
ಬೆಂಗಳೂರು – ನಗರದ ಪ್ರತಿಷ್ಠಿತ ‘ವೈಟ್‌ಫೀಲ್ಡ್’ ಪ್ರದೇಶದ ಕಟ್ಟಡವೊಂದರಲ್ಲಿ ಬಾಡಿಗೆಗೆ ಇದ್ದು ಓದುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಸೈಬುಲ್ ಎಂಬ ಕಾಮುಕನು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ.
ಈ ವಿದ್ಯಾರ್ಥಿನಿ ಎಂದಿನಂತೆ ಮುಂಜಾನೆ ಚಹಾ ಕುಡಿಯಲು ಕಟ್ಟಡದಿಂದ ಹೊರಗೆ ಬಂದಿದ್ದಳು. ಹತ್ತಿರದಲ್ಲೇ ಇದ್ದ ಚಹಾ ಅಂಗಡಿಯ ಕಡೆಗೆ ಆಕೆ ನಡೆದುಕೊಂಡು ಹೋಗುತ್ತಿದ್ದಳು. ಈ ಸಮಯದಲ್ಲಿ ಸೈಬುಲ್ ಇದ್ದಕ್ಕಿದ್ದಂತೆ ಆಕೆಯ ಮೇಲೆ ದಾಳಿ ಮಾಡಿ, ಆಕೆಯನ್ನು ಎತ್ತಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಯುವತಿ ಜೋರಾಗಿ ಕಿರುಚಾಡಿದಾಗ ಸುತ್ತಮುತ್ತಲಿನ ಜನರು ತಕ್ಷಣ ಸಹಾಯಕ್ಕೆ ಧಾವಿಸಿ ಬಂದಿದ್ದಾರೆ. ಇದನ್ನು ನೋಡಿ ಸೈಬುಲ್ ಓಡಿಹೋಗಿದ್ದಾನೆ. ಘಟನೆಯ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ, ಪೊಲೀಸರು ಕೆಲವೇ ಸಮಯದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಸೈಬುಲ್ ರಸ್ತೆ ಬದಿಯಲ್ಲಿ ಕಸ ಆಯುವ ಕೆಲಸ ಮಾಡುತ್ತಾನೆ ಎಂಬ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram