ಅಬು ಅಜ್ಮಿ ಅವರ ಹಿಂದೂದ್ವೇಷದ ವಿಷ ಕಾರುವಿಕೆ !

ಮುಂಬಯಿ – ಜಿಹಾದ್ ಅತ್ಯಂತ ಗೌರವಾನ್ವಿತ ಶಬ್ದವಾಗಿದ್ದು, ಹೋರಾಟಕ್ಕೆ ‘ಜಿಹಾದ್’ ಎನ್ನಲಾಗುತ್ತದೆ. ‘ಲವ್ ಜಿಹಾದ್’, ‘ಲ್ಯಾಂಡ್ (ಭೂಮಿ) ಜಿಹಾದ್’, ಇವೆಲ್ಲವೂ ಮೂರ್ಖತನದ ಪ್ರಕಾರಗಳಾಗಿವೆ. ‘ಲ್ಯಾಂಡ್ ಜಿಹಾದ್’ ಎಂಬ ಶಬ್ದ ಕಾಲ್ಪನಿಕವಾಗಿದೆ. ಹಿಂದೂ-ಮುಸ್ಲಿಂ ವಿವಾಹಗಳು ಹಳೆಯ ಕಾಲದಿಂದಲೂ ನಡೆಯುತ್ತಿದ್ದು, ಇದರಲ್ಲಿ ಕೇವಲ ಪ್ರೀತಿ ಇರುತ್ತದೆ. ಭಾರತದಲ್ಲಿ ಯಾವುದೇ ಮುಸ್ಲಿಂ ಸಂಘಟನೆಯು ಹಿಂದೂ ಹುಡುಗಿಯರನ್ನು ವಂಚಿಸಿ ಕರೆತರಲು ಹೇಳುವುದಿಲ್ಲ, ಬದಲಿಗೆ ಹಿಂದೂ ಸಂಘಟನೆಗಳೇ ಇದಕ್ಕಾಗಿ ಹಣ ನೀಡುತ್ತವೆ ಎಂದು ಅತ್ಯಂತ ಹಾಸ್ಯಾಸ್ಪದ ಮತ್ತು ವಾಸ್ತವವನ್ನು ಕಣ್ಣುಮುಚ್ಚಿ ನಿರಾಕರಿಸುವ ಹೇಳಿಕೆಯನ್ನು ಸಮಾಜವಾದಿ ಪಕ್ಷದ ಶಾಸಕ ಅಬು ಅಜ್ಮಿ ನೀಡಿದ್ದಾರೆ. ಅದರ ಬದಲು ಅವರು ಹಿಂದೂ ಸಂಘಟನೆಗಳ ಮೇಲೆಯೇ ಮುಸ್ಲಿಂ ಹುಡುಗಿಯರಿಗೆ ಆಮಿಷ ಒಡ್ಡಿ ಮದುವೆ ಮಾಡಿಸುತ್ತಿದ್ದಾರೆ ಎಂದು ಉದ್ದೇಶಪೂರ್ವಕವಾಗಿ ಆರೋಪಿಸಿದ್ದಾರೆ.
ಅವರು, ನಮ್ಮ ದೇಶದ ಸಂವಿಧಾನವು 18 ವರ್ಷಗಳ ನಂತರ ವ್ಯಕ್ತಿಯು ಸ್ವತಂತ್ರನಾಗಿರುತ್ತಾನೆ, ಅವನು ಯಾವುದೇ ಧರ್ಮಕ್ಕೆ ಹೋಗಬಹುದು ಮತ್ತು ತನಗೆ ಇಷ್ಟಬಂದವರೊಂದಿಗೆ ವಿವಾಹವಾಗಬಹುದು ಎಂದು ಹೇಳುತ್ತದೆ; ಆದರೆ ಈಗ ಮಾತ್ರ ಉದ್ದೇಶಪೂರ್ವಕವಾಗಿ ಗುರಿ ಮಾಡಲಾಗುತ್ತಿದೆ ಎಂದರು. (ಸಂವಿಧಾನದ ಹೆಸರಿನಲ್ಲಿ ಸ್ವಂತ ಸ್ವಾರ್ಥಕ್ಕಾಗಿ ಹಿಂದೂಗಳ ಹೆಣ್ಣುಮಕ್ಕಳು ಮತ್ತು ಭೂಮಿಯನ್ನು ಅಪಾಯಕ್ಕೆ ಸಿಲುಕಿಸುವ ಜಿಹಾದಿ ಕೃತ್ಯಗಳನ್ನು ಬೆಂಬಲಿಸುವುದು ಅಬು ಅಜ್ಮಿ ಅವರಂತಹ ನಾಯಕರ ಹಳೆಯ ನೀತಿಯೇ ಆಗಿದೆ ! – ಸಂಪಾದಕರು)
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!