ಮಧ್ಯಪ್ರದೇಶದಲ್ಲಿರುವ ಈ ವಿಶ್ವವಿದ್ಯಾಲಯದ ಕಾರ್ಯಕಾರಿ ಪರಿಷತ್ತಿನಿಂದ ಪ್ರಸ್ತಾವನೆಗೆ ಅಂಗೀಕಾರ
ವಿಧೇಯಕವನ್ನು ಸಿದ್ಧಪಡಿಸಲು ಸರಕಾರ ಮತ್ತು ರಾಜ್ಯಪಾಲರ ಕಡೆಗೆ ಕಳುಹಿಸಲಿರುವ ವಿಶ್ವವಿದ್ಯಾಲಯದ ಪ್ರಸ್ತಾವನೆ

ಭೋಪಾಲ (ಮಧ್ಯಪ್ರದೇಶ) – ಇಲ್ಲಿನ ‘ಬರಕತ ಉಲ್ಲಾ ವಿಶ್ವವಿದ್ಯಾಲಯ’ದ ಹೆಸರನ್ನು ಬದಲಾಯಿಸಬೇಕೆಂದು ಅನೇಕ ವರ್ಷಗಳಿಂದ ಹಿಂದೂ ಸಂಘಟನೆಗಳು ಒತ್ತಾಯಿಸುತ್ತಿದ್ದವು. ಈಗ ಈ ವಿಶ್ವವಿದ್ಯಾಲಯದ ಕಾರ್ಯಕಾರಿ ಪರಿಷತ್ತಿನು ವಿಶ್ವವಿದ್ಯಾಲಯದ ಹೆಸರನ್ನು ಬದಲಾಯಿಸಿ, ಅದನ್ನು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ನಾಮಕರಣ ಮಾಡುವ ಪ್ರಸ್ತಾವನೆಯನ್ನು ಅಂಗೀಕರಿಸಿದೆ. ಈ ಪ್ರಸ್ತಾವನೆಯನ್ನು ಈಗ ರಾಜ್ಯದ ಉನ್ನತ ಶಿಕ್ಷಣ ಇಲಾಖೆಗೆ ಮತ್ತು ನಂತರ ಸರಕಾರಕ್ಕೆ ಕಳುಹಿಸಲಾಗುವುದು. ವಿಧಾನಮಂಡಲದಲ್ಲಿ ಈ ನಾಮಕರಣದ ಕುರಿತು ವಿಧೇಯಕವನ್ನು ಮಂಡಿಸಿ ಅದನ್ನು ಅಂಗೀಕರಿಸಿದ ನಂತರ, ರಾಜ್ಯಪಾಲರಿಂದ ನಾಮಕರಣವು ಅಂತಿಮಗೊಳ್ಳಲಿದೆ.
ಪರಿಷತ್ತಿನ ಸಭೆಯಲ್ಲಿ, ರಾಜಾ ಭೋಜ ಅವರ ಹೆಸರು ರಾಜ್ಯದ ಐತಿಹಾಸಿಕ ಮತ್ತು ಬೌದ್ಧಿಕ ಪರಂಪರೆಯ ಸಂಕೇತವಾಗಿದೆ ಎಂದು ವಾದಿಸಲಾಯಿತು. ವಿಶ್ವವಿದ್ಯಾಲಯದ ಕಾರ್ಯಕಾರಿ ಪರಿಷತ್ತಿನ ಸದಸ್ಯರಾದ ಡಾ. ತಾಹಿರಾ ಅಬ್ಬಾಸಿ ಅವರು ಈ ನಿರ್ಧಾರವನ್ನು ವಿರೋಧಿಸಿ, ವಿಶ್ವವಿದ್ಯಾಲಯದ ಪ್ರಸ್ತುತ ಹೆಸರು ಸ್ವಾತಂತ್ರ್ಯ ಹೋರಾಟಗಾರ ಬರಕತ ಉಲ್ಲಾ ಭೋಪಾಲಿ ಅವರ ಸ್ಮರಣೆಯೊಂದಿಗೆ ಜೋಡಿಸಲ್ಪಟ್ಟಿದೆ. ಅದನ್ನು ಬದಲಾಯಿಸುವುದು ಸರಿಯಲ್ಲ ಎಂದು ಹೇಳಿದರು. (ಮುಸಲ್ಮಾನರು ಎಲ್ಲೇ ಹೋದರೂ ಮತ್ತು ಯಾವುದೇ ಹುದ್ದೆಯಲ್ಲಿದ್ದರೂ, ಅವರು ಮೊದಲು ಮುಸಲ್ಮಾನರಾಗಿರುತ್ತಾರೆ ಎಂದು ಹೇಳುವುದಕ್ಕೆ ಇದೊಂದು ಉದಾಹರಣೆ! – ಸಂಪಾದಕರು)
ಕಾಂಗ್ರೆಸ್ ನ ಮುಸಲ್ಮಾನ್ ಪ್ರೇಮದ ಅಂತ್ಯ! – ಭಾಜಪ
ಭಾಜಪದ ರಾಜ್ಯ ಉಪಾಧ್ಯಕ್ಷ ಸುರೇಂದ್ರ ಶರ್ಮಾ ಶಿವಪುರಿ ಅವರು ವ್ಯಂಗ್ಯವಾಗಿ ಮಾತನಾಡುತ್ತಾ, 1988 ರಲ್ಲಿ ಕಾಂಗ್ರೆಸ್ಸಿನ ಅಂದಿನ ಮುಖ್ಯಮಂತ್ರಿ ಅರ್ಜುನ ಸಿಂಗ್ ಅವರು ಮಾಡಿದ್ದ ಓಲೈಕೆ ರಾಜಕಾರಣಕ್ಕೆ ಈ ನಾಮಕರಣದ ಮಾಧ್ಯಮದಿಂದ ಅಂತ್ಯ ಹಾಡಲಾಗುವುದು ಎಂದು ಹೇಳಿದ್ದಾರೆ.
ಹಿಂದೂ ಸಂಘಟನೆಗಳಿಂದ ಆನಂದ ವ್ಯಕ್ತ!
ಈ ವಿಷಯದಲ್ಲಿ ‘ಶ್ರೀ ಹಿಂದೂ ಉತ್ಸವ ಸಮಿತಿ’ ಮತ್ತು ‘ಸಂಸ್ಕೃತಿ ಬಚಾವೋ ಮಂಚ್’ ಆನಂದವನ್ನು ವ್ಯಕ್ತಪಡಿಸಿವೆ. ಸಮಿತಿಯ ಅಧ್ಯಕ್ಷ ಚಂದ್ರಶೇಖರ ತಿವಾರಿ ಅವರು ಮಾತನಾಡಿ, ”ಈ ಬೇಡಿಕೆಯನ್ನು ಬಹಳ ದಿನಗಳಿಂದ ಮಾಡಲಾಗುತ್ತಿತ್ತು. ಅದು ಈಗ ಈಡೇರುತ್ತಿರುವುದು ಕಾಣಿಸುತ್ತಿದೆ. ರಾಜ್ಯದಲ್ಲಿ ಇನ್ನು ಅನೇಕ ಸ್ಥಳಗಳ ಹೆಸರುಗಳು ಹೀಗೆಯೇ ಇವೆ, ಅವುಗಳನ್ನು ಬದಲಾಯಿಸಿ ದೇಶಭಕ್ತರು ಮತ್ತು ಕ್ರಾಂತಿಕಾರಿಗಳ ಹೆಸರನ್ನು ಇಡಬೇಕು ಎಂದರು.
ವಿಶ್ವವಿದ್ಯಾಲಯದ ಶೈಕ್ಷಣಿಕ ರಚನೆಯಲ್ಲೂ ಬದಲಾವಣೆ!
ಕೇವಲ ಹೆಸರು ಮಾತ್ರವಲ್ಲದೆ, ವಿಶ್ವವಿದ್ಯಾಲಯದ ಶೈಕ್ಷಣಿಕ ರಚನೆಯಲ್ಲೂ ಬದಲಾವಣೆಗಳನ್ನು ನಿಶ್ಚಿತಗೊಳಿಸಲಾಗಿದೆ. ಅರಬ್ಬಿ ಮತ್ತು ಪರ್ಷಿಯನ್ ನಂತಹ ಸಾಂಪ್ರದಾಯಿಕ ವಿಷಯಗಳನ್ನು ಒಟ್ಟುಗೂಡಿಸಿ ‘ತುಲನಾತ್ಮಕ ಭಾಷೆ ಮತ್ತು ಸಂಸ್ಕೃತಿ ಇಲಾಖೆ’ ಎಂದು ಮರುರಚನೆ ಮಾಡಲಾಗುವುದು.
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ