್ದರು; ಆದರೆ ಈ ವಿಷಯದಲ್ಲಿ ಇದುವರೆಗೆ ಯಾವುದೇ ಅಧಿಕೃತ ಪೊಲೀಸ್ ದೂರು ದಾಖಲಾಗಿಲ್ಲ. ಗ್ರಾಮ ಪಂಚಾಯಿತಿ ಸದಸ್ಯ ಮಾಧವ್ ಚಂದ್ರ ಲಾಯಾ ಅವರು ಹಣ ಹಿಂತಿರುಗಿಸಿದ ನಂತರ ಜನರ ಕ್ಷಮೆಯಾಚಿಸಿದ್ದಾರೆ.
4. ಲಂಚ ಪಡೆಯುವುದು, ಸರಕಾರಿ ಹಣದ ದುರುಪಯೋಗ ಮತ್ತು ಆರ್ಥಿಕ ಅಕ್ರಮಗಳ ತನಿಖೆಗಾಗಿ ರಾಜ್ಯ ಸರಕಾರವು ‘ಇನ್‌ಸ್ಟಿಟ್ಯೂಷನಲ್ ಕಮಿಷನ್’ (ಸಾಂಸ್ಥಿಕ ಆಯೋಗ) ಅನ್ನು ಸ್ಥಾಪಿಸಿದೆ. ನಿವೃತ್ತ ನ್ಯಾಯಾಧೀಶ ವಿಶ್ವಜಿತ್ ಬಸು ಅವರು ಈ ಆಯೋಗದ ಅಧ್ಯಕ್ಷರಾಗಿರುತ್ತಾರೆ. ಆಯೋಗದ ಕಾರ್ಯಕಲಾಪಗಳು ಪ್ರಾರಂಭವಾದ ನಂತರ ಸಾರ್ವಜನಿಕರು ನೇರವಾಗಿ ದೂರುಗಳನ್ನು ದಾಖಲಿಸಬಹುದೆಂದು ಸರಕಾರ ನಿರೀಕ್ಷಿಸಿದೆ.
ಮಹಿಳೆಯರ ‘ಲಕ್ಷ್ಮಿ ಭಂಡಾರ್ ಯೋಜನೆ’ಯಲ್ಲಿ 173 ಪುರುಷರು!
ನಾದಿಯಾ ಜಿಲ್ಲೆಯ ಧುಬುಲಿಯಾದಲ್ಲಿ ಮಹಿಳೆಯರಿಗಾಗಿ ಜಾರಿಗೊಳಿಸಲಾಗಿರುವ ಲಕ್ಷ್ಮಿ ಭಂಡಾರ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ 173 ಪುರುಷರ ಹೆಸರುಗಳು ಪತ್ತೆಯಾಗಿವೆ. ಫೆಬ್ರವರಿಯಿಂದ ಇದುವರೆಗೆ ಈ ಖಾತೆಗಳಿಂದ ಹಣವನ್ನೂ ಹಿಂಪಡೆಯಲಾಗಿದೆ. ತನಿಖೆಯ ನಂತರ ಈ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀಕಾಂತ್ ಪಲ್ಲಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು, ಲಕ್ಷ್ಮಿ ಭಂಡಾರ್ ಯೋಜನೆಯ ಅಂದಾಜು 2 ಕೋಟಿ 20 ಲಕ್ಷ ಫಲಾನುಭವಿಗಳ ಪೈಕಿ ಸುಮಾರು 30 ಲಕ್ಷ ಫಲಾನುಭವಿಗಳು ನಕಲಿ ಇರಬಹುದೆಂದು ತಿಳಿಸಿದರು, ಇದರ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಲಂಚ ತೆಗೆದುಕೊಂಡ ಗ್ರಾಮ ಉಪಪ್ರಧಾನನ ಬಂಧನ!
ಮುರ್ಷಿದಾಬಾದ್‌ನ ನೂತನ ಗ್ರಾಮದಲ್ಲಿ ಬಾಂಗ್ಲಾರ್ ಆವಾಸ್ ಯೋಜನೆಯಡಿ ಲಂಚ ಪಡೆದ ಆರೋಪದ ಮೇಲೆ ಗ್ರಾಮ ಉಪಪ್ರಧಾನ ಸಿರಾಜುಲ್ ಶೇಖ್ ವಿರುದ್ಧ ಗ್ರಾಮಸ್ಥರು ದೂರು ದಾಖಲಿಸಿದ್ದಾರೆ. ಇದಾದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮನೆ ಕೊಡಿಸುವ ಹೆಸರಿನಲ್ಲಿ 5 ಸಾವಿರದಿಂದ 15 ಸಾವಿರ ರೂಪಾಯಿಗಳವರೆಗೆ ಹಣ ಪಡೆಯಲಾಗುತ್ತಿತ್ತು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ