
ನವ ದೆಹಲಿ – ನೇಪಾಳವು ಭಾರತದ ಭೂಮಿಯನ್ನು ವಶಪಡಿಸಿಕೊಂಡಿದೆ ಎಂದು ನೇಪಾಳದ ಪ್ರಧಾನಿ ಬಾಲೆನ್ ಶಾ ಸಂಸತ್ತಿನಲ್ಲಿ ಹೇಳಿದ್ದರು. ಅಲ್ಲದೆ ಈ ಸಂದರ್ಭದಲ್ಲಿ ಬ್ರಿಟನ್ ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು, ಗಡಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಕುರಿತು ಚರ್ಚಿಸಲು ಮತ್ತು ಪರಿಹರಿಸಲು ಭಾರತ ಮತ್ತು ನೇಪಾಳದ ನಡುವೆ ಈಗಾಗಲೇ ದ್ವಿಪಕ್ಷೀಯ ವ್ಯವಸ್ಥೆಗಳು ಅಸ್ತಿತ್ವದಲ್ಲಿವೆ ಎಂದು ಹೇಳಿದ್ದಾರೆ. ಗಡಿಯ ಪ್ರಶ್ನೆಯು ಉಭಯ ದೇಶಗಳ ನಡುವಿನ ವಿಷಯವಾಗಿದ್ದು, ಇದರಲ್ಲಿ ಯಾವುದೇ ಮೂರನೇ ಪಕ್ಷದ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
#WATCH | Delhi | MEA Spokesperson Randhir Jaiswal says, “We have seen the remarks of the Prime Minister of Nepal concerning India India-Nepal boundary as well as the subsequent statement made by the Nepali foreign office on this matter. While close to 98% of the India-Nepali… pic.twitter.com/9JmA7cUk3f
— ANI (@ANI) June 2, 2026
ಜೈಸ್ವಾಲ್ ಅವರು ಮುಂದುವರಿದು ಮಾತನಾಡಿ, ಉಭಯ ದೇಶಗಳ ನಡುವಿನ ಸುಮಾರು ೯೮% ರಷ್ಟು ಗಡಿಯನ್ನು ಈಗಾಗಲೇ ನಿರ್ಧರಿಸಲಾಗಿದೆ; ಆದರೆ ಕೆಲವು ಭಾಗಗಳ ಕುರಿತು ಇನ್ನೂ ಒಮ್ಮತಕ್ಕೆ ಬರಬೇಕಾಗಿರುವುದು ಬಾಕಿ ಇದೆ. ಗಂಡಕ್ ನದಿಯು ತನ್ನ ಹರಿವಿನ ಮಾರ್ಗವನ್ನು ಬದಲಾಯಿಸಿರುವುದರಿಂದ ಕೆಲವು ಪ್ರದೇಶಗಳಲ್ಲಿ ಗಡಿಗೆ ಸಂಬಂಧಿಸಿದ ಪ್ರಶ್ನೆಗಳು ಉದ್ಭವಿಸಿವೆ. ಇದಲ್ಲದೆ ಕೆಲವು ಸ್ಥಳಗಳಲ್ಲಿ ಗಡಿ ನಿಯಮ ಉಲ್ಲಂಘಿಸಿ ಒತ್ತುವರಿ ಮಾಡಿಕೊಂಡಿರುವುದು ಮತ್ತು ‘ನೋ-ಮ್ಯಾನ್ಸ್ ಲ್ಯಾಂಡ್’ (ಯಾವುದೇ ವ್ಯಕ್ತಿಯ ಅಥವಾ ದೇಶದ ಮಾಲೀಕತ್ವದಲ್ಲಿ ಇಲ್ಲದ ಅಥವಾ ಎರಡು ಗಡಿಗಳ ನಡುವಿನ ತಟಸ್ಥ ಪ್ರದೇಶ) ಮೇಲಿನ ಒತ್ತುವರಿಯ ಪ್ರಕರಣಗಳೂ ಇವೆ, ಇವುಗಳನ್ನು ಉಭಯ ದೇಶಗಳು ಜೊತೆಯಾಗಿ ‘ಮ್ಯಾಪಿಂಗ್’ (ಭೂಮಿಯ ನಿಖರವಾದ ಗಡಿ, ವಿಸ್ತೀರ್ಣ, ಸ್ಥಾನ ಮತ್ತು ಭೌಗೋಳಿಕ ಲಕ್ಷಣಗಳನ್ನು ನಕ್ಷೆಯಲ್ಲಿ ಅಥವಾ ಡಿಜಿಟಲ್ ರೂಪದಲ್ಲಿ ದಾಖಲಿಸುವ ಪ್ರಕ್ರಿಯೆ) ಮಾಡುತ್ತಿವೆ ಎಂದು ಹೇಳಿದರು.
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !