ಆಹಾರ ಮತ್ತು ಔಷಧ ಆಡಳಿತದ ರಾಜ್ಯವ್ಯಾಪಿ ಅಭಿಯಾನ
102 ಜನರ ಬಂಧನ, 86 ಸಂಸ್ಥೆಗಳು ಬಂದ್
ಆಹಾರ ಪದಾರ್ಥಗಳ ಗುಣಮಟ್ಟದ ಕುರಿತು ದೂರು ದಾಖಲಿಸಲು ಟೋಲ್-ಫ್ರೀ ಸಂಖ್ಯೆ ಘೋಷಣೆ

ಮುಂಬಯಿ – ರಾಜ್ಯದಲ್ಲಿ ನಿಷೇಧಿತ ಪಾನ್ ಮಸಾಲಾ, ಗುಟ್ಕಾ, ಕಲಬೆರಕೆ ಆಹಾರ ಪದಾರ್ಥಗಳ ವಿರುದ್ಧ ಆಹಾರ ಮತ್ತು ಔಷಧ ಆಡಳಿತವು ರಾಜ್ಯಾದ್ಯಂತ 7 ದಿನಗಳ ಮಿಂಚಿನ ಕಾರ್ಯಾಚರಣೆ ನಡೆಸಿ 1 ಕೋಟಿ 58 ಲಕ್ಷ 28 ಸಾವಿರ 677 ರೂಪಾಯಿ ಮೌಲ್ಯದ ದಾಸ್ತಾನನ್ನು ವಶಪಡಿಸಿಕೊಂಡಿದೆ ಮತ್ತು 102 ಜನರನ್ನು ಬಂಧಿಸಿದೆ. ಒಟ್ಟು 203 ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಹಾಗೆಯೇ 86 ಸಂಸ್ಥೆಗಳಿಗೆ ಬೀಗ ಹಾಕಲಾಗಿದೆ. (ಈ ಸಂಸ್ಥೆಗಳ ಬಗ್ಗೆ ಯಾರಿಗೂ ಏನೂ ತಿಳಿದಿರಲಿಲ್ಲ ಎಂದು ಹೇಳುವುದು ಧೈರ್ಯದ ಕೆಲಸವೇ ಸರಿ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೇ? – ಸಂಪಾದಕರು)
ಆಹಾರ ಮತ್ತು ಔಷಧ ಆಡಳಿತದ ‘ಸೇಫ್ ಫುಡ್, ಸೇಫ್ ಡ್ರಗ್, ಸೇಫ್ ಮಹಾರಾಷ್ಟ್ರ’ (ಸುರಕ್ಷಿತ ಆಹಾರ, ಸುರಕ್ಷಿತ ಔಷಧಗಳು ಮತ್ತು ಸುರಕ್ಷಿತ ಮಹಾರಾಷ್ಟ್ರ) ಎಂಬ ಪರಿಕಲ್ಪನೆಯಡಿಯಲ್ಲಿ ರಾಜ್ಯಾದ್ಯಂತ ಕಲಬೆರಕೆ, ಅಶುಚಿ ಆಹಾರ ಉತ್ಪಾದಕರು ಮತ್ತು ನಿಯಮ ಉಲ್ಲಂಘಿಸುವ ಆಹಾರ ಉದ್ಯಮಿಗಳ ವಿರುದ್ಧ ವಿಶೇಷ ಅಭಿಯಾನವನ್ನು ನಡೆಸಲಾಯಿತು. ಕಲಬೆರಕೆ ಪದಾರ್ಥಗಳಲ್ಲಿ ಮಾವಿನಹಣ್ಣು, ಬೂಂದಿ ಲಾಡು, ಖೋವಾ, ಬೇಕರಿ ಪದಾರ್ಥಗಳು, ಕ್ಯಾಂಡಿ, ಹಾಲು ಮತ್ತು ಹಾಲಿನ ಉತ್ಪನ್ನಗಳು, ಬೆಲ್ಲ, ಖಾದ್ಯ ತೈಲ, ತುಪ್ಪ, ಖರ್ಜೂರ, ಐಸ್ ಕ್ರೀಮ್, ಕುಲ್ಫಿ, ಫ್ರೋಜನ್ ಡೆಸರ್ಟ್, ಮಸಾಲೆಗಳು, ಶೇಂಗಾ ಚಿಕ್ಕಿ, ಹಾಗೂ ಕಲಬೆರಕೆಗಾಗಿ ಬಳಸಲಾಗುವ ಪದಾರ್ಥಗಳು ಸೇರಿದ್ದವು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!