ಪ್ರಸ್ತಾವನೆಯನ್ನು ರದ್ದುಗೊಳಿಸುವ ಅಧಿಕಾರ ಟ್ರಂಪ್ ಅವರಿಗಿದೆ

ವಾಷಿಂಗ್ಟನ್ (ಅಮೆರಿಕ) – ಇರಾನ್ ವಿರುದ್ಧದ ಯುದ್ಧವನ್ನು ನಿಲ್ಲಿಸುವ ಕುರಿತಾದ ಪ್ರಸ್ತಾವನೆಯನ್ನು ಅಮೆರಿಕದ ಸಂಸತ್ತಿನ ‘ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’ ಸಭೆಯಲ್ಲಿ ಅಂಗೀಕರಿಸಲಾಗಿದೆ. ಸಭೆಯಲ್ಲಿ 215 ರ ವಿರುದ್ಧ 208 ಮತಗಳಿಂದ ಈ ಪ್ರಸ್ತಾವನೆಯು ಅಂಗೀಕಾರಗೊಂಡಿತು. ಅಂದರೆ ಪ್ರಸ್ತಾವನೆಯ ಪರವಾಗಿ 215 ಮತ್ತು ವಿರೋಧವಾಗಿ 208 ಮತಗಳು ಚಲಾವಣೆಯಾದವು. ವಿಶೇಷವೆಂದರೆ, ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ 4 ಸದಸ್ಯರು ಡೆಮಾಕ್ರಾಟ್ಸ್ ಪಕ್ಷದ ಪರವಾಗಿ, ಅಂದರೆ ಯುದ್ಧವನ್ನು ನಿಲ್ಲಿಸುವ ನಿರ್ಧಾರದ ಪರವಾಗಿ ಮತ ಚಲಾಯಿಸಿದ್ದಾರೆ ಎಂದು ‘ರಾಯಟರ್ಸ್’ ಸುದ್ದಿ ಸಂಸ್ಥೆಯು ವರದಿ ಮಾಡಿದೆ. ಆದಾಗ್ಯೂ, ಈ ಪ್ರಸ್ತಾವನೆಯನ್ನು ರದ್ದುಗೊಳಿಸುವ ಅಧಿಕಾರ ಡೊನಾಲ್ಡ್ ಟ್ರಂಪ್ ಅವರ ಬಳಿ ಇದೆ ಎಂದು ಹೇಳಲಾಗುತ್ತಿದೆ. ಟ್ರಂಪ್ ಅವರು ತಮ್ಮ ವೀಟೋ (ನಕಾರಾಧಿಕಾರ) ಅಧಿಕಾರವನ್ನು ಬಳಸಿ ಈ ಪ್ರಸ್ತಾವನೆಯನ್ನು ರದ್ದುಗೊಳಿಸಬಹುದು ಎಂದು ಹೇಳಲಾಗುತ್ತಿದೆ.
೧. ಈ ಪ್ರಸ್ತಾವನೆಯಲ್ಲಿ, ಸಂಸತ್ತು ಯುದ್ಧವನ್ನು ಘೋಷಿಸದ ಹೊರತು ಅಥವಾ ಸೈನಿಕ ಬಲದ ಬಳಕೆಗೆ ಅಧಿಕೃತ ಅನುಮತಿಯನ್ನು ನೀಡದ ಹೊರತು, ಟ್ರಂಪ್ ಅವರು ಇರಾನ್ ನಿಂದ ಅಮೆರಿಕದ ಸೈನ್ಯವನ್ನು ಹಿಂಪಡೆಯಬೇಕು ಎಂದು ನಿರ್ದೇಶಿಸಲಾಗಿದೆ.
೨. ಯುದ್ಧಶಕ್ತಿ ಪ್ರಸ್ತಾವನೆ ಅಂಗೀಕಾರವಾಗಿರುವುದು ಒಂದು ಮಹತ್ವದ ಸಂಕೇತವಾಗಿದೆ. ಹೆಚ್ಚಿನ ಸಂಖ್ಯೆಯ ರಿಪಬ್ಲಿಕನ್ ನಾಯಕರು ಮತದಾರರ ಧ್ವನಿಗೆ ಕಿವಿಗೊಡುತ್ತಿದ್ದು, ಅವರಿಗೆ ಕೊಲ್ಲಿ ರಾಷ್ಟ್ರಗಳಲ್ಲಿ ಮತ್ತೊಂದು ಯುದ್ಧ ಬೇಕಾಗಿಲ್ಲ, ಎಂದು ಈ ಯುದ್ಧಶಕ್ತಿ ಪ್ರಸ್ತಾವನೆಯನ್ನು ಮಂಡಿಸಿದ ಪ್ರತಿನಿಧಿ ಗ್ರೆಗೊರಿ ಮೀಕ್ಸ್ ಅವರು ಒಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation